‘ದಿ ಗರ್ಲ್‌ಫ್ರೆಂಡ್’ಗೆ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ; ಅನು ಎಮ್ಯಾನುಯೆಲ್

ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ದಿ ಗರ್ಲ್‌ಫ್ರೆಂಡ್’ ಚಿತ್ರದಲ್ಲಿ ದುರ್ಗಾ ಪಾತ್ರದ ಮೂಲಕ ಗಮನಸೆಳೆದ ನಟಿ ಅನು ಎಮ್ಯಾನುಯೆಲ್, ಈ ಪಾತ್ರವು ತಮ್ಮ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನ ಪಡೆದಿರುತ್ತದೆ ಎಂದು ಹೇಳಿದ್ದಾರೆ. ಚಿತ್ರದ ಬಿಡುಗಡೆ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡ ಅನು ಎಮ್ಯಾನುಯೆಲ್ ಬರೆದಿದ್ದಾರೆ – “‘ದಿ ಗರ್ಲ್‌ಫ್ರೆಂಡ್’ ಚಿತ್ರವು ನನ್ನ ಮನದಾಳದಲ್ಲಿ ಸದಾಕಾಲ ವಿಶೇಷ ಸ್ಥಾನ ಪಡೆಯಲಿದೆ. ದುರ್ಗಾ ಪಾತ್ರವು ಚಿಕ್ಕದಾದರೂ, ಅದು ನನಗೆ ಹಿಂದೆಂದೂ ಅನುಭವಿಸದ ತೃಪ್ತಿಯ ಭಾವನೆಯನ್ನು ನೀಡಿತು. ಅವಳಲ್ಲಿ ಶಾಂತ ಶಕ್ತಿ ಇತ್ತು, ಪದಗಳಿಗಿಂತ ಹೆಚ್ಚು ಮಾತನಾಡುವ ಸ್ಥಿರತೆ ಇತ್ತು. ಅವಳನ್ನು ಜೀವಂತಗೊಳಿಸುವಲ್ಲಿ, ನಾನು ನನ್ನ ಒಂದು ಭಾಗವನ್ನು ಕಂಡುಕೊಂಡೆ.” ನಿರ್ದೇಶಕ ರಾಹುಲ್ ರವೀಂದ್ರನ್ ಅವರತ್ತ ಕೃತಜ್ಞತೆ ವ್ಯಕ್ತಪಡಿಸಿದ ಅನು ಎಮ್ಯಾನುಯೆಲ್, “ದುರ್ಗಾ ಪಾತ್ರವನ್ನು ನನಗೆ ನಂಬಿಕೆ ಇಟ್ಟು ಒಪ್ಪಿಸಿದ್ದಕ್ಕಾಗಿ ಧನ್ಯವಾದಗಳು. ಮಹಿಳೆಯರನ್ನು ಇಷ್ಟು…

ರಾಯಲ್ ಎನ್‌ಫೀಲ್ಡ್ ಫ್ಲೈಯಿಂಗ್ ಫ್ಲೀ S6 ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ EICMA 2025ರಲ್ಲಿ ಅನಾವರಣ

ಮಿಲನ್ : ಪ್ರಸಿದ್ಧ ಮೋಟಾರ್‌ಸೈಕಲ್ ತಯಾರಕ ರಾಯಲ್ ಎನ್‌ಫೀಲ್ಡ್, ತನ್ನ ಹೊಸ ಎಲೆಕ್ಟ್ರಿಕ್ ಸ್ಕ್ರ್ಯಾಂಬ್ಲರ್ ಮಾದರಿ ಫ್ಲೈಯಿಂಗ್ ಫ್ಲೀ S6 ಅನ್ನು ಇಟಲಿಯ ಮಿಲನ್‌ನಲ್ಲಿ ನಡೆದ EICMA 2025 ಪ್ರದರ್ಶನದಲ್ಲಿ ಅನಾವರಣಗೊಳಿಸಿದೆ. ಕಂಪನಿಯ ‘ಸಿಟಿ-ಪ್ಲಸ್’ ಪ್ಲಾಟ್‌ಫಾರ್ಮ್ ಆಧಾರಿತ ಈ ನೂತನ ಮಾದರಿ, ರಾಯಲ್ ಎನ್‌ಫೀಲ್ಡ್‌ನ ಎಲೆಕ್ಟ್ರಿಕ್ ವಿಭಾಗದಲ್ಲಿ ಕಾಂಪ್ಯಾಕ್ಟ್, ಆದರೆ ಶಕ್ತಿಶಾಲಿ ಮೋಟಾರ್‌ಸೈಕಲ್ ಆಗಿ ಗುರುತಿಸಿಕೊಳ್ಳಲಿದೆ. VIDEO | Motorcycle maker Royal Enfield, part of Eicher Motors Group, will start the global commercial roll-out of its electric bikes under the Flying Flea brand from next year, a top company official said. Managing Director and Royal Enfield CEO B Govindarajan said: “We will be… pic.twitter.com/ffqNwnigm2 — Press Trust…

ತಂದೆತಾಯಿಗೆ ಬೇಡವಾದ ಹಸುಗೂಸು; ಬೀದಿಯಲ್ಲಿ ಬಿಸಾಡಿದ ಪಾಪಿಗಳು

ದೊಡ್ಡಬಳ್ಳಾಪುರ: ಜನ್ಮ ಪಡೆದ ಕೆಲವೇ ವಾರಗಳ ನವಜಾತ ಗಂಡು ಶಿಶುವನ್ನು ಮಾನವೀಯತೆ ಮರೆತ ಪಾಪಿಗಳು ಬೀದಿಯಲ್ಲೇ ಬಿಸಾಡಿ ಹೋದ ಹೃದಯ ಕಲುಕುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಲೇಔಟ್‌ ಬಳಿ ನಡೆದಿದೆ. ಮಗು ಅಳುವ ಶಬ್ದ ಕೇಳಿ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗು ಜೀವಂತವಾಗಿರುವುದನ್ನು ಕಂಡು ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಗು ತೀವ್ರ ಹಸಿವಿನಿಂದ ಅಳುತ್ತಿದ್ದುದರಿಂದ ಗ್ರಾಮದ ಆಂಜಿನಮ್ಮ ಕುಟುಂಬವು ಹಾಲುಣಿಸಿ ಮಾನವೀಯತೆ ಮೆರೆದಿದೆ. ನಂತರ ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದು ಮಗುವನ್ನು ವಶಕ್ಕೆ ಪಡೆದಿದೆ. ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಮತ್ತೆ ಸಮಾಜದಲ್ಲಿ ಮಾನವೀಯತೆ ಹಾಗೂ ಮಕ್ಕಳ ರಕ್ಷಣೆಯ ಅಗತ್ಯತೆಯ ಬಗ್ಗೆ ಚಿಂತನೆ ಮೂಡಿಸಿದೆ.

4 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ

ವಾರಣಾಸಿ: ಬನಾರಸ್ ರೈಲು ನಿಲ್ದಾಣ ಶನಿವಾರ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. 4 ಹೊಸ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಯಿತು. Delighted to flag off four Vande Bharat trains. These will enhance connectivity and provide greater comfort for citizens. https://t.co/kHl2ufYLoF — Narendra Modi (@narendramodi) November 8, 2025 ಪ್ರಧಾನಿ ನರೇಂದ್ರ ಮೋದಿ ಅವರು ಈ ಹೊಸ ರೈಲುಗಳಿಗೆ ಚಾಲನೆ ನೀಡಿದರು. ಬನಾರಸ್-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಈ ರೈಲುಗಳು ಕಾರ್ಯನಿರ್ವಹಿಸಲಿವೆ. ಈ ನಗರಗಳ ನಡುವೆ ಹೈಸ್ಪೀಡ್ ರೈಲುಗಳ ಸಂಚಾರಕ್ಕೆ ಸುದೀರ್ಘ ಆಗ್ರಹಗಳಿತ್ತು. ಇದೀಗ ಈ ಅರೆ-ಹೈ-ಸ್ಪೀಡ್ ರೈಲುಗಳು ಪ್ರಮುಖ ನಿಲ್ದಾಣಗಳ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಲವು ರಾಜ್ಯಗಳನ್ನು ಸಂಪರ್ಕಿಸುವುದರಿಂದ ಔದ್ಯೋಗಿಕ ಕ್ಷೇತ್ರಕ್ಕೂ ಅನುಕೂಲವಾಗಲಿದೆ ಎಂದು ನಂಬಲಾಗಿದೆ.

RSS ಶತಾಬ್ದಿ ಸಂಭ್ರಮ; ನ.8, 9ರಂದು ಬೆಂಗಳೂರಿನಲ್ಲಿ ಮೋಹನ್ ಭಾಗವತ್ ಅವರಿಂದ ವಿಶೇಷ ಉಪನ್ಯಾಸಮಾಲೆ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘವು ಕಳೆದ ವಿಜಯದಶಮಿಯಂದು (ಅಕ್ಟೋಬರ್ 2, 2025) ತನ್ನ ನೂರು ವರ್ಷವನ್ನು ಪೂರ್ಣಗೊಳಿಸಿ ರಾಷ್ಟ್ರದ ಸರ್ವಾಂಗೀಣ ಉನ್ನತಿಯ ಧ್ಯೇಯದೊಂದಿಗೆ ಮುನ್ನಡೆದಿದೆ. ಶತಾಬ್ದಿ ವರ್ಷದಲ್ಲಿ ವಿಜಯದಶಮಿ ಉತ್ಸವಗಳು, ಯುವ ಸಮಾವೇಶ, ಮನೆಮನೆ ಸಂಪರ್ಕ, ಹಿಂದು ಸಮ್ಮೇಳನ, ಸಾಮಾಜಿಕ ಸದ್ಭಾವನಾ ಸಮಾವೇಶ, ಪ್ರಮುಖ ನಾಗರಿಕರ ವಿಚಾರಗೋಷ್ಠಿ ಮುಂತಾದ ವಿವಿಧ ಚಟುವಟಿಕೆಗಳನ್ನು ದೇಶಾದ್ಯಂತ ಆಯೋಜಿಸಲಾಗಿದೆ. ಸಮಾಜದ ಗಣ್ಯಮಾನ್ಯರು, ನೀತಿ ನಿರೂಪಕರು ಹಾಗೂ ಸಮಾಜಸೇವಕರೊಂದಿಗಿನ ಸಂವಾದವನ್ನು ಸಂಘವು ನೂರನೇ ವರ್ಷದಲ್ಲೂ ಮುಂದುವರಿಸಿದ್ದು, ಬೆಂಗಳೂರಿನಲ್ಲಿ ಇದೇ ನವೆಂಬರ್ 8 ಹಾಗೂ 9 ರಂದು ಸರಸಂಘಚಾಲಕರಾದ ಡಾ|| ಮೋಹನ್ ಭಾಗವತ್ ಅವರು ವಿಶೇಷ ಉಪನ್ಯಾಸಮಾಲೆಯಲ್ಲಿ ಮಾತನಾಡಲಿದ್ದಾರೆ. ಶತಾಬ್ದಿ ವರ್ಷದಲ್ಲಿ ದೇಶದ 4 ಕಡೆಗಳಲ್ಲಿ (ನವದೆಹಲಿ, ಬೆಂಗಳೂರು, ಮುಂಬಯಿ ಮತ್ತು ಕೊಲ್ಕತ್ತಾ) ಡಾ|| ಮೋಹನ್ ಭಾಗವತ್ ಅವರು ಈ ಉಪನ್ಯಾಸಮಾಲೆಗಳನ್ನು ನಡೆಸಿಕೊಡಲಿದ್ದಾರೆ. ನವದೆಹಲಿಯಲ್ಲಿ ಕಳೆದ ಆಗಸ್ಟ್ 26, 27, 28 ರಂದು ನವದೆಹಲಿಯಲ್ಲಿ…

ಮೇಕೆದಾಟು, ಕೃಷ್ಣಾ, ಮಹದಾಯಿ ವಿವಾದ; ವಕೀಲರೊಂದಿಗೆ ಡಿಕೆಶಿ ಚರ್ಚೆ

ನವದೆಹಲಿ; ಮೇಕೆದಾಟು ಸೇರಿದಂತೆ ಸುಪ್ರೀಂಕೋರ್ಟ್ ಅಲ್ಲಿ ಬಾಕಿಯಿರುವ ಕರ್ನಾಟಕದ ಜಲ ವಿವಾದಗಳ ಕುರಿತು ಕರ್ನಾಟಕದ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಮೋಹನ್ ವಿ ಕಾತರಾಕಿ, ನಿಶಾಂತ್ ಪಾಟೀಲ್, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ನನ್ನ ತಾಂತ್ರಿಕ ಸಲಹೆಗಾರರಾದ ಜೈಪ್ರಕಾಶ್ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯ ಕರ್ನಾಟಕ ಭವನದಲ್ಲಿ ಚರ್ಚೆ ನಡೆಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಈಗಾಗಲೇ ರೈತರಿಗೆ ಭೂ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಹೊಸ ಕಾಯ್ದೆ ಪ್ರಕಾರ ಇದಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನೆ ಆಗಿವೆ. ಬಿಹಾರದಲ್ಲಿ ಪ್ರಾಧಿಕಾರದ ಮೂಲಕ ಸಾವಿರಾರು ಪ್ರಕರಣ ಬಗೆಹರಿಸಲಾಗಿದೆ. ಕಾನೂನು ಉಪಯೋಗಿಸಿಕೊಳ್ಳಬೇಕು. ಮಹದಾಯಿ ಯೋಜನೆ ಸಂಬಂಧ ಕೆಲವು ದಾಖಲೆ ಸಿದ್ಧಪಡಿಸಲು ಅವರು ಸೂಚಿಸಿದರು. ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸಚಿವರ ಪತ್ರ ನಮ್ಮ…

ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖ ಮತ್ತೊಮ್ಮೆ ಬಹಿರಂಗ: ರಾಹುಲ್ ಗಾಂಧಿ

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಹಿಂದೆ ಕರ್ನಾಟಕದ ಮಹದೇವಪುರ, ನಂತರ ಅಳಂದ ವಿಧಾನಸಭಾ ಮತಗಳ್ಳತನವನ್ನು ಬಯಲು ಮಾಡಿದ್ದರು. ಇದೀಗ ಹರಿಯಾಣ ರಾಜ್ಯದ ಇಡೀ ಚುನಾವಣಾ ಫಲಿತಾಂಶವನ್ನೇ ಹೇಗೆ ಬುಡಮೇಲು ಮಾಡಿದ್ದಾರೆ ಎಂಬುದನ್ನು ದಾಖಲೆ ಸಹಿತ ಜನರ ಮುಂದಿಟ್ಟಿದ್ದಾರೆ. ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆಯ ಮೂಲಕ ಪ್ರಜಾತಂತ್ರದ ರಕ್ಷಣೆಯ ಮಾಡಬೇಕಿರುವ ಚುನಾವಣಾ ಆಯೋಗವೇ ಕೇಂದ್ರ ಸರ್ಕಾರದ ಜೊತೆಗೂಡಿ ಹೇಗೆ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕುತ್ತಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಕರಾಳ‌ ಮುಖವನ್ನು ಲೋಕಸಭೆಯ ವಿಪಕ್ಷ ನಾಯಕರಾದ @RahulGandhi ಅವರು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಮೊದಲು ಕರ್ನಾಟಕದ ಮಹದೇವಪುರ, ನಂತರ ಅಳಂದ ವಿಧಾನಸಭಾ ಮತಗಳ್ಳತನವನ್ನು ಬಯಲು ಮಾಡಿದ್ದರು, ಇಂದು ಹರಿಯಾಣ…

ಆಲಿಯಾ ಭಟ್–ಶಾರ್ವರಿ ಅಭಿನಯದ ‘ಆಲ್ಫಾ’ ಬಿಡುಗಡೆ ಮುಂದೂಡಿಕೆ: ಏಪ್ರಿಲ್ 17ರಂದು ತೆರೆಗೆ

ಮುಂಬೈ: ನಟಿ ಆಲಿಯಾ ಭಟ್ ಮತ್ತು ಶಾರ್ವರಿ ವಾಘ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ ‘ಆಲ್ಫಾ’ ಹೊಸ ಬಿಡುಗಡೆ ದಿನಾಂಕವನ್ನು ಪಡೆದುಕೊಂಡಿದೆ. ಮೂಲತಃ 2025ರ ಡಿಸೆಂಬರ್ 25ರಂದು ಪ್ರದರ್ಶನಗೊಳ್ಳಬೇಕಿದ್ದ ಈ ಚಿತ್ರ 2026ರ ಏಪ್ರಿಲ್ 17ರಂದು ತೆರೆಕಾಣಲಿದೆ. ವಿಎಫ್‌ಎಕ್ಸ್ (VFX) ಕೆಲಸದ ವಿಳಂಬವೇ ಬಿಡುಗಡೆ ಮುಂದೂಡಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಯಶ್ ರಾಜ್ ಫಿಲ್ಮ್ಸ್ (YRF) ಸ್ಪಷ್ಟಪಡಿಸಿದೆ. ಚಿತ್ರದ ದೃಶ್ಯಮಟ್ಟವನ್ನು ಉನ್ನತ ಗುಣಮಟ್ಟದಲ್ಲಿ ತೋರಿಸಲು ತಂಡಕ್ಕೆ ಹೆಚ್ಚಿನ ಸಮಯ ಅಗತ್ಯವಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. “‘ಆಲ್ಫಾ’ ನಮ್ಮಿಗೆ ಅತ್ಯಂತ ವಿಶೇಷವಾದ ಚಿತ್ರ. ಅದನ್ನು ಅತ್ಯಂತ ಸಿನಿಮೀಯವಾಗಿ ಪ್ರೇಕ್ಷಕರ ಮುಂದೆ ತರಲು ಬಯಸುತ್ತೇವೆ. ವಿಎಫ್‌ಎಕ್ಸ್ ಕೆಲಸಕ್ಕೆ ನಿರೀಕ್ಷೆಗಿಂತ ಹೆಚ್ಚು ಸಮಯ ಬೇಕಾಗುತ್ತಿದೆ. ಚಿತ್ರವನ್ನು ನಾಟಕೀಯ ಹಾಗೂ ಅದ್ಭುತ ಅನುಭವವನ್ನಾಗಿಸಲು ಯಾವುದೇ ಅಡಚಣೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಆದ್ದರಿಂದ ಏಪ್ರಿಲ್ 17, 2026ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ” ಎಂದು YRF ಮುಖ್ಯಸ್ಥರು…

ವಿಶ್ವಕಪ್ ಗೆದ್ದ ಮಹಿಳಾ ತಂಡಕ್ಕೆ ಬಿಸಿಸಿಐಯಿಂದ ₹51 ಕೋಟಿ ಬಹುಮಾನ

ನವಿಮುಂಬೈ: ಭಾರತದ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದೆ. ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಈ ಸಾಧನೆ ಸಾಧಿಸಿದ ಟೀಮ್ ಇಂಡಿಯಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರೀ ನಗದು ಬಹುಮಾನ ಘೋಷಿಸಿದೆ. ಟೀಮ್ ಇಂಡಿಯಾ ಪ್ರದರ್ಶನದಿಂದ ಸಂತೋಷಗೊಂಡ ಬಿಸಿಸಿಐ, ಒಟ್ಟು ₹51 ಕೋಟಿ ರೂಪಾಯಿಗಳನ್ನು ನಗದು ಬಹುಮಾನವಾಗಿ ನೀಡಲಿದೆ ಎಂದು ಮಂಡಳಿಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಘೋಷಿಸಿದ್ದಾರೆ. ಸೈಕಿಯಾ ಅವರು, “ಈ ಐತಿಹಾಸಿಕ ಗೆಲುವು ದೇಶದ ಕ್ರಿಕೆಟ್ ಇತಿಹಾಸದಲ್ಲೊಂದು ಸುವರ್ಣ ಅಧ್ಯಾಯ. ಟೀಮ್ ಇಂಡಿಯಾದ ಸಾಹಸ, ಶ್ರಮ ಮತ್ತು ತಂಡದ ಒಗ್ಗಟ್ಟಿಗೆ ಅಭಿನಂದನೆ ಸಲ್ಲಿಸಲು ಬಿಸಿಸಿಐ ಈ ನಗದು ಬಹುಮಾನ ನೀಡುತ್ತಿದೆ,” ಎಂದು ತಿಳಿಸಿದ್ದಾರೆ. ಈ ಬಹುಮಾನ ಮೊತ್ತವನ್ನು ಟೀಮ್ ಇಂಡಿಯಾ ಆಟಗಾರರು, ಆಯ್ಕೆದಾರರು ಹಾಗೂ ಕೋಚ್ ಅಮೋಲ್…

EDಯಿಂದ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ₹3,000 ಕೋಟಿ ಆಸ್ತಿ ಮುಟ್ಟುಗೋಲು

ಮುಂಬೈ: ಸಾರ್ವಜನಿಕ ನಿಧಿಯ ಹಣ ವರ್ಗಾವಣೆ ಹಾಗೂ ಅಕ್ರಮ ವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್‌ನ ಹಲವು ಸಂಸ್ಥೆಗಳಿಗೆ ಸೇರಿದ ₹3,084 ಕೋಟಿ ಮೌಲ್ಯದ 40 ಕ್ಕೂ ಹೆಚ್ಚು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈನ ಬಾಂದ್ರಾದ ಪಾಲಿ ಹಿಲ್‌ನಲ್ಲಿರುವ ನಿವಾಸ, ನವದೆಹಲಿಯ ರಿಲಯನ್ಸ್ ಸೆಂಟರ್ ಆಸ್ತಿ, ಹಾಗೂ ದೆಹಲಿ, ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ (ಕಾಂಚಿಪುರಂ ಸೇರಿ) ಮತ್ತು ಪೂರ್ವ ಗೋದಾವರಿಯಲ್ಲಿನ ಆಸ್ತಿಗಳು ಇದರಡಿ ಸೇರಿವೆ. ಮುಟ್ಟುಗೋಲು ಹಾಕಿಕೊಳ್ಳಲಾದವುಗಳಲ್ಲಿ ಕಚೇರಿ ಆವರಣಗಳು, ವಸತಿ ಘಟಕಗಳು ಮತ್ತು ಭೂಮಿಯ ಭಾಗಗಳು ಸೇರಿವೆ ಎನ್ನಲಾಗಿದೆ. ಈ ಆಸ್ತಿಗಳ ಮೇಲೆ ಅಕ್ಟೋಬರ್ 31ರಂದು ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 5(1) ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ. ತನಿಖೆ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್…