ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಕಾರು ಅಪಘಾತವಾಗಿದೆ. ಗದ್ವಾಲ್ ಜಿಲ್ಲೆಯ ಉಂಡವೆಲ್ಲಿ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸೋಮವಾರ ನಟ ವಿಜಯ್ ದೇವರಕೊಂಡ ಅವರ ಕಾರು, ಅಪಘಾತಕ್ಕೀಡಾಗಿದೆ. ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುತ್ತಿದ್ದಾಗ ಅವರಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿಯಾಗಿದೆ ಎನ್ನಲಾಗಿದ್ದು, ನಟನಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Category: ದೇಶ-ವಿದೇಶ
ಬಿಹಾರ ವಿಧಾನಸಭಾ ಚುನಾವಣೆ; ನವೆಂಬರ್ 6 ಮತ್ತು 11 ರಂದು ಮತದಾನ
ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಮತದಾನ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ನವೆಂಬರ್ 6 ಮತ್ತು 11 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ ಎಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಘೋಷಿಸಿದರು. 243 ಕ್ಷೇತ್ರಗಳ ಪೈಕಿ, 121 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಹಾಗೂ 122 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 14ರಂದು ಮತಗಳ ಎಣಿಕೆ ನಡೆಯಲಿದೆ ಎಂದವರು ವಿವರಿಸಿದ್ದಾರೆ.
GST ಪರಿಷ್ಕೃತ ಸ್ಲ್ಯಾಬ್ 5% & 18%: ಗ್ರಾಹಕರೂ ಖುಶ್, ವರ್ತಕರೂ ಜೋಶ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಎಸ್‌ಟಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತಂದಿದೆ. ಹಲವು ವರ್ಷಗಳಿಂದ ಜಾರಿಯಲ್ಲಿದ್ದ ಸಂಕೀರ್ಣ ತೆರಿಗೆ ಸ್ಲ್ಯಾಬ್‌ಗಳನ್ನು ಸರಳಗೊಳಿಸಿ ಈಗ ಕೇವಲ 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳನ್ನು ಮಾತ್ರ ಜಾರಿಗೆ ತಂದಿದೆ. ಸರ್ಕಾರದ ಈ ಕ್ರಮವು ದೇಶದ ಅಭಿವೃದ್ಧಿಗೆ ಬರೆದ ಮುನ್ನುಡಿಯಾಗಿದೆ ಎಂದು ತಜ್ಞರು ಪ್ರತಿಪಾದಿಸಿದ್ದಾರೆ. ವ್ಯಾಪಾರಿಗಳಿಗೆ ಸೌಲಭ್ಯ, ಗ್ರಾಹಕರಿಗೆ ರಿಯಾಯಿತಿ, ಕೈಗಾರಿಕೆಗಳಿಗೆ ಉತ್ಸಾಹ ನೀಡುವುದು ಈ ನಿರ್ಧಾರದ ಉದ್ದೇಶ ಇದರಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಗತಿಯ ಶಕೆ ಆರಂಭವಾದಂತಾಗಿದೆ. ವ್ಯಾಪಾರ ವಲಯದಲ್ಲಂತೂ ಸಂತಸ ಮನೆಮಾಡಿದೆ. ಕರ್ನಾಟಕ: ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಹೊಸ ಚೈತನ್ಯ ಕರ್ನಾಟಕದ ಮೈಸೂರು ರೇಷ್ಮೆ, ಚನ್ನಪಟ್ಟಣ ಆಟಿಕೆಗಳು, ಧಾರವಾಡ ಪೇಡಾ, ಮೈಸೂರು ಪಾಕ್ ಮೊದಲಾದ ಉತ್ಪನ್ನಗಳು ಈಗ ಕಡಿಮೆ ತೆರಿಗೆ ದರಕ್ಕೆ ಒಳಪಟ್ಟಿವೆ. ಇದರಿಂದ ಸಾಂಪ್ರದಾಯಿಕ ಉದ್ಯಮಗಳು ಸ್ಪರ್ಧಾತ್ಮಕ ಬೆಲೆಗೆ ಉತ್ಪಾದನೆ ಮಾಡಬಹುದಾಗಿದೆ. ನಂಜನಗೂಡು…
ಈ ಬಾರಿ ‘ಸ್ವದೇಶಿ ದೀಪಾವಳಿ’ ಆಚರಿಸಿ; ಚಾಣಕ್ಯ ಅಮಿತ್ ಶಾ ಕರೆ
ನವದೆಹಲಿ: “ಈ ದೀಪಾವಳಿಯಲ್ಲಿ ವಿದೇಶಿ ಸರಕುಗಳ ಬದಲು ಸ್ವದೇಶಿ ಉತ್ಪನ್ನಗಳನ್ನು ಖರೀದಿಸಿ ಬಳಸಿ” ಎಂದು ದೇಶದ ಜನತೆಗೆ ಕರೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “140 ಕೋಟಿ ಭಾರತೀಯರ ಸ್ವದೇಶಿ ಮನೋಭಾವ ದೇಶವನ್ನು ವಿಶ್ವದ ಸರ್ವೋನ್ನತ ರಾಷ್ಟ್ರವನ್ನಾಗಿ ಮಾಡಲಿದೆ” ಎಂದರು. ಗೋವದಲ್ಲಿ ಮಜೇ ಘರ್ ಯೋಜನೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನಂತರ ಪಣಜಿಯ ಸಮೀಪದ ಸಾರ್ವಜನಿಕ ಸಭೆಯಲ್ಲಿ ಶನಿವಾರ ಪಾಲ್ಗೊಂಡ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಿಜೆಪಿ ಸರ್ಕಾರ ಸುಧಾರಣಾ ಕ್ರಮಗಳನ್ನು ಜಾಗರೂಕತೆಯಿಂದ ಜಾರಿಗೆ ತರುತ್ತಿದೆ. ಈ ಯೋಜನೆಯಿಂದ ಜನರಲ್ಲಿ ಹೆಮ್ಮೆಯ ಭಾವ ಮೂಡಲಿದೆ — ‘ಇದು ನನ್ನ ಮನೆ’ ಎಂದು ಹೇಳುವ ಗೌರವ ದೊರೆಯಲಿದೆ’ ಎಂದರು. Kharge Ji wants to falsify the equal rights among citizens enshrined in the…
ಭಾರತೀಯ ಸೇನೆಯ ಭವಿಷ್ಯದ ಯುದ್ಧಭೂಮಿಗೆ ಹೊಸ ‘ರುದ್ರ ಬ್ರಿಗೇಡ್’
ದೆಹಲಿ: ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಶನಿವಾರ ‘ರುದ್ರ ಬ್ರಿಗೇಡ್’ ಎಂಬ ಹೊಸ ಸಂಯೋಜಿತ ಬ್ರಿಗೇಡ್ ರಚನೆಯ ಘೋಷಣೆ ಮಾಡುವ ಮೂಲಕ ಸೇನೆಯ ಭವಿಷ್ಯದ ಯುದ್ಧ ತಂತ್ರತಂತ್ರಗಳಿಗೆ ತಕ್ಕಂತೆ ತನ್ನ ಸಿದ್ಧತೆಯನ್ನು ಮತ್ತೊಮ್ಮೆ ತೋರಿಸಿದ್ದಾರೆ. ಉತ್ತರ ಕಮಾಂಡ್ ಪ್ರಕಟಣೆಯಲ್ಲಿ ಹೇಳಿರುವಂತೆ, “ರುದ್ರ – ಸಂಯೋಜಿತ ಯುದ್ಧ ಅಪ್ಲಿಕೇಶನ್ ಮತ್ತು ಅಂತರ-ಶಸ್ತ್ರ ಏಕೀಕರಣದ ವಿಶಿಷ್ಟ ಮಿಶ್ರಣ. ವಿಕಸಿಸುತ್ತಿರುವ ತಂತ್ರಜ್ಞಾನಗಳು ಮತ್ತು ಕ್ರಿಯಾತ್ಮಕ ಸವಾಲುಗಳೊಂದಿಗೆ ನಿರಂತರವಾಗಿ ರೂಪಾಂತರಗೊಳ್ಳುತ್ತಿರುವ ಯುದ್ಧಭೂಮಿಗಳನ್ನು ಎದುರಿಸುವುದರಲ್ಲಿ ಈ ಬ್ರಿಗೇಡ್ ಪ್ರಮುಖ ಪಾತ್ರ ವಹಿಸುತ್ತದೆ. ಭಾರತೀಯ ಸೇನೆಯು ಭವಿಷ್ಯದ ಯುದ್ಧಗಳಿಗೆ ಸಿದ್ಧತೆ ಮತ್ತು ಸಾಮರ್ಥ್ಯ ಅಭಿವೃದ್ಧಿಯ ಮೇಲೆ ನಿರಂತರ ಗಮನ ನೀಡುತ್ತಿದೆ” ಎಂದು ತಿಳಿಸಲಾಗಿದೆ. Indian Army @NorthernComd_IA released a video of Rudra Brigade.#Rudra #ColdStart #India #IndianArmy #Delhi pic.twitter.com/jtk7UdHfw1 — South Asia IntelWire (@SouthAsiaIntel) October 4,…
ದಕ್ಷಿಣ ಗಾಜಾದಲ್ಲಿ ಇಸ್ರೇಲ್ ಡ್ರೋನ್ ದಾಳಿ: ಇಬ್ಬರು ಮಕ್ಕಳು ಬಲಿ
ಗಾಜಾ: ದಕ್ಷಿಣ ಗಾಜಾದ ಅಲ್–ಮವಾಸಿ ಪ್ರದೇಶದಲ್ಲಿರುವ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಪ್ಯಾಲೆಸ್ತೀನ್ ಸಂಘಟನೆ ಹಮಾಸ್ ತನ್ನ ಕದನ ವಿರಾಮ ಪ್ರಸ್ತಾಪವನ್ನು ಭಾಗಶಃ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ಯುದ್ಧವನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಗಾಜಾದಲ್ಲಿನ ಸಮರ ಸನ್ನಿವೇಶವೇ ಬೇರೆ ಇದೆ. ಟ್ರಂಪ್ ಮಂಡಿಸಿದ ಶಾಂತಿ ಯೋಜನೆಯ ಹಲವು ಅಂಶಗಳನ್ನು ಹಮಾಸ್ ಒಪ್ಪಿಕೊಂಡಿದೆ ಎಂದು ತಿಳಿಸಿದರೂ, ಪ್ಯಾಲೆಸ್ತೀನಿಯರಿಗೆ ಅನುಕೂಲಕರವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಆದೇಶದ ನಂತರ ಗಾಜಾದಲ್ಲಿ ಬಾಂಬ್ ದಾಳಿಗಳು ಗಣನೀಯವಾಗಿ ಕಡಿಮೆಯಾಗಿವೆ. ಇತ್ತ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಟ್ರಂಪ್ ಯೋಜನೆಯ ಮೊದಲ ಹಂತದ ಅನುಷ್ಠಾನಕ್ಕೆ ಇಸ್ರೇಲ್ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಈ ಹಂತವು ಒತ್ತೆಯಾಳುಗಳ ಬಿಡುಗಡೆಯನ್ನು ಒಳಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ವಿಶ್ವ ನಾಯಕರು ಹಮಾಸ್‌ನ…
ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆ ತಂದ ಗ್ಯಾರಂಟಿ: ಸುರ್ಜೆವಾಲಾ
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಪಂಚಗ್ಯಾರಂಟಿ ಯೋಜನೆಗಳು ಕೇವಲ ಜನಪರ ಯೋಜನೆಗಳಲ್ಲ. ಬದಲಿಗೆ ಇವು ‘ಸಾಮಾಜಿಕ ನ್ಯಾಯ’ವನ್ನು ಎತ್ತಿ ಹಿಡಿದು ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆಯನ್ನು ತಂದಿವೆ. ಆದರೆ, ಈಗ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ವಿರೋಧಿಸಲು ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ. ದೇವೇಗೌಡರನ್ನೇ ಬಿಜೆಪಿ ಕಣಕ್ಕಿಳಿಸಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, ಬಿಜೆಪಿ-ಜೆಡಿಎಸ್ ಮೈತ್ರಿಯ ದ್ವೇಷಕ್ಕೆ ಮಿತಿಯೇ ಇಲ್ಲ. ಜನರ ಬದುಕಿಗೆ ಬೆಳಕಾಗಿರುವ ಈ ಯೋಜನೆಗಳನ್ನು ವಿರೋಧಿಸಲು ದೇವೇಗೌಡರನ್ನೇ ಬಿಜೆಪಿ ಮುಂದೆ ಬಿಟ್ಟಿದೆ. ಇಂತಹ ‘ಕುರುಡು ದೃಷ್ಟಿಯುಳ್ಳ ಪಕ್ಷಗಳು’ ನಾಚಿಕೆಪಡಬೇಕು ಎಂದು ಖಂಡಿಸಿದ್ದಾರೆ. ಗ್ಯಾರಂಟಿಗಳಿಂದ ಆದ ಪರಿವರ್ತನೆ: ಈ ಯೋಜನೆಗಳ…
‘Great job’: ಕೊಲಂಬಿಯಾದಲ್ಲಿ ಭಾರತೀಯ ಕಂಪನಿಗಳ ಯಶೋಗಾಥೆ
ನವದೆಹಲಿ: ಕೊಲಂಬಿಯಾದಲ್ಲಿ ಭಾರತೀಯ ದ್ವಿಚಕ್ರ ವಾಹನ ತಯಾರಕರಾದ ಬಜಾಜ್, ಹೀರೋ ಮತ್ತು ಟಿವಿಎಸ್‌ಗಳ ಬಲವಾದ ಪ್ರದರ್ಶನಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ. ಅವರ ಯಶಸ್ಸು ಸ್ವಜನಪಕ್ಷಪಾತಕ್ಕಿಂತ ನಾವೀನ್ಯತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಬರೆದುಕೊಂಡಿರುವ ಅವರು, ‘ಬಜಾಜ್, ಹೀರೋ ಮತ್ತು ಟಿವಿಎಸ್ ಕೊಲಂಬಿಯಾದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಿ ಹೆಮ್ಮೆಯಿದೆ. ಭಾರತೀಯ ಕಂಪನಿಗಳು ಸ್ವಜನಪಕ್ಷಪಾತದಿಂದಲ್ಲ, ನಾವೀನ್ಯತೆಯಿಂದ ಗೆಲ್ಲಬಹುದು ಎಂದು ತೋರಿಸುತ್ತದೆ. ಉತ್ತಮ ಕೆಲಸ’ ಎಂದಿದ್ದಾರೆ. ಭಾರತೀಯ ವಲಸೆಗಾರರು, ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ತೊಡಗಿಸಿಕೊಂಡಿರುವ ತಮ್ಮ ಅಂತರರಾಷ್ಟ್ರೀಯ ಪ್ರವಾಸದ ಸಂದರ್ಭದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ರಾಹುಲ್ ಗಾಂಧಿಯವರು ಪ್ರಸ್ತುತ ತಮ್ಮ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಕೊಲಂಬಿಯಾದಲ್ಲಿದ್ದಾರೆ ಮತ್ತು ಹಲವಾರು ಲ್ಯಾಟಿನ್ ಅಮೇರಿಕನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ. Proud to see Bajaj, Hero & TVS do so well in Colombia.…
ರಾಜ್ಯದ ಸಾಮಾಜಿಕ, ಆರ್ಥಿಕ ಸ್ಥಿತಿಗೆ ‘ಶಕ್ತಿ’ ನೀಡಿದ ಗ್ಯಾರೆಂಟಿ.. ಅಧ್ಯಯನ ವರದಿಯ ಹೈಲೈಟ್ಸ್ ಹೀಗಿದೆ.
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಜಾರಿಗೆ ತಂದ ಕರ್ನಾಟಕ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಕರ್ನಾಟಕದಲ್ಲಿ ಪರಿಣಾಮಕಾರಿ ಬದಲಾವಣೆಯನ್ನು ತಂದಿವೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಂವಹನ) ಸಂಸದ ಜೈರಾಮ್ ರಮೇಶ್ ಹೇಳಿದ್ದಾರೆ. Our statement on a new study led by @tarauk evaluating the impact of Karnataka’s guarantee schemes on the empowerment of women pic.twitter.com/hz1BNPlLnE — Jairam Ramesh (@Jairam_Ramesh) October 3, 2025 ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಯಶೋಗಾಥೆ ಕುರಿತಂತೆ ಮಾಧ್ಯಮ ಹೇಳಿಕೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಜೈರಾಮ್ ರಮೇಶ್, ನಾಲ್ಕು ಖ್ಯಾತ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡ ಸ್ವತಂತ್ರ ಅಧ್ಯಯನದ ಹೊಸ ವರದಿಯು ಈ ಖಾತರಿಗಳ ಫಲಿತಾಂಶಗಳನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತದೆ ಎಂದಿದ್ದಾರೆ. ಅದರಲ್ಲೂ ಶಕ್ತಿ ಯೋಜನೆಯಿಂದಾಗಿ ಕರ್ನಾಟಕದಲ್ಲಿ…
ಕರ್ನೂಲ್: ಸಾಂಪ್ರದಾಯಿಕ ಕೋಲು ಕಾಳಗದಲ್ಲಿ ಇಬ್ಬರು ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ
ಕರ್ನೂಲ್: ವಿಜಯದಶಮಿ ಸಂದರ್ಭದಲ್ಲಿ ಸಾಂಪ್ರದಾಯಿಕ ಬನ್ನಿ ಉತ್ಸವ ವೇಳೆ ಕೋಲುಗಳಿಂದ ನಡೆಯುವ ಕಾಳಗದಲ್ಲಿ ಇಬ್ಬರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. కర్నూలు 'దేవరగట్టు సమరం' 🔥🔥🔥🔥🔥🥵 తరతరాలుగా వస్తున్న ఆచారం శ్రీ మాల మల్లేశ్వర స్వామి వార్ల విగ్రహాలని దక్కించుకునేందుకు 11 ఊర్ల గ్రామ ప్రజలు రక్తం చిందించి భక్తితో చేసే సమరం 🙏. #Devara #Kurnool #Devaragattu pic.twitter.com/RylANzHIta — Narasimha NTR 🦚 (@NarasimhaNTR_) October 3, 2025 ಪ್ರತಿ ವರ್ಷದಂತೆ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಹೊಳಗೊಂಡ ‘ಮಂಡಲ’ (ಬ್ಲಾಕ್) ನ ದೇವೆರಾಗಟ್ಟು ಗ್ರಾಮದಲ್ಲಿ ಗುರುವಾರ ತಡರಾತ್ರಿ ದಸರಾ ಆಚರಣೆಯ ಭಾಗವಾಗಿ ನಡೆದ ದೇವರಗಟ್ಟು ಬನ್ನಿ ಉತ್ಸವದ ಸಂದರ್ಭದಲ್ಲಿ ಎರಡು ಗುಂಪುಗಳು ಕೋಲುಗಳಿಂದ ಪರಸ್ಪರ ದಾಳಿ ನಡೆಸಿದವು. ಇದು ಸಾಂಪ್ರಾಯಾಯಿಕ ಆಚರಣೆಯಾಗಿದೆ. ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ವ್ಯಕ್ತಿ ಹೃದಯಾಘಾತದಿಂದ…
