ಬಿಹಾರ ಚುನಾವಣೆಯಲ್ಲಿ ಮತ ಖರೀದಿಗಾಗಿ NDAಯಿಂದ ಭಾರೀ ಹಣ ರವಾನೆ; ಪ್ರಿಯಾಂಕಾ ಆರೋಪ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತ ಖರೀದಿಸಲು ಎನ್‌ಡಿಎ ಸರ್ಕಾರವೇ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ “ಶಕ್ತಿ ಅಧಿಕಾರ ಮಹಿಳಾ ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರ ಶಕ್ತಿಯನ್ನು ರಾಜಕೀಯ ಪಕ್ಷಗಳು ಚೆನ್ನಾಗಿ ಅರಿತಿವೆ. ಅದಕ್ಕಾಗಿ ಚುನಾವಣೆಗೂ ಮೊದಲು 10,000 ರೂ. ನೀಡಲಾಗುತ್ತಿದೆ. ನಿಮ್ಮ ಬೆಂಬಲವಿಲ್ಲದೆ ಅವರಿಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದಿದ್ದಾರೆ” ಎಂದು ವ್ಯಂಗ್ಯವಾಡಿದರು. ಮಹಿಳೆಯರ ಜೀವನಮಟ್ಟ ಸುಧಾರಿಸಲು ಮಹಾಮೈತ್ರಿಕೂಟದ ಐದು ಅಂಶಗಳ ಭರವಸೆಯನ್ನು ಪ್ರಿಯಾಂಕಾ ಪ್ರಕಟಿಸಿದರು. ಇದರಲ್ಲಿ ಪ್ರತೀ ಮಹಿಳೆಗೆ ಮಾಸಿಕ 2,500 ರೂ. ಭತ್ಯೆ, ಆರೋಗ್ಯ ವಿಮೆ 25 ಲಕ್ಷ ರೂ.ವರೆಗೆ, ಭೂಹೀನ ಕುಟುಂಬಗಳಿಗೆ ಉಚಿತ ಜಮೀನು ಹಂಚಿಕೆ, ಮಹಿಳೆಯರ ಹೆಸರಿನಲ್ಲಿ ನೋಂದಣಿ, ಉದ್ಯೋಗ ಸೃಷ್ಟಿ ಮೊದಲಾದವು ಸೇರಿವೆ. ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು…

ದೀನ ದಯಾಳ ಉಪಾಧ್ಯಾಯರು ಆದರ್ಶದ ದೀಪಸ್ತಂಭ: ದತ್ತಾತ್ರೇಯ ಹೊಸಬಾಳೆ

ಬೆಂಗಳೂರು: ಸಾವಿರಾರು ಜನರನ್ನು ಪ್ರೇರೇಪಿಸಿದ ರಾಷ್ಟ್ರಪುರುಷ ದೀನದಯಾಳ ಉಪಾಧ್ಯಾಯರು. ತಮ್ಮ ವ್ಯಕ್ತಿತ್ವ, ಕರ್ತೃತ್ವ, ಸಾಧನೆ, ಚಿಂತನೆಯ ಮೂಲಕ ದೀನ ದಯಾಳ ಉಪಾಧ್ಯಾಯರು ಆಧಾರ ದೀಪಸ್ತಂಭವಾಗಿದ್ದಾರೆ. ಅವರ ಬದುಕು ಗಂಗಾಪ್ರವಾಹವಿದ್ದಂತೆ. ಅದರಲ್ಲಿ ನಮ್ಮ ಪಾತ್ರ ಎಷ್ಟು ಎನ್ನುವುದು ಮುಖ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಗಳೂರು ಮಹಾನಗರ ವತಿಯಿಂದ ಜೆಪಿನಗರದ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ನಡೆದ ಪಂಡಿತ್ ದೀನದಯಾಳ ಉಪಾಧ್ಯಾಯ ಅವರ 109ನೇ ವರ್ಷದ ಜಯಂತಿಯ ನಿಮಿತ್ತ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಯಂಸೇವಕ ಎಂಬ ವಿಶೇಷವಾದ ಕಲ್ಪನೆ ಇಂದು ಸಹಜವಾಗಿದೆ. ಯಾವ ಸಂಘವೂ ಯಾರನ್ನೂ ನಿರ್ಮಾಣ ಮಾಡುವುದಿಲ್ಲ, ಬದಲಾಗಿ ಇರುವವರನ್ನು ಸೇರಿಸಿ ಸಂಘಟನೆ ರೂಪುಗೊಳ್ಳುತ್ತದೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ವಯಂಸೇವಕರ ನಿರ್ಮಾಣ ಮಾಡುವ ಸಂಘಟನೆ. ಅಂತಹ ಶ್ರೇಷ್ಠ, ಆದರ್ಶ, ಪ್ರೇರಣಾದಾಯಿ ಸ್ವಯಂಸೇವಕ ದೀನ ದಯಾಳ…

ಬಿಹಾರ: ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ

ಪಾಟ್ನಾ: ಬಿಹಾರದಲ್ಲೂ ಅಹಿಂದಾ ನಾಯಕ ಸಿದ್ದರಾಮಯ್ಯ ಹವಾ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಭೇಟಿನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದ ಸನ್ನಿವೇಶ ಗಮನಸೆಳೆಯಿತು. ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಹರ್ಷೋದ್ಗಾರದಿಂದ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲೇ ನಾಯಕರು ಶಾಲು ಹೊದಿಸಿ ಸನ್ಮಾನಿಸಿದರು. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ, ಪ್ರೀತಿ ತುಂಬಿದ ಸ್ವಾಗತ ಕಂಡು ಖುಷಿಯಾಯಿತು. ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು ಎದುರುಗೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಆ… pic.twitter.com/QpXYOQlXwS — Siddaramaiah (@siddaramaiah) September 23, 2025 ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು…

ಭಾರತೀಯ ಬಾಹ್ಯಾಕಾಶ, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್ ಪ್ರಮುಖ ಪಾತ್ರ: ಇಸ್ರೋ ಅಧ್ಯಕ್ಷ

ಬೆಂಗಳೂರು: ಭಾರತದ ಬಾಹ್ಯಾಕಾಶ ಮಿಷನ್‌ಗಳು, ಸಾರಿಗೆ ಮತ್ತು ಶುದ್ಧ ಇಂಧನ ಭವಿಷ್ಯದಲ್ಲಿ ಹೈಡ್ರೋಜನ್ ಪ್ರಮುಖ ಮತ್ತು ಪರಿವರ್ತನಾತ್ಮಕ ಪಾತ್ರ ವಹಿಸಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹೇಳಿದರು. ಅವರು ಅಲಯನ್ಸ್ ವಿಶ್ವವಿದ್ಯಾಲಯ ಮತ್ತು ಐಐಎಸ್‌ಸಿ ಸಂಯುಕ್ತ ಆಯೋಜನೆಯ ಹೈಡ್ರೋಜನ್ ಇಂಧನ ತಂತ್ರಜ್ಞಾನಗಳು ಮತ್ತು ಭವಿಷ್ಯದ ಪ್ರವೃತ್ತಿಗಳು ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಡಾ. ನಾರಾಯಣನ್ ಅವರು ಜಿಎಸ್ಎಲ್‌ವಿ ಮಾರ್ಕ್–III ರಾಕೆಟ್‌ನಲ್ಲಿ ಲಿಕ್ವಿಡ್ ಹೈಡ್ರೋಜನ್ ಉಪಯೋಗಿಸಿರುವ ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಭಾರತ ಸಾಧಿಸಿದ್ದ ಪ್ರಗತಿಯನ್ನು ಉದಾಹರಿಸಿದ್ರು. ಕಳೆದ ವರ್ಷ ಬಾಹ್ಯಾಕಾಶದಲ್ಲಿ 100-ವಾಟ್ ಹೈಡ್ರೋಜನ್ ಇಂಧನಕೋಶ ಪ್ರದರ್ಶಿಸಿ, ಈಗ 20 ಕೆಡಬ್ಲ್ಯೂ ಆವೃತ್ತಿಯ ಪರೀಕ್ಷೆಗಳು ನಡೆಯುತ್ತಿವೆ ಎಂಬ ಮಾಹಿತಿ ನೀಡಿದರು. ಸಾರಿಗೆ ಕ್ಷೇತ್ರದಲ್ಲಿಓ ಹೈಡ್ರೋಜನ್ ಬಸ್‌ಗಳು ಹಾಗೂ ಇಂಧನಕೋಶಗಳ ಬಳಕೆ ಗುರುತಿಸಿಕೊಂಡಿದ್ದು, 2025ರ ಜೂನ್‌ನಲ್ಲಿ ಐದು ಹೈಡ್ರೋಜನ್ ಬಸ್‌ಗಳು ವಾಣಿಜ್ಯ ಸೇವೆಗೆ ಸೇರಿವೆ ಎಂದರು. ಹೈಡ್ರೋಜನ್ ಸುರಕ್ಷತೆಯ…

ಧನುಷ್ ‘ಇಡ್ಲಿ ಕಡೈ’ ಟ್ರೇಲರ್; ಪ್ರೇಕ್ಷಕರ ಮನಗೆದ್ದ ಹೃದಯಸ್ಪರ್ಶಿ ಕಥೆ

ಚೆನ್ನೈ: ನಿರ್ದೇಶಕ ಮತ್ತು ನಟ ಧನುಷ್ ಅವರ ಮುಂದಿನ ಆಕ್ಷನ್-ಡ್ರಾಮಾ ಸಿನಿಮಾ ‘ಇಡ್ಲಿ ಕಡೈ’ ಚಿತ್ರದ ಟ್ರೇಲರ್ ಅಭಿಮಾನಿಗಳ ಮನಗೆದ್ದಿದೆ. ಟ್ರೈಲರ್’ಗೆ ಸಕತ್ ಲೈಕ್ಸ್ ಸಿಕ್ಕಿದೆ. ಟ್ರೇಲರ್ ಮುರುಗನ್ ಪಾತ್ರದ ಧನುಷ್ ಹೃದಯಸ್ಪರ್ಶಿ ಕಥೆಯನ್ನು ತೋರಿಸುತ್ತಿದೆ. ಅವರ ತಂದೆ ರಾಜ್‌ಕಿರಣ್ ಹಳ್ಳಿಯಲ್ಲಿ ಒಂದು ಸಣ್ಣ ಇಡ್ಲಿ ಅಂಗಡಿಯನ್ನು ಪ್ರೀತಿ ಮತ್ತು ಉತ್ಸಾಹದಿಂದ ನಡೆಸುತ್ತಿದ್ದಾರೆ. ಹದಿಹರೆಯ ಮುರುಗನ್ ಯಂತ್ರವನ್ನು ಖರೀದಿಸಲು ಒತ್ತಾಯಿಸಿದಾಗ, ತಂದೆ ಹೇಳುತ್ತಾರೆ: “ಯಂತ್ರ ಏನು ಮಾಡಬಹುದು ಆದರೆ ಮಾನವ ಹೃದಯದ ಸ್ಪರ್ಶ ಇಲ್ಲ. ಅದು ನಮ್ಮ ಮನಸ್ಸಿನಲ್ಲಿ ಬರಬೇಕು.” ಈ ಸಂದೇಶ ಮುರುಗನ್ ಜೀವನದ ತತ್ವವಾಗಿ ಪಾಲಿಸುತ್ತಾನೆ. ಮುರುಗನ್ ದೊಡ್ಡ ಕಂಪನಿಯಲ್ಲಿ ಉದ್ಯೋಗಿಯಾಗಿ ಲಾಭವನ್ನು ಹೆಚ್ಚಿಸುತ್ತಿದ್ದರೂ, ತಮ್ಮ ಅಂಗಡಿಗೆ ಹಿಂತಿರುಗಲು ನಿರ್ಧರಿಸುತ್ತಾನೆ. ಆದರೆ, ಈ ನಿರ್ಧಾರವು ಕಂಪನಿ ಮೇನೇಜರ್ ಅರುಣ್ ವಿಜಯ್‌ಗೆ ಇಷ್ಟವಾಗುವುದಿಲ್ಲ. ಅನಂತರ ಏನಾಗುತ್ತದೆ ಎಂಬುದು ಚಿತ್ರದ ಕೇಂದ್ರ ಕಥಾಸಾರಾಂಶ. ಧನುಷ್ ಸ್ವತಃ ಈ…

ಕ್ರೈಸ್ತ ಜಾತಿ ವಿವಾದಕ್ಕೆ ತೆರೆ ಎಳೆದ ಸರ್ಕಾರ; ಸಿಎಂ ನಿರ್ಧಾರಕ್ಕೆ ಶಾಜಿ ಸ್ವಾಗತ

ಬೆಂಗಳೂರು: ಜಾತಿ ಸಂಘರ್ಷದ ಕಿಚ್ಚುಹಚ್ಚಿದ್ದಾರೆ ಎಂದು ಸಿಎಂ ವಿರುದ್ಧ ಕ್ರೈಸ್ತ ಸಮುದಾಯ ಆಕ್ರೋಶ ಹೊಮ್ಮುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಜಾಣ್ಮೆಯ ನಿರ್ಧಾರ ಕೈಗೊಂಡಿದ್ದಾರೆ. ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈ ಸಂಬಂಧದ ನಿರ್ಧಾರವನ್ನು ಕೈಬಿಡಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ (CSS) ಮನವಿ ಸಲ್ಲಿಸಿದ ಬೆನ್ನಲ್ಲೇ, ಕ್ರಿಶ್ಚಿಯನ್ ಜಾತಿಗಳ ಮುಂದಿದ್ದ ಹಿಂದೂ ಹೆಸರುಗಳನ್ನೂ ಕೈಬಿಡಬೇಕೆಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಸಿಎಂ ಆದೇಶದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೂಕ್ತ ತಿದ್ದುಪಡಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಕ್ರೈಸ್ತ ಜಾತಿ ವಿವಾದಕ್ಕೆ ತೆರೆ ಎಳೆದ ಸಿಎಂ ನಿರ್ಧಾರವನ್ನು ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಸ್ವಾಗತಿಸಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಿರುವ ಕ್ರೈಸ್ತಧರ್ಮದ ಹಾಗೂ ಜನರ ಹಿತಾಸಕ್ತಿ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿರುವ ಕ್ರಿಶ್ಚಿಯನ್ ಸೇವಾ…

ತಿರುಪತಿ: ಅಭೂತಪೂರ್ವ ಸಾಲಕಟ್ಲ ಬ್ರಹ್ಮೋತ್ಸವಕ್ಕೆ ಸಕಲ ತಯಾರಿ

ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿಯಲ್ಲಿ ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2 ರವರೆಗೆ ವೈಭವದಿಂದ ನಡೆಯಲಿದೆ. ಈ ಸಂಬಂಧ ಸಕಲ ತಯಾರಿ ನಡೆದಿದೆ. ಪ್ರಮುಖ ಧಾರ್ಮಿಕ ವಿಧಿಗಳು: ಬ್ರಹ್ಮೋತ್ಸವವು ಸೆಪ್ಟೆಂಬರ್ 23 ರಂದು ಅಂಕುರಾರ್ಪಣಂ (ಬೀಜ ಬಿತ್ತುವುದು) ಎಂಬ ಪವಿತ್ರ ಕಾರ್ಯಕ್ರಮದೊಂದಿಗೆ ಆರಂಭವಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸದಸ್ಯ ಎಸ್‌.ನರೇಶ್‌ ಕುಮಾರ್‌ ತಿಳಿಸಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ವೈಯಾಲಿಕಾವಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಟಿಟಿಡಿ ದೇವಸ್ಥಾನದ ಸುಪರಿಂಟೆಂಡೆಂಟ್ ಜಯಂತಿ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವ ಕುರಿತು ವಿವರ ಒದಗಿಸಿದರು. ಈ ವರ್ಷದ ವಾರ್ಷಿಕ ಸಾಲಕಟ್ಲ ಬ್ರಹ್ಮೋತ್ಸವವು ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 2, 2025 ನಡೆಯಲಿದೆ. ಬ್ರಹ್ಮೋತ್ಸವವು ಸೆಪ್ಟೆಂಬರ್ 23 ರಂದು ಅಂಕುರಾರ್ಪಣಂ (ಬೀಜ ಬಿತ್ತುವುದು) ಎಂಬ ಪವಿತ್ರ ಕಾರ್ಯಕ್ರಮದೊಂದಿಗೆ…

‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮ ಭಾರತದಾದ್ಯಂತ ಜನರಿಗೆ ಲಾಭ: ಪ್ರಧಾನಿ ಮೋದಿ

ಭಾವನಗರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದರು. ದೇಶಾದ್ಯಂತ ಜನರಿಗೆ ಪ್ರಯೋಜನವಾಗುವಂತೆ 34,200 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿರುವುದು ವಿಶೇಷ. ಭಾವನಗರದ ಜವಾಹರ್ ಮೈದಾನದಲ್ಲಿ ನಡೆದ ಉನ್ನತ ಮಟ್ಟದ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು, ಕಡಲ ವಲಯಕ್ಕೆ ಸಂಬಂಧಿಸಿದ ಅನೇಕ ಪರಿವರ್ತನಾತ್ಮಕ ಯೋಜನೆಗಳನ್ನು ಪ್ರಾರಂಭಿಸಿದರು. “ಇವು ಕಡಲ ವಲಯವಷ್ಟೇ ಅಲ್ಲ, ಭಾರತದ ಸ್ವಾವಲಂಬನೆಗೆ ದಾರಿತೋರಿಸುತ್ತವೆ,” ಎಂದು ಮೋದಿ ಹೇಳಿದರು. ಮುಖ್ಯ ಘಟ್ಟಗಳು 7,870 ಕೋಟಿ ರೂ. ಮೌಲ್ಯದ ಬಂದರು ಆಧುನೀಕರಣ ಯೋಜನೆಗಳಿಗೆ ಚಾಲನೆ. ಮುಂಬೈ ಇಂದಿರಾ ಡಾಕ್‌ನಲ್ಲಿ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಉದ್ಘಾಟನೆ. ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಹೊಸ ಕಂಟೇನರ್ ಟರ್ಮಿನಲ್ ಅಭಿವೃದ್ಧಿ. ಪಾರಾದೀಪ್ (ಒಡಿಶಾ) ನಲ್ಲಿ ಹೊಸ ಸರಕು ನಿಲ್ದಾಣ, ಟ್ಯೂನ ಟೆಕ್ರಾ (ಗುಜರಾತ್) ಮಲ್ಟಿ-ಕಾರ್ಗೋ ಟರ್ಮಿನಲ್ ನಿರ್ಮಾಣ.…

ಅಮೆರಿಕಾದಿಂದ ವೀಸಾ ಕತ್ತರಿ; ಭಾರತೀಯ ಉದ್ಯೋಗಿಗಳಿಗೆ ಹೊರೆ

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಅಮೆರಿಕಾ ಹೊಸ ತಂತ್ರ ಆರಂಭಿಸಿದೆ. ಸುಂಕ ಅಸ್ತ್ರ ಬಳಸಿದ ನಂತರ, ಈಗ ವೀಸಾ ವಿಚಾರದಲ್ಲೂ ಕಿರಿಕ್ ಮಾಡಲು ಮುಂದಾಗಿದೆ. ಇರಾನ್‌ನ ಚಬಹಾರ್ ಬಂದರು ಯೋಜನೆಗೆ ನೀಡಿದ್ದ ‘ನಿರ್ಬಂಧ ವಿನಾಯಿತಿ’ ರದ್ದುಗೊಳಿಸುವ ಮೂಲಕ ಭಾರತಕ್ಕೆ ಅಡ್ಡಿಪಡಿಸಿರುವ ಅಮೆರಿಕಾ, ಇದೀಗ ಉದ್ಯೋಗ ವಲಸೆ ವೀಸಾಗಳನ್ನೇ ದುಬಾರಿಯಾಗಿಸುವ ಯೋಜನೆ ಹಾಕಿಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾರ್ಷಿಕ 100,000 ಡಾಲರ್ ವೀಸಾ ಶುಲ್ಕ ವಿಧಿಸುವ ಮಸೂದೆಗೆ ಸಹಿ ಹಾಕಿದ್ದಾರೆ. ತಜ್ಞ ವಿದೇಶಿ ಉದ್ಯೋಗಿಗಳಿಗೆ ಇದು ಭಾರೀ ಹೊರೆ ಎನಿಸಲಿದೆ. ಕಾಂಗ್ರೆಸ್‌ನ ವ್ಯಾಪಕ ಟೀಕೆಯ ನಡುವೆಯೂ, ಅಮೆರಿಕಾ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ “ಗೋಲ್ಡ್ ಕಾರ್ಡ್” ವೀಸಾ ಯೋಜನೆಯನ್ನೂ ಪ್ರಕಟಿಸಲಾಗಿದೆ. ಕಾನೂನಾಗಿ ಜಾರಿಯಾದರೆ, ಉದ್ಯೋಗ ವೀಸಾ ಬೆಲೆ ಗಗನಕ್ಕೇರುವುದಲ್ಲದೆ, ಭಾರತೀಯರ ಉದ್ಯೋಗದ ಕನಸುಗಳಿಗೆ ದೊಡ್ಡ ಅಡೆತಡೆ ಉಂಟಾಗಲಿದೆ.

ಅಮೆರಿಕಾದಲ್ಲಿ ಪೊಲೀಸ್ ಗುಂಡಿಗೆ ತೆಲಂಗಾಣದ ಟೆಕ್ಕಿ ಬಲಿ: ಜನಾಂಗೀಯ ದ್ವೇಷದ ಶಂಕೆ

ಹೈದರಾಬಾದ್: ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಘಟನೆದಲ್ಲಿ ತೆಲಂಗಾಣದ ಮೂಲದ ಯುವ ಐಟಿ ತಜ್ಞನೊಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಕುಟುಂಬದವರು ಇದನ್ನು ಜನಾಂಗೀಯ ತಾರತಮ್ಯದ ಕಣ್ಣಿನಿಂದ ನೋಡುತ್ತಿದ್ದು, ಮೃತದೇಹವನ್ನು ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯದ ಸಹಾಯವನ್ನು ಕೋರಿದ್ದಾರೆ. ಮಹಬೂಬ್‌ನಗರದ ನಿವಾಸಿ ಮೊಹಮ್ಮದ್ ನಿಜಾಮುದ್ದೀನ್ (32) ಸಾಂಟಾ ಕ್ಲಾರಾದಲ್ಲಿನ ತಮ್ಮ ನಿವಾಸದಲ್ಲಿ ಸೆಪ್ಟೆಂಬರ್ 3ರಂದು ರೂಮ್‌ಮೇಟ್ ಜಗಳದಲ್ಲಿ ಚಾಕುವಿನಿಂದ ಇರಿತ ಮಾಡಿದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಡು ಹಾರಿಸಿದ್ದಾರೆ ಎಂದು ಹೇಳಿಕೆ ನೀಡಲಾಗಿದೆ. ನಿಜಾಮುದ್ದೀನ್ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಅಲ್ಲಿ ಅವರು ಮೃತಪಟ್ಟರು. ರೂಮ್‌ಮೇಟ್ ಚಿಕಿತ್ಸೆ ಪಡೆಯುತ್ತಿದ್ದಾರೆ. “ಇದು ಪೊಲೀಸ್ ಗುಂಡಿನ ದಾಳಿ ಪ್ರಕರಣವಾಗಿದ್ದು, ಸಾಂಟಾ ಕ್ಲಾರಾ ಕೌಂಟಿ ಜಿಲ್ಲಾ ವಕೀಲರ ಕಚೇರಿ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ತನಿಖೆ ನಡೆಸುತ್ತಿವೆ. ತನಿಖೆ ಇನ್ನೂ ಮುಂದುವರಿದಿದ್ದು, ಶೀಘ್ರದಲ್ಲೇ ನವೀಕರಣ ನೀಡಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ,…