ಆಪರೇಷನ್ ಸಿಂಧೂರ್‌ ನಂತರ: 15 ವರ್ಷಗಳ ರಕ್ಷಣಾ ಮಾರ್ಗಸೂಚಿ ಅನಾವರಣ

ನವದೆಹಲಿ: ಆಪರೇಷನ್ ಸಿಂಧೂರ್‌ ಯಶಸ್ವೀ ಕಾರ್ಯಾಚರಣೆಯ ನಾಲ್ಕು ತಿಂಗಳ ನಂತರ, ಮೋದಿ ಸರ್ಕಾರವು ಭಾರತೀಯ ಸಶಸ್ತ್ರ ಪಡೆಗಳ ಶಕ್ತಿಯನ್ನು ಅಭಿವೃದ್ಧಿಪಡಿಸಲು 15 ವರ್ಷದ ಉದ್ದೇಶಿತ ಮಾರ್ಗಸೂಚಿಯನ್ನು ಅನಾವರಣಗೊಳಿಸಿದೆ. ಈ ಅವಧಿಯಲ್ಲಿ ದೇಶದ ಸೇನೆ ಶತಕೋಟಿ ಡಾಲರ್‌ ಹೂಡಿಕೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಪರಿವರ್ತನೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಸೇನೆ ಸೋವಿಯತ್ ಯುಗದ T-72 ಟ್ಯಾಂಕ್‌ ಫ್ಲೀಟ್‌ ಬದಲಿಸಲು ಸುಮಾರು 1,800 ಮುಂದಿನ ತಲೆಮಾರಿಯ ಟ್ಯಾಂಕ್‌ಗಳನ್ನು ಪಡೆಯಲಿದೆ. ಜೊತೆಗೆ 400 ಪರ್ವತ ಯುದ್ಧ ಲಘು ಟ್ಯಾಂಕ್‌ಗಳು, 50,000 ಟ್ಯಾಂಕ್-ವಿರೋಧಿ ಮಾರ್ಗದರ್ಶಿತ ಕ್ಷಿಪಣಿಗಳು ಮತ್ತು 700ಕ್ಕೂ ಹೆಚ್ಚು ರೋಬೋಟಿಕ್ ಕೌಂಟರ್-IED ವ್ಯವಸ್ಥೆಗಳನ್ನೂ ಸೇರಿಸಲಾಗಿದೆ. ನೌಕಾಪಡೆಗೆ ಹೊಸ ವಿಮಾನವಾಹಕ ನೌಕೆ, 10 ಮುಂದಿನ ಪೀಳಿಗೆಯ ಯುದ್ಧನೌಕೆಗಳು, 7 ಸುಧಾರಿತ ಕಾರ್ವೆಟ್‌ಗಳು ಹಾಗೂ 4 ಲ್ಯಾಂಡಿಂಗ್ ಡಾಕ್ ಪ್ಲಾಟ್‌ಫಾರ್ಮ್‌ಗಳನ್ನು ಪಡೆಯಲಿದೆ. ವಾಯುಪಡೆಗೆ 75 ಎತ್ತರದ UAV ಉಪಗ್ರಹಗಳು, 150 ಸ್ಟೆಲ್ತ್…

RSS ಮೂರು ದಿನಗಳ ಸಮನ್ವಯ ಬೈಠಕ್; ಪ್ರಮುಖ ನಿರ್ಧಾರಗಳತ್ತ ಸಂಘ ಕಾರ್ಯಕರ್ತರ ಚಿತ್ತ

ಜೋಧ್‌ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ಅದರ ಅಂಗಸಂಸ್ಥೆಗಳ ಮೂರು ದಿನಗಳ ಅಖಿಲ ಭಾರತ ಸಮನ್ವಯ ಸಭೆ ಶುಕ್ರವಾರ ಜೋಧ್‌ಪುರದಲ್ಲಿ ಆರಂಭವಾಯಿತು. ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಸಂಘಟನಾ ಮಂತ್ರದ ಸಾಮೂಹಿಕ ಪಠಣದೊಂದಿಗೆ ಕಾರ್ಯಕಲಾಪಗಳು ಪ್ರಾರಂಭವಾದವು. ಮೂರು ದಿನಗಳ ಈ ಸಭೆಯಲ್ಲಿ 32 ಅಂಗಸಂಸ್ಥೆಗಳ ರಾಷ್ಟ್ರೀಯ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಆರು ಸಹಸರ್ಕಾರ್ಯವಾಹರು, ವಿಎಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್, ರಾಷ್ಟ್ರೀಯ ಸೇವಿಕಾ ಸಮಿತಿಯ ಶಾಂತಾ ಅಕ್ಕ, ಎಬಿವಿಪಿ ಅಧ್ಯಕ್ಷ ಡಾ. ರಾಜಶರಣ್ ಶಾಹಿ, ಸಕ್ಶಮ್ ಅಧ್ಯಕ್ಷ ಡಾ. ದಯಾಳ್ ಸಿಂಗ್ ಪವಾರ್, ವನವಾಸಿ ಕಲ್ಯಾಣ ಆಶ್ರಮದ ಸತ್ಯೇಂದ್ರ ಸಿಂಗ್ ಸೇರಿದಂತೆ ಹಲವರು ಹಾಜರಿದ್ದಾರೆ. ಬಿಜೆಪಿಯಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹಾಗೂ ಸಂಘಟನಾ…

ಸಿದ್ದು ಸರ್ಕಾರದಲ್ಲಿ ಕಮೀಷನ್ ತಲ್ಲಣ; ಭೋವಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ

ಬೆಂಗಳೂರು: ರಾಜ್ಯ ಭೋವಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆರೋಪದ ನಡುವೆಯೇ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರೆಂಬ ಸುದ್ದಿ ಕುತೂಹಲ ಕೆರಳಿಸಿದೆ. ಕಮಿಷನ್ ವಸೂಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರಿಂದ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ. ಸುಮಾರು ₹15 ಕೋಟಿ ವೆಚ್ಚದಲ್ಲಿ ಜಾರಿಗೊಂಡ ಭೂಒಡೆತನ ಯೋಜನೆಯಡಿ 60 ಎಕರೆ ಭೂಮಿ ಖರೀದಿ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಪ್ರಕ್ರಿಯೆಯಲ್ಲಿ, ಶೇಕಡ 60ರಷ್ಟು ಕಮಿಷನ್ ವಸೂಲಿ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿತ್ತು. ಈ ಸಂಬಂಧಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಷಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದರೆ, ರವಿಕುಮಾರ್ ಅವರು ಆರೋಪಗಳನ್ನು ತಳ್ಳಿಹಾಕಿದ್ದರು. ಆದಾಗ್ಯೂ ಪಕ್ಷಕ್ಕೆ ಮುಜುಗರ ಉಂಟಾಗದಂತೆ…

33 ಕ್ಯಾನ್ಸರ್, ಅಪರೂಪದ ಕಾಯಿಲೆ ಔಷಧಿಗಳಿಗೆ ಜಿಎಸ್‌ಟಿ ವಿನಾಯಿತಿ – ಜೀವ ರಕ್ಷಕ ಔಷಧಿಗಳ ಬೆಲೆ ಇಳಿಕೆ

ನವದೆಹಲಿ: ಜೀವ ರಕ್ಷಕ ಔಷಧಿಗಳನ್ನು ಸಾಮಾನ್ಯ ಜನತೆಗೆ ಇನ್ನಷ್ಟು ಕೈಗೆಟುಕುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, 33 ಕ್ಯಾನ್ಸರ್ ಹಾಗೂ ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇಕಡಾ 12ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಜೀವ ಉಳಿಸುವ ಔಷಧಿಗಳಿಗೆ ಶೂನ್ಯ ತೆರಿಗೆ ಕ್ಯಾನ್ಸರ್, ಅಪರೂಪದ ಕಾಯಿಲೆಗಳು ಹಾಗೂ ಇತರ ಗಂಭೀರ ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳು ಜಿಎಸ್‌ಟಿ ವಿನಾಯಿತಿಗೆ ಒಳಪಡಲಿವೆ. ಹಲವಾರು ಔಷಧಿಗಳು ಶೇಕಡಾ 12ರಿಂದ 5ಕ್ಕೆ ಇಳಿಯುತ್ತವೆ. ದೃಷ್ಟಿ ಸರಿಪಡಿಸುವ ಕನ್ನಡಕ, ಫ್ರೇಮ್‌ಗಳು ಶೇಕಡಾ 28ರಿಂದ 5ಕ್ಕೆ ಇಳಿಯುತ್ತವೆ. ಆರೋಗ್ಯ ಸೇವೆಗೂ ರಿಲೀಫ್ ವೈಯಕ್ತಿಕ ಆರೋಗ್ಯ ಹಾಗೂ ಜೀವ ವಿಮೆ ಪ್ರೀಮಿಯಂಗಳ ಮೇಲಿನ ಜಿಎಸ್‌ಟಿ (18%) ಶೂನ್ಯಕ್ಕೆ ಇಳಿಕೆ. ವೈದ್ಯಕೀಯ ಆಮ್ಲಜನಕ, ರೋಗನಿರ್ಣಯ ಕಿಟ್‌ಗಳು,…

ಜಿಎಸ್‌ಟಿ ಸುಧಾರಣೆ: ಪ್ರಧಾನಿ ಮೋದಿ ನಾಯಕತ್ವಕ್ಕೆ ಗಣ್ಯರಿಂದ ಶ್ಲಾಘನೆ

ನವದೆಹಲಿ: ಜಿಎಸ್‌ಟಿ ದರ ಇಳಿಕೆ ಮತ್ತು ಪ್ರಕ್ರಿಯೆ ಸುಧಾರಣೆಗಳನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಕೇಂದ್ರದ ಹಲವಾರು ಸಚಿವರು ಹಾಗೂ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು, “ಬಡವರು, ಮಧ್ಯಮ ವರ್ಗ, ರೈತರು, ಮಹಿಳೆಯರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಪರಿಹಾರ. ಸಾಮಾನ್ಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಈ ತೀರ್ಮಾನ ನಿಜವಾಗಿಯೂ ಪರಿವರ್ತನಾತ್ಮಕ” ಎಂದು ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದನ್ನು “ಧೈರ್ಯಶಾಲಿ ನಿರ್ಧಾರ” ಎಂದು ಕರೆಯುತ್ತಾ, “ಜೀವನ ಮತ್ತು ವ್ಯಾಪಾರ ಸುಲಭವಾಗಲು ಈ ಸುಧಾರಣೆ ದಾರಿಯಾಗಿದೆ” ಎಂದು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು, “NextGen GST ಸುಧಾರಣೆಗಳು ದೇಶದಲ್ಲಿ ನಡೆಯುತ್ತಿರುವ ಪರಿವರ್ತನೆಗೆ ಬಲ ನೀಡುತ್ತವೆ” ಎಂದು…

ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಂದಣಿ ಪ್ರಕ್ರಿಯೆ ಇನ್ನಷ್ಟು ಸರಳ

ನವದೆಹಲಿ: ಸಣ್ಣ ಹಾಗೂ ಕಡಿಮೆ ಅಪಾಯದ ವ್ಯವಹಾರಗಳಿಗೆ ಜಿಎಸ್‌ಟಿ ನೋಂದಣಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸುಲಭಗೊಳಿಸಿದೆ. ವ್ಯಾಪಾರ ಮಾಡುವ ಸುಲಭ ಸುಧಾರಣೆಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬುಧವಾರ ಸರ್ಕಾರ ತಿಳಿಸಿದೆ. ಹೊಸ ವ್ಯವಸ್ಥೆಯಡಿ, ಅರ್ಹ ಅರ್ಜಿದಾರರಿಗೆ ಕೇವಲ ಮೂರು ಕೆಲಸದ ದಿನಗಳಲ್ಲಿ ನೋಂದಣಿ ಲಭ್ಯವಾಗಲಿದೆ. ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಅಧ್ಯಕ್ಷ ಸಂಜಯ್ ಕುಮಾರ್ ಅಗರ್ವಾಲ್ ಹೇಳುವಂತೆ, ₹2.5 ಲಕ್ಷಕ್ಕಿಂತ ಹೆಚ್ಚು ಇನ್‌ಪುಟ್ ತೆರಿಗೆ ಕ್ರೆಡಿಟ್ ಪಡೆಯದ ಸಣ್ಣ ವ್ಯವಹಾರಗಳು ಈ ಸರಳೀಕೃತ ನೋಂದಣಿಯನ್ನು ಆಯ್ಕೆ ಮಾಡಬಹುದು. ಮುಂದಿನ ದಿನಗಳಲ್ಲಿ ಅವರು ವಿಸ್ತಾರಗೊಂಡು ಸಾಮಾನ್ಯ ನೋಂದಣಿಗೆ ಬಯಸಿದರೆ, ಅಪಾಯ ಮೌಲ್ಯಮಾಪನದ ಆಧಾರದ ಮೇಲೆ ಸಾಮಾನ್ಯ ವರ್ಗಕ್ಕೆ ಪರಿವರ್ತಿಸಬಹುದಾಗಿದೆ. ಮರುಪಾವತಿ ಪ್ರಕ್ರಿಯೆಗೂ ಸುಧಾರಣೆ ಮರುಪಾವತಿಗೆ ಸಂಬಂಧಿಸಿದಂತೆ ಈಗಿರುವ ವ್ಯವಸ್ಥೆಯಲ್ಲಿ ತಿದ್ದುಪಡಿ ಮಾಡಲು ಜಿಎಸ್‌ಟಿ ಕೌನ್ಸಿಲ್ ಶಿಫಾರಸು ಮಾಡಿದೆ. ತಾತ್ಕಾಲಿಕ ಆಧಾರದ…

GST ಪರಿಷ್ಕರಣೆ: ಜನಸಾಮಾನ್ಯರು ನಿರಾಳ, ಶ್ರೀಮಂತರಿಗೆ ಹೊರೆ..

ನವದೆಹಲಿ:ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಜಿಎಸ್‌ಟಿ ಪರಿಷ್ಕರಣೆಯ ಭರವಸೆ ಈಗ ಜಾರಿಯಾಗಿದೆ. ದೀಪಾವಳಿಯ ಮುನ್ನವೇ ಕೇಂದ್ರ ಸರ್ಕಾರ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರಗಳನ್ನು ಇಳಿಸುವ ಮೂಲಕ ಜನತೆಗೆ “ಉಡುಗೊರೆ” ನೀಡಿದೆ. ಹೊಸ ತಿದ್ದುಪಡಿ ಪ್ರಕಾರ ಶೇಕಡಾ 5 ಮತ್ತು 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಮುಂದುವರಿಸಲಾಗಿದ್ದು, ಶೇಕಡಾ 12 ಹಾಗೂ 28ರ ಸ್ಲ್ಯಾಬ್‌ಗಳನ್ನು ರದ್ದುಪಡಿಸಲಾಗಿದೆ. ಇದರ ಪರಿಣಾಮವಾಗಿ ಅನೇಕ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಜೊತೆಗೆ, ಹಲವಾರು ವಸ್ತುಗಳನ್ನು ಸಂಪೂರ್ಣ ತೆರಿಗೆ ಮುಕ್ತಗೊಳಿಸಲಾಗಿದೆ. ಐಷಾರಾಮಿ ವಸ್ತುಗಳಿಗೆ 40% ತೆರಿಗೆ ಮಧ್ಯಮ ವರ್ಗ ಹಾಗೂ ಬಡವರ ಹಿತದೃಷ್ಟಿಯಿಂದ ತೆರಿಗೆ ಕಡಿತ ಮಾಡಿರುವ ಸರ್ಕಾರ, ಐಷಾರಾಮಿ ವಸ್ತುಗಳ ಮೇಲಂತೂ ತೆರಿಗೆ ಭಾರ ಹೆಚ್ಚಿಸಿದೆ. ಇದುವರೆಗೆ ಶೇಕಡಾ 28ರ ತೆರಿಗೆ ವಿಧಿಸಲಾಗುತ್ತಿದ್ದ ಐಷಾರಾಮಿ ವಸ್ತುಗಳಿಗೆ ಇನ್ಮುಂದೆ ಶೇಕಡಾ 40ರ ಜಿಎಸ್‌ಟಿ ಅನ್ವಯವಾಗಲಿದೆ. ಹೊಸ ಸ್ಲ್ಯಾಬ್‌ಗೆ ಒಳಪಡುವ ವಸ್ತುಗಳು:…

GST ಪರಿಷ್ಕರಣೆ: ಹಲವು ವಸ್ತುಗಳ ಬೆಲೆ ಇಳಿಕೆ, ಈ ವಸ್ತುಗಳಿಗೆ ತೆರಿಗೆಯೇ ಇಲ್ಲ

ನವದೆಹಲಿ: ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪರಿಷ್ಕರಣೆಯ ಭರವಸೆ ನೀಡಿದ್ದರು. ಅದರಂತೆಯೇ ಕೇಂದ್ರ ಸರ್ಕಾರ ಹಲವು ವಸ್ತುಗಳ ಜಿಎಸ್‌ಟಿ ದರ ಇಳಿಸುವ ಮೂಲಕ ದೇಶದ ಜನರಿಗೆ ಗುಡ್ ನ್ಯೂಸ್ ನೀಡಿದೆ. ದೀಪಾವಳಿ ಮುನ್ನ ಗಿಫ್ಟ್ ನೀಡುವುದಾಗಿ ಮೋದಿ ನೀಡಿರುವ ಭರವಸೆ ಇದೀಗ ಕಾರ್ಯರೂಪಕ್ಕೆ ಬಂದಿದೆ. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಂಡು ಶೇ 12 ಮತ್ತು ಶೇ 28ರ ಸ್ಲ್ಯಾಬ್​ಗಳನ್ನು ರದ್ದು ಮಾಡಲಾಗಿದೆ. ಕೇಂದ್ರದ ಈ ನಿರ್ಧಾರದಿಂದಾಗಿ ಹಾಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ.ಇದೇ ಸಂದರ್ಭದಲ್ಲಿ ಹಲವು ವಸ್ತುಗಳನ್ನು ತೆರಿಗೆ ಮುಕ್ತ ಗೊಳಿಸಲಾಗಿದೆ. ಈ ಕೆಲವು ವಸ್ತುಗಳಿಗೆ ಜಿಎಸ್​ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈ ವರೆಗೂ ಶೇ 5 ರ ಜಿಎಸ್​ಟಿ ಸ್ಲ್ಯಾಬ್​​ ಅಡಿ…

“ನಾನು ಸಂಪೂರ್ಣವಾಗಿ ನಕಾರಾತ್ಮಕ ಪಾತ್ರ ಮಾಡಬೇಕು”: ಅನುಷ್ಕಾ ಶೆಟ್ಟಿ

ಚೆನ್ನೈ: ತೆಲುಗು ಸಿನಿರಂಗದ ಅಗ್ರ ನಟಿ ಅನುಷ್ಕಾ ಶೆಟ್ಟಿ, ತಮ್ಮ ಮುಂದಿನ ಆಕ್ಷನ್ ಎಂಟರ್‌ಟೈನರ್ ‘ಘಾಟಿ’ ಬಿಡುಗಡೆ ಸಿದ್ಧತೆಗಳಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮುಂದಿನ ಕನಸಿನ ಪಾತ್ರದ ಬಗ್ಗೆ ಆಸಕ್ತಿಕರ ಬಹಿರಂಗಪಡಿಸಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅನುಷ್ಕಾ, “ನಾನು ಇನ್ನೂ ಸಂಪೂರ್ಣವಾಗಿ ನಕಾರಾತ್ಮಕ ಪಾತ್ರ ಮಾಡಿಲ್ಲ. ಆದರೆ ಬಲವಾದ ಪಾತ್ರ ಸಿಕ್ಕರೆ, ಖಂಡಿತವಾಗಿ ನಕಾರಾತ್ಮಕ ಪಾತ್ರ ಮಾಡಲು ಬಯಸುತ್ತೇನೆ” ಎಂದರು. 20 ವರ್ಷಗಳ ಯಶಸ್ವಿ ಸಿನಿಪಯಣವನ್ನು ಪೂರೈಸಿರುವ ಅನುಷ್ಕಾ, ಅರುಂಧತಿ, ರುದ್ರಮದೇವಿ, ಬಾಹುಬಲಿ ಮತ್ತು ಭಾಗಮತಿಯಂತಹ ಚಿತ್ರಗಳಲ್ಲಿ ಶಕ್ತಿಶಾಲಿ ಪಾತ್ರಗಳನ್ನು ನಿರ್ವಹಿಸಿದ್ದರು. ಘಾಟಿಯಲ್ಲಿ ಅವರು ಅಭಿನಯಿಸಿರುವ ಶೀಲಾವತಿ ಪಾತ್ರವೂ ಅಷ್ಟೇ ಪ್ರಬಲವಾಗಿದ್ದು, ಹಲವು ಹೊಸ ಛಾಯೆಗಳನ್ನು ಒಳಗೊಂಡಿದೆ ಎಂದು ಹೇಳಿದರು. “ಪ್ರತಿ ಮಹಿಳೆಯೂ ಸರಳವಾಗಿ ಕಾಣಬಹುದು, ಆದರೆ ಅವಶ್ಯಕತೆಯ ಸಮಯದಲ್ಲಿ ಬಲವಾದ ಆಧಾರವಾಗುತ್ತಾರೆ. ಕ್ರಿಶ್ ಸಾರ್ ಈ ಗುಣವನ್ನು ಹಿಡಿದುಕೊಂಡು ಶೀಲಾವತಿ ಎಂಬ ಅದ್ಭುತ…

ಅಮಿತ್ ಶಾ ವಿರುದ್ಧ ನಿವೃತ್ತ ನ್ಯಾಯಮೂರ್ತಿಗಳ ಸಹಿ ಅಭಿಯಾನ ‘ಅನುಚಿತ’: ಕಿರಣ್ ರಿಜಿಜು

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಆರಂಭಿಸಿದ ಸಹಿ ಅಭಿಯಾನವನ್ನು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು “ಅನುಚಿತ, ಅಸಂವಿಧಾನಿಕ” ಎಂದು ಟೀಕಿಸಿದ್ದಾರೆ. “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸಂಸದೀಯ ವ್ಯವಸ್ಥೆ” ಎಂಬ ವಿಷಯದ ಕುರಿತಂತೆ ಬೆಂಗಳೂರಿನಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಉಪರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಾರಂಭವಾದ ಸಹಿ ಅಭಿಯಾನವು ಸಂಪೂರ್ಣವಾಗಿ ರಾಜಕೀಯ ವಿಷಯವಾಗಿದ್ದು, ನಿವೃತ್ತ ನ್ಯಾಯಾಧೀಶರ ನಡೆ ದೇಶಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ರಿಜಿಜು ಅಭಿಪ್ರಾಯಪಟ್ಟರು. “ಅವರು ಹುದ್ದೆಯಲ್ಲಿ ಇದ್ದಾಗಲೂ ಸೈದ್ಧಾಂತಿಕವಾಗಿ ಪಕ್ಷಪಾತ ಹೊಂದಿದ್ದಿರಬಹುದು” ಎಂದು ವ್ಯಂಗ್ಯವಾಡಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿರುವುದನ್ನು ಖಂಡಿಸಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ…