ಕೇರಳ: ಬಿಜೆಪಿ ಅಭ್ಯರ್ಥಿ, ಕೇರಳದ ಮೊದಲ ಮಹಿಳಾ ಡಿಜಿಪಿ ಶ್ರೀಲೇಖಾ ಜಯಭೇರಿ

ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್‌ನ ಶಾಸ್ತಮಂಗಲಂ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇರಳದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ) ಶ್ರೀಲೇಖಾ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಗರಸಭೆ ಅಧಿಕಾರ ವಶಪಡಿಸಿಕೊಳ್ಳುವ ಪೈಪೋಟಿಯಲ್ಲಿ ಬಿಜೆಪಿ ತನ್ನ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ತಿರುವನಂತಪುರಂ ಕಾರ್ಪೊರೇಷನ್ ನಿಯಂತ್ರಣಕ್ಕಾಗಿ ಮೂರು ಪ್ರಮುಖ ರಾಜಕೀಯ ಮೈತ್ರಿಗಳ ನಡುವೆ ಕಠಿಣ ಸ್ಪರ್ಧೆ ನಡೆಯುತ್ತಿರುವ ಸಂದರ್ಭದಲ್ಲೇ ಶ್ರೀಲೇಖಾ ಅವರ ಜಯ ಲಭಿಸಿದೆ. ರಾಜಧಾನಿಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗವನ್ನು ಅಧಿಕಾರದಿಂದ ದೂರ ಸರಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಕ್ಕೆ ಈ ಗೆಲುವು ಸಾಂಕೇತಿಕ ಹಾಗೂ ರಾಜಕೀಯ ಉತ್ತೇಜನವಾಗಿದೆ ಎಂದು ಪಕ್ಷ ವಿಶ್ಲೇಷಿಸಿದೆ. ಪ್ರಸ್ತುತ ಲಭ್ಯ ಮಾಹಿತಿಯಂತೆ, 101 ಸದಸ್ಯರ ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ 34 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಡಪಕ್ಷಗಳು 20 ಸ್ಥಾನಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ವರ್ಷದ ಆರಂಭದಲ್ಲೇ ಶ್ರೀಲೇಖಾ…

ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಕಂದಕಕ್ಕೆ ಉರುಳಿಬಿದ್ದ ಬಸ್; 9 ಮಂದಿ ಸಾವು

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಬಸ್ ಕಂದಕಕ್ಕೆ ಉರುಳಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. 22 ಮಂದಿಗೆ ಗಾಯಗೊಂಡಿದ್ದಾರೆ. ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿ ಶುಕ್ರವಾರ ನಸುಕಿನ ಜಾವ ಖಾಸಗಿ ಟ್ರಾವೆಲ್ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದೆ. ವಿವಿಧ ದೇವಸ್ಥಾನಗಳಿಗೆ ಯಾತ್ರೆ ಹೊರಟಿದ್ದವರ ವಾಹನ ಅಪಘಾತಕ್ಕೀಡಾಗಿದೆ. 35 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಇದಾಗಿತ್ತು. ಭದ್ರಾಚಲಂ ದೇವಸ್ಥಾನದ ದರ್ಶನ ಪಡೆದು ಅನ್ನಾವರಂ ಕಡೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕ್ಷಯ, ಮಧುಮೇಹ ಚಿಕಿತ್ಸೆಯಲ್ಲಿ AI ಬಳಕೆ ವೇಗ..!

ನವದೆಹಲಿ: ದೇಶದ ಸಾರ್ವಜನಿಕ ಆರೋಗ್ಯ ಸೇವೆಗಳಲ್ಲಿ ಪರಿವರ್ತನಾತ್ಮಕ ಬದಲಾವಣೆ ತರಲು ಕೇಂದ್ರ ಸರ್ಕಾರ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಂಡಿದೆ. ವಿಶೇಷವಾಗಿ ಕ್ಷಯರೋಗ ಹಾಗೂ ಮಧುಮೇಹದ ಹೆಚ್ಚುತ್ತಿರುವ ಹೊರೆಯನ್ನು ನಿಭಾಯಿಸುವಲ್ಲಿ AI ಆಧಾರಿತ ರೋಗನಿರ್ಣಯ ಸಾಧನಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಲೋಕಸಭೆಯಲ್ಲಿ ತಿಳಿಸಿದರು. ಸಚಿವಾಲಯವು AIIMS ದೆಹಲಿ, PGIMER ಚಂಡೀಗಢ ಮತ್ತು AIIMS ಋಷಿಕೇಶವನ್ನು ‘AI ಶ್ರೇಷ್ಠತೆಯ ಕೇಂದ್ರ’ವಾಗಿ ಗುರುತಿಸಿ, ಆರೋಗ್ಯ ಕ್ಷೇತ್ರದಲ್ಲಿ AI ಪರಿಹಾರಗಳ ಅಭಿವೃದ್ಧಿಗೆ ಒತ್ತು ನೀಡಿದೆ ಎಂದು ಜಾಧವ್ ಲಿಖಿತ ಉತ್ತರದಲ್ಲಿ ಹೇಳಿದರು. ಮಧುಮೇಹ ರೆಟಿನೋಪಥಿ ಪತ್ತೆಗೆ AI — ‘ಮಧುನೇತ್ರAI’ ಮಧುಮೇಹ ಸಂಬಂಧಿತ ಕಣ್ಣಿನ ಸಮಸ್ಯೆಗಳನ್ನು ತ್ವರಿತವಾಗಿ ಗುರುತಿಸಲು ‘ಮಧುನೇತ್ರAI’ ಎಂಬ AI ಆಧಾರಿತ ಪರಿಹಾರ ಅಭಿವೃದ್ಧಿಯಾಗಿದೆ. ತಜ್ಞರಲ್ಲದ ಆರೋಗ್ಯ ಕಾರ್ಯಕರ್ತರೂ ಫಂಡಸ್ ಚಿತ್ರಗಳನ್ನು ತೆಗೆದು AI…

ಕೋಲಾರ ಜನರಿಗೆ ರೈಲು ಸಮಸ್ಯೆ: ಕೇಂದ್ರದ ಗಮನಸೆಳೆದ ಸಂಸದ ಮಲ್ಲೇಶ್‌ ಬಾಬು

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ. ಮಲ್ಲೇಶ್‌ ಬಾಬು ಅವರು ತಮ್ಮ ಕ್ಷೇತ್ರದ ರೈಲು ಸಂಬಂಧಿತ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಕೋಲಾರದ ಕೆ.ಜಿ.ಎಫ್, ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಿಂದ ಪ್ರತಿದಿನ 25 ರಿಂದ 30 ಸಾವಿರ ಜನರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪ್ರಯಾಣಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಈ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಸ್ತುತ 12 ಬೋಗಿಗಳಿರುವ ರೈಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಲು ರೈಲ್ವೆ ಸಚಿವಾಲಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಕೋಲಾರ–ವೈಟ್‌ಫೀಲ್ಡ್ ನಡುವೆ ನರಸಾಪುರ ಮತ್ತು ಹೊಸಕೋಟೆ ಮೂಲಕ 52.9 ಕಿಮೀ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ನಡೆದಿರುವ ಸಮೀಕ್ಷೆ ಪೂರ್ಣಗೊಂಡಿರುವುದನ್ನೂ ಅವರು ಗಮನಕ್ಕೆ ತಂದರು. ಸಾರ್ವಜನಿಕರಿಗೆ ಬಹಳ ಉಪಕಾರಿಯಾಗುವ ಈ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ನೀಡಬೇಕೆಂದು ಸಂಸದರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು. <blockquote class=”twitter-tweet” data-media-max-width=”560″><p lang=”kn” dir=”ltr”>ಸಂಸತ್ತಿನ ಚಳಿಗಾಲದ…

ಪುಟಿನ್‌ಗೆ ಪ್ರಧಾನಿ ಮೋದಿ ಸ್ವಾಗತ; ಒಪ್ಪಂದಗಳಿಗೆ ಸಹಿ ನಿರೀಕ್ಷೆ

ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಅಧಿಕೃತ ಭಾರತ ಭೇಟಿಗೆ ಗುರುವಾರ ರಾತ್ರಿ ನವದೆಹಲಿಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. In a notable departure from usual practice, Prime Minister Shri @narendramodi personally welcomed Russian President Vladimir Putin upon his arrival at the Delhi airport. President Putin is undertaking a two-day State visit to India, during which he will participate in the 23rd… pic.twitter.com/n89gV1S6XX — BJP (@BJP4India) December 4, 2025 ವಿಮಾನದಿಂದ ಇಳಿದ ಬಳಿಕ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡು ಮಾತನಾಡಿದರು. ಬಳಿಕ ಅಲ್ಪಕಾಲದ ಸಾಂಸ್ಕೃತಿಕ ಸ್ವಾಗತ ಕಾರ್ಯಕ್ರಮವನ್ನು ವೀಕ್ಷಿಸಿದರು. ವಿಮಾನ ನಿಲ್ದಾಣದಿಂದ ಇಬ್ಬರೂ…

ಆಶಾ–ಅಂಗನವಾಡಿ ನೌಕರರ ಬೇಡಿಕೆಗಳಿಗೆ ಕೇಂದ್ರದಿಂದ ಹಸಿರು ನಿಶಾನೆ

ನವದೆಹಲಿ: ಆರೋಗ್ಯ ಹಾಗೂ ಮಕ್ಕಳ ಪೋಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ, ಅಂಗನವಾಡಿ ಮತ್ತು ಅಕ್ಷರ ದಾಸೋಹಿ ನೌಕರರ ಬಹುಕಾಲದ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂಧಿಸಿದೆ. ಕೇಂದ್ರ ಸಚಿವರಾದ ಅನ್ನಪೂರ್ಣಾ ದೇವಿ ಮತ್ತು ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಮಹತ್ವದ ಮಾತುಕತೆ ನಡೆಸಿದರು. ಹೋರಾಟ ನಿರತ ನೌಕರರನ್ನು ನವದೆಹಲಿಗೆ ಕರೆಸಿಕೊಂಡ ಕುಮಾರಸ್ವಾಮಿ, ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಶಾಸ್ತ್ರಿ ಭವನ ಕಚೇರಿಗೆ ಕರೆದುಕೊಂಡು ಹೋಗಿ, ಸಚಿವೆ ಅನ್ನಪೂರ್ಣಾ ದೇವಿ ಅವರನ್ನು ಭೇಟಿ ಮಾಡಿಸಿದರು. ಕರ್ನಾಟಕದ 12 ಮಂದಿ ನೌಕರರ ನಿಯೋಗ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಮುಖ್ಯ ಬೇಡಿಕೆಗಳ ಚರ್ಚೆ: ಚರ್ಚೆಯಲ್ಲಿ ಎಫ್‌ಆರ್‌ಎಸ್ ನೀತಿ ಪರಿಷ್ಕರಣೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಚುನಾವಣಾ ಕರ್ತವ್ಯದಿಂದ ವಿನಾಯಿತಿ, ವಿಮಾ ಸೌಲಭ್ಯ, ವೇತನ ಹೆಚ್ಚಳ—ಇತ್ಯಾದಿ…

ಕರ್ನಾಟಕದಲ್ಲಿ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ; ಕೇಂದ್ರ ಸರ್ಕಾರದ ಗಮನಸೆಳೆದ ಕಾಂಗ್ರೆಸ್ ಸಂಸದೆ

ನವದೆಹಲಿ: ದಾವಣಗೆರೆ ಸೇರಿದಂತೆ ಕರ್ನಾಟಕದಲ್ಲಿ ಪ್ರತಿಷ್ಠಿತ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಸದೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಕೇಂದ್ರದ ಗಮನಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಮೊಬೈಲ್ ಸಂಪರ್ಕ ಸಮಸ್ಯೆ ಹಾಗೂ ಅದರಿಂದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಜನರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. I would like to raise a matter related to the installation of BSNL mobile tower in my constituency, Davanagere. Bridging the digital divide and ensuring last-mile connectivity are core pillars of the Digital India Mission. Yet, people in many villages in my Davanagere… pic.twitter.com/dwz20InyvR — Congress (@INCIndia) December 3, 2025

ಕದ್ದ, ಕಳೆದುಹೋದ 42 ಲಕ್ಷಕ್ಕೂ ಹೆಚ್ಚು ಮೊಬೈಲ್‌ಗಳು ಬ್ಲಾಕ್ ಮಾಡಿದ ‘ಸಂಚಾರ್ ಸಾಥಿ’

ನವದೆಹಲಿ: ಈ ವರ್ಷದ ಜನವರಿ 17ರಂದು ಬಿಡುಗಡೆಗೊಂಡ ನಂತರದಿಂದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ 1.4 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ದಾಖಲಿಸಿದ್ದು, 42 ಲಕ್ಷಕ್ಕೂ ಹೆಚ್ಚು ಕದ್ದ ಅಥವಾ ಕಳೆದುಹೋದ ಮೊಬೈಲ್ ಸಾಧನಗಳನ್ನು ನಿರ್ಬಂಧಿಸಲು ಯಶಸ್ವಿಯಾಗಿದೆ ಎಂದು ಮಂಗಳವಾರ ಹೊರಬಿದ್ದ ಅಧಿಕೃತ ದತ್ತಾಂಶಗಳು ತಿಳಿಸಿವೆ. ಇಲ್ಲಿಯವರೆಗೆ 26 ಲಕ್ಷ ಕಳೆದುಹೋದ/ಕಳುವಾದ ಫೋನ್‌ಗಳನ್ನು ಪತ್ತೆಹಚ್ಚಲಾಗಿದ್ದು, ಅವುಗಳಲ್ಲಿ 7.23 ಲಕ್ಷ ಸಾಧನಗಳನ್ನು ಸಂಚಾರ್ ಸಾಥಿಯ ಮೂಲಕ ಹಿಂತಿರುಗಿಸಲಾಗಿದೆ. ಸಂಪೂರ್ಣವಾಗಿ ಸ್ವಯಂಪ್ರೇರಿತ ಮತ್ತು ಬಳಕೆದಾರರ ಒಪ್ಪಿಗೆಯಿಂದ ಮಾತ್ರ ಕಾರ್ಯನಿರ್ವಹಿಸುವ ಈ ವೇದಿಕೆ ಗೌಪ್ಯತೆ-ಪ್ರಥಮ ನೀತಿಯನ್ನು ಅನುಸರಿಸುತ್ತದೆ. ಅಪ್ಲಿಕೇಶನ್‌ ಸೇವೆಗಳನ್ನು ಬಳಕೆದಾರರು ನೋಂದಾಯಿಸಿದ ಬಳಿಕ ಮಾತ್ರ ಸಕ್ರಿಯಗೊಳ್ಳುತ್ತದೆ. ಯಾವುದೇ ಸಮಯದಲ್ಲಿಯೂ ಅದನ್ನು ಬಳಕೆದಾರರು ಸಕ್ರಿಯಗೊಳಿಸಬಹುದು, ನಿಷ್ಕ್ರಿಯಗೊಳಿಸಬಹುದು ಅಥವಾ ಅಳಿಸಬಹುದು. ಗೌಪ್ಯತೆ ಕದಲಾಗದಂತೆ ಭಾರತದೆಲ್ಲೆಡೆ ಸೈಬರ್ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಪ್ಲಿಕೇಶನ್ ವಿನ್ಯಾಸಗೊಳಿಸಲಾಗಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆದಾರರ ಸುರಕ್ಷತೆ ರಾಷ್ಟ್ರದ…

ಡಿಸೆಂಬರ್ 5ಕ್ಕೆ ಆರ್‌ಬಿಐ ರೆಪೊ ದರ 25 ಬಿಪಿಎಸ್ ಕಡಿತ ಸಾಧ್ಯತೆ ಎಂದ ಎಚ್‌ಎಸ್‌ಬಿಸಿ

ನವದೆಹಲಿ: ಹಣದುಬ್ಬರ ಗುರಿಗಿಂತ ಕೆಳಮಟ್ಟದಲ್ಲೇ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 5ರಂದು ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನೀತಿ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ 5.25% ಕ್ಕೆ ತರುವ ಸಾಧ್ಯತೆ ಇದೆ ಎಂದು ಎಚ್‌ಎಸ್‌ಬಿಸಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ರಿಸರ್ಚ್ ತನ್ನ ನವೀಕೃತ ವಿಶ್ಲೇಷಣೆಯಲ್ಲಿ ತಿಳಿಸಿದೆ. ಇಲ್ಲಿಯವರೆಗೆ ದೇಶದ ಆರ್ಥಿಕ ಚಟುವಟಿಕೆ ಸದೃಢವಾಗಿದ್ದು, ಸರ್ಕಾರಿ ವೆಚ್ಚದ ಮುಂಚೂಣಿ ಲೋಡಿಂಗ್ ಮತ್ತು ಜಿಎಸ್‌ಟಿ ಕಡಿತದ ನಂತರ ಚಿಲ್ಲರೆ ಖರ್ಚು ಹೆಚ್ಚಿರುವುದು ಬೆಳವಣಿಗೆಗೆ ಪೂರಕವಾಗಿದೆ. ಆದರೆ, ನವೆಂಬರ್ ತಿಂಗಳ ಫ್ಲ್ಯಾಶ್ ಉತ್ಪಾದನಾ ಪಿಎಂಐ 56.6 ಕ್ಕೆ ಇಳಿದಿರುವುದು, ಹೊಸ ಆದೇಶಗಳು ನಿಧಾನಗೊಂಡಿರುವ ಸೂಚನೆಯಾಗಿದೆ. ಜಿಎಸ್‌ಟಿ ಉತ್ತೇಜನದ ಪರಿಣಾಮಗಳು ಈಗ ಗರಿಷ್ಠ ಮಟ್ಟಕ್ಕೆ ತಲುಪಿದ್ದೇನೋ ಎಂಬ ಶಂಕೆಯನ್ನು ವರದಿ ವ್ಯಕ್ತಪಡಿಸಿದೆ. “ಪ್ರಸ್ತುತ ಬೆಳವಣಿಗೆ ಬಲವಾದರೂ, 2026ರ ಮಾರ್ಚ್ ತ್ರೈಮಾಸಿಕಕ್ಕೆ ಹಣಕಾಸು ಪ್ರಚೋದನೆ…

ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ 2 ಬಸ್ಸುಗಳ ಡಿಕ್ಕಿ; 11 ಮಂದಿ ಸಾವು

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕುಮ್ಮಂಗುಡಿ ಬಳಿ ಎರಡು ತಮಿಳುನಾಡು ಸರ್ಕಾರಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಪಯಿಸಿದ ಭೀಕರ ಅಪಘಾತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಪಿಳ್ಳೈಯಾರ್ಪಟ್ಟಿಸಮೀಪದ ತಿರುಪತ್ತೂರು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್ಸುಗಳ ಮುಖಭಾಗ ನುಜ್ಜುಗುಜ್ಜಾಗಿದೆ. ಬಸ್ಸುಗಳಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ