ಮಧ್ಯಪ್ರಾಚ್ಯ ಸಂಘರ್ಷದ ಕಾಟ: 2,100ಕ್ಕೂ ಹೆಚ್ಚು ಮಕ್ಕಳು ಸಾವು–ಗಾಯ – ಯುಎನ್

ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮವಾಗಿ 2,100ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು UNICEF ಉಪ ಕಾರ್ಯನಿರ್ವಾಹಕ ನಿರ್ದೇಶಕ ಟೆಡ್ ಚೈಬನ್ ತಿಳಿಸಿದ್ದಾರೆ. ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇವಲ 23 ದಿನಗಳಲ್ಲೇ ಪ್ರದೇಶದಾದ್ಯಂತ ಮಕ್ಕಳು ಭಾರೀ ಬೆಲೆ ಕಟ್ಟುತ್ತಿದ್ದಾರೆ. ಈ ಸಂಘರ್ಷ ಇನ್ನಷ್ಟು ವಿಸ್ತರಿಸಿದರೆ ಲಕ್ಷಾಂತರ ಜನರಿಗೆ ಮಹಾ ದುರಂತವಾಗಲಿದೆ” ಎಂದು ಎಚ್ಚರಿಸಿದರು. ಮಕ್ಕಳ ಸಾವುನೋವುಗಳ ವಿವರ ನೀಡಿದ ಚೈಬನ್, ಇರಾನ್‌ನಲ್ಲಿ 206, ಲೆಬನಾನ್‌ನಲ್ಲಿ 118, ಇಸ್ರೇಲ್‌ನಲ್ಲಿ 4 ಮತ್ತು ಕುವೈತ್‌ನಲ್ಲಿ 1 ಮಗು ಸಾವನ್ನಪ್ಪಿದೆ ಎಂದು ಹೇಳಿದರು. “ಯುದ್ಧ ಆರಂಭವಾದ ಬಳಿಕ ಪ್ರತಿದಿನ ಸರಾಸರಿ 87 ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಅಥವಾ ಗಾಯಗೊಳ್ಳುತ್ತಿದ್ದಾರೆ” ಎಂದು ಅವರು ವಿವರಿಸಿದರು. ಸಂಘರ್ಷದ ಪರಿಣಾಮವಾಗಿ ವ್ಯಾಪಕ ಮಟ್ಟದಲ್ಲಿ ಸ್ಥಳಾಂತರವೂ ನಡೆದಿದೆ. ಇರಾನ್‌ನಲ್ಲಿ ಸುಮಾರು 3.2 ಮಿಲಿಯನ್ ಜನರು, ಅದರಲ್ಲೂ 8.64 ಲಕ್ಷ ಮಕ್ಕಳು…

ಇರಾನ್ ಜೊತೆ ಮಾತುಕತೆ ಪ್ರಗತಿಯಲ್ಲಿವೆ ಎಂದ ಟ್ರಂಪ್; ಟೆಹ್ರಾನ್ ಸ್ಪಷ್ಟ ನಿರಾಕರಣೆ

ನ್ಯೂಯಾರ್ಕ್: ಇರಾನ್ ಜೊತೆ ಮಾತುಕತೆಗಳು ಮಹತ್ವದ ಹಂತ ತಲುಪಿದ್ದು ಒಪ್ಪಂದದ ಪ್ರಮುಖ ಅಂಶಗಳು ಸಿದ್ಧವಾಗಿವೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಟೆಹ್ರಾನ್ ಈ ಹೇಳಿಕೆಯನ್ನು ತಳ್ಳಿ ಹಾಕಿದ್ದು ಯಾವುದೇ ನೇರ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. ವರದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ಒಪ್ಪಂದದ ಬಹುತೇಕ ಪ್ರಮುಖ ಅಂಶಗಳು ನಮ್ಮ ಬಳಿ ಇವೆ, ವಿಶೇಷವಾಗಿ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ವಿಷಯದಲ್ಲಿ” ಎಂದು ಹೇಳಿದರು. ಈ ಹೇಳಿಕೆಗಳ ನಂತರ ತೈಲ ಬೆಲೆಗಳಲ್ಲಿ ಇಳಿಕೆ ಹಾಗೂ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬಂದಿದೆ. ಹಾರ್ಮುಜ್ ಜಲಸಂಧಿಯ ವಿಚಾರದಲ್ಲೂ ಟ್ರಂಪ್ ಪ್ರಸ್ತಾಪಿಸಿ, ಜಾಗತಿಕ ಇಂಧನ ಸಾಗಣೆಗೆ ಪ್ರಮುಖವಾದ ಈ ಮಾರ್ಗವನ್ನು ತೆರೆಯಲು ಇರಾನ್ ಮುಂದಾಗಬೇಕು ಎಂದು ಒತ್ತಾಯಿಸಿದರು. ಜಾಗತಿಕ ತೈಲ ಸಾಗಣೆಯ ಸುಮಾರು 20% ಈ ಮಾರ್ಗದ ಮೂಲಕ ನಡೆಯುತ್ತದೆ ಎಂಬುದು ಗಮನಾರ್ಹ. ಟ್ರಂಪ್ ಪ್ರಕಾರ, ಅವರ ಪ್ರತಿನಿಧಿಗಳಾದ ಸ್ಟೀವ್…

ಇರಾನ್ ಯುದ್ಧದ ಹೊಡೆತ: ಭಾರತದ ಗಲ್ಫ್ ಆರ್ಥಿಕ ಜೀವನಾಡಿಗೆ ಭಾರಿ ಆಘಾತ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ–ಇಸ್ರೇಲ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಭಾರತದ ಆರ್ಥಿಕತೆಯ ಮೇಲೆ ಹೊಸ ಒತ್ತಡ ಉಂಟಾಗಿದೆ. ವ್ಯಾಪಾರ, ಇಂಧನ ಪೂರೈಕೆ ಮತ್ತು ವಿದೇಶಿ ಹಣ ರವಾನೆಯ ಪ್ರಮುಖ ಕೇಂದ್ರವಾಗಿರುವ ಗಲ್ಫ್ ಪ್ರದೇಶದೊಂದಿಗೆ ಭಾರತದ ಆಳವಾದ ಸಂಪರ್ಕ ಇದೀಗ ದುರ್ಬಲತೆಯಾಗಿ ಪರಿಣಮಿಸುತ್ತಿದೆ ಎಂದು *ದಿ ನ್ಯೂಯಾರ್ಕ್ ಟೈಮ್ಸ್* ವರದಿ ತಿಳಿಸಿದೆ. ಕೆಲವೇ ವಾರಗಳ ಹಿಂದೆ ಬಲವಾದ ಬೆಳವಣಿಗೆ, ನಿಯಂತ್ರಿತ ಹಣದುಬ್ಬರ ಮತ್ತು ಸ್ಥಿರ ವಿದೇಶಿ ವಿನಿಮಯ ಮೀಸಲುಗಳೊಂದಿಗೆ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿತ್ತು. ಆದರೆ ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ “ಪರಿಪೂರ್ಣ ಚಂಡಮಾರುತ” ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ವಿಶ್ಲೇಷಿಸಿದೆ. ಭಾರತದ ತೈಲ ಆಮದುಗಳಲ್ಲಿ ಸುಮಾರು 40% ಮತ್ತು ಅನಿಲ ಪೂರೈಕೆಯಲ್ಲಿ 80% ಗಲ್ಫ್ ಪ್ರದೇಶದ ಮೇಲೆ ಅವಲಂಬಿತವಾಗಿದ್ದು, ಇಂಧನ ಬೆಲೆಗಳ ಏರಿಕೆ ಈಗಾಗಲೇ ಆರ್ಥಿಕ ವ್ಯವಸ್ಥೆಯಲ್ಲಿ ಅಲೆಗಳನ್ನೆಬ್ಬಿಸಿದೆ. ಇದು ಬೆಳವಣಿಗೆ–ಹಣದುಬ್ಬರ ಸಮತೋಲನಕ್ಕೆ ದೊಡ್ಡ ಸವಾಲು ಎಸೆಯುತ್ತಿದೆ. ಗಲ್ಫ್…

6 ರಾಜ್ಯಗಳ 8 ಕ್ಷೇತ್ರಗಳಿಗೆ ಉಪಚುನಾವಣೆ: ಏಪ್ರಿಲ್ 9, 29ರಂದು ಮತದಾನ

ನವದೆಹಲಿ: ದೇಶದ ಆರು ರಾಜ್ಯಗಳ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಭಾರತ ಚುನಾವಣಾ ಆಯೋಗ ಪ್ರಕಟಿಸಿದೆ. ಏಪ್ರಿಲ್ 9 ಮತ್ತು 29ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದರು. ಕರ್ನಾಟಕದಲ್ಲಿ ಬಾಗಲಕೋಟೆ (Bagalkote) ಮತ್ತು ದಾವಣಗೆರೆ ದಕ್ಷಿಣ (Davanagere South) ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಬಾಗಲಕೋಟೆ ಕ್ಷೇತ್ರವು ಮಾಜಿ ಸಚಿವ ಎಚ್. ವೈ. ಮೇಟಿ (H. Y. Meti) ಅವರ ನಿಧನದಿಂದ ತೆರವಾಗಿದ್ದರೆ, ದಾವಣಗೆರೆ ದಕ್ಷಿಣ ಕ್ಷೇತ್ರವು ಹಿರಿಯ ರಾಜಕೀಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ನಿಧನದಿಂದ ಖಾಲಿಯಾಗಿತ್ತು. ಈ ಎರಡೂ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಮತದಾನ ನಡೆಯಲಿದೆ. ಈ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆಗೆ ಮಾರ್ಚ್ 24 ಕೊನೆಯ ದಿನವಾಗಿದ್ದು,…

ಪ್ರಯಾಣಿಕರ ಟಿಕೆಟ್‌ಗಳಿಗೆ ವರ್ಷಕ್ಕೆ ₹60 ಸಾವಿರ ಕೋಟಿ ಸಬ್ಸಿಡಿ: ರೈಲ್ವೆ ಸಚಿವರ ಮಾಹಿತಿ

ನವದೆಹಲಿ: ಭಾರತೀಯ ರೈಲ್ವೆಯು ಪ್ರಯಾಣಿಕರ ಟಿಕೆಟ್ ದರಗಳಲ್ಲಿ ಭಾರೀ ಸಬ್ಸಿಡಿ ನೀಡುತ್ತಿರುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. 2024-25ನೇ ಸಾಲಿನಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ ಒಟ್ಟು ₹60,239 ಕೋಟಿ ಸಬ್ಸಿಡಿ ನೀಡಲಾಗಿದೆ ಎಂದು ಅವರು ಬುಧವಾರ ಸಂಸತ್ತಿಗೆ ಮಾಹಿತಿ ನೀಡಿದರು. ಲೋಕಸಭೆಯಲ್ಲಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ಈ ಸಬ್ಸಿಡಿ ಪ್ರತಿ ಪ್ರಯಾಣಿಕರಿಗೆ ಸರಾಸರಿ ಶೇ.43ರಷ್ಟು ರಿಯಾಯಿತಿ ಆಗುತ್ತದೆ ಎಂದು ವಿವರಿಸಿದರು. ಅಂದರೆ, ಸೇವೆಯನ್ನು ಒದಗಿಸುವ ವೆಚ್ಚ ₹100 ಇದ್ದರೆ ಪ್ರಯಾಣಿಕರು ಕೇವಲ ₹57 ಮಾತ್ರ ಟಿಕೆಟ್‌ಗಾಗಿ ಪಾವತಿಸುತ್ತಿದ್ದಾರೆ ಎಂದು ಹೇಳಿದರು. ಈ ಸಬ್ಸಿಡಿ ಎಲ್ಲ ಪ್ರಯಾಣಿಕರಿಗೂ ಮುಂದುವರಿದಿದ್ದು, ಇದಲ್ಲದೆ ಅಂಗವಿಕಲರು, ವಿವಿಧ ರೋಗಿಗಳ ವರ್ಗಗಳು ಹಾಗೂ ವಿದ್ಯಾರ್ಥಿಗಳಂತಹ ಅನೇಕ ವರ್ಗಗಳಿಗೆ ಹೆಚ್ಚುವರಿ ರಿಯಾಯಿತಿಗಳು ನೀಡಲಾಗುತ್ತಿವೆ ಎಂದು ಸಚಿವರು ತಿಳಿಸಿದರು. ರೈಲ್ವೆ ಟಿಕೆಟ್ ದರವನ್ನು “ವ್ಯಾಪಾರ ರಹಸ್ಯ”ವೆಂದು ಪರಿಗಣಿಸುವುದಿಲ್ಲ ಎಂದು…

ಹಿಜ್ಬೊಲ್ಲಾ ರಾಕೆಟ್ ದಾಳಿಗೆ ಪ್ರತೀಕಾರ, ಬೈರುತ್ ಮೇಲೆ ಇಸ್ರೇಲ್ ಭಾರೀ ವಾಯುದಾಳಿ

ಬೈರುತ್: ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಹಾರಿಸಿದ ರಾಕೆಟ್‌ಗಳ ಬೆನ್ನಲ್ಲೇ, ಸೋಮವಾರ ಮುಂಜಾನೆ ಲೆಬನಾನ್ ರಾಜಧಾನಿ ‘ಬೈರುತ್’ನ ದಕ್ಷಿಣ ಉಪನಗರಗಳು ಭಾರೀ ಸ್ಫೋಟಗಳ ನಡುಕದಲ್ಲಿ ತತ್ತರಿಸಿದವು. ಸ್ಥಳೀಯ ವಾಹಿನಿ ಅಲ್-ಜದೀದ್ ವರದಿ ಪ್ರಕಾರ, ಇಸ್ರೇಲಿ ಯುದ್ಧವಿಮಾನಗಳು ತೀವ್ರವಾದ ವಾಯುದಾಳಿ ನಡೆಸಿವೆ. ಇಸ್ರೇಲ್ ದಾಳಿಯ ಪ್ರಮುಖ ಗುರಿಯಾಗಿದ್ದು, ಹೆಜ್ಬೊಲ್ಲಾ ಬಲಗೈ ಎಂದು ಕರೆಯಲ್ಪಡುವ ದಹಿಯೆಹ್ ಪ್ರದೇಶ. ಭಾರೀ ಸ್ಫೋಟಗಳ ಶಬ್ದಕ್ಕೆ ಬೆಚ್ಚಿಬಿದ್ದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಓಡಿಹೋದರು. ಪೀಡಿತ ಪ್ರದೇಶಗಳಿಗೆ ಆಂಬ್ಯುಲೆನ್ಸ್‌ಗಳು ಧಾವಿಸಿದವು. ಸಾವುನೋವುಗಳ ಅಧಿಕೃತ ಅಂಕಿಅಂಶಗಳು ತಕ್ಷಣ ಲಭ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿವೆ. ಲೆಬನಾನ್‌ನ ಶಸ್ತ್ರಸಜ್ಜಿತ ಸಂಘಟನೆ ಹೆಜ್ಬೊಲ್ಲಾ ಹೇಳಿಕೆಯಲ್ಲಿ, ಇಸ್ರೇಲ್ ಕಡೆಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಿರುವುದಾಗಿ ಒಪ್ಪಿಕೊಂಡಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.…

ಕೆಎಸ್‌ಆರ್‌ಟಿಸಿ ಪ್ರತಿಷ್ಠಿತ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ಪ್ರತಿಷ್ಠಿತ ಸಾರಿಗೆಗಳ ಪ್ರಯಾಣದರಗಳಲ್ಲಿ ಶೇಕಡಾ 5 ರಿಂದ 15ರವರೆಗೆ ರಿಯಾಯಿತಿ ಘೋಷಿಸಿದೆ. ಈ ರಿಯಾಯಿತಿ ಜನವರಿ 5, 2026ರಿಂದ ಜಾರಿಗೆ ಬರಲಿದೆ. ಬೆಂಗಳೂರು–ಮಂಗಳೂರು, ಬೆಂಗಳೂರು–ಕುಂದಾಪುರ, ಉಡುಪಿ, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಪುತ್ತೂರು, ಮಡಿಕೇರಿ/ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ/ಸಾಗರ ಸೇರಿದಂತೆ ಚೆನ್ನೈ, ಹೈದರಾಬಾದ್/ಸಿಕಂದರಾಬಾದ್, ತಿರುಪತಿ, ಮಂತ್ರಾಲಯ, ಪುಣೆ/ಮುಂಬೈ, ವಿಜಯವಾಡ, ಎರ್ನಾಕುಲಂ, ಮದುರೈ, ಕೋಯಿಮತ್ತೂರು, ತಿರುಶೂರು ಸೇರಿದಂತೆ ಆಯ್ದ ಮಾರ್ಗಗಳಲ್ಲಿ ಈ ರಿಯಾಯಿತಿ ಅನ್ವಯವಾಗಲಿದೆ. ರಾಜಹಂಸ, ನಾನ್‌ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಎಸಿ ಸ್ಲೀಪರ್ ಹಾಗೂ ಮಲ್ಟಿ ಆಕ್ಸಲ್ ಎಸಿ ಸ್ಲೀಪರ್ ಬಸ್‌ಗಳ ಪ್ರಯಾಣದರಗಳಲ್ಲಿ ರಿಯಾಯಿತಿ ನೀಡಲಾಗುತ್ತಿದೆ ಎಂದು ನಿಗಮ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ksrtc.in ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ನಿಗಮ ಮನವಿ ಮಾಡಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದೆ.

ಬಳ್ಳಾರಿ ಗುಂಡಿನ ದಾಳಿ ‘ಪೂರ್ವಯೋಜಿತ’: ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ ಆರೋಪ

ಬಳ್ಳಾರಿ: ನಗರದ ಬ್ಯಾನರ್ ಗಲಾಟೆ ಹಾಗೂ ಗುಂಡಿನ ದಾಳಿ ಪ್ರಕರಣ ರಾಜಕೀಯವಾಗಿ ತೀವ್ರ ತಿರುವು ಪಡೆದುಕೊಂಡಿದ್ದು, ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಗಣಿಗಾರಿಕಾ ಉದ್ಯಮಿ ಜನಾರ್ದನ ರೆಡ್ಡಿ ಅವರು, ಈ ದಾಳಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡು ನಡೆಸಿದ ‘ಪೂರ್ವಯೋಜಿತ ದಾಳಿ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಆಕಸ್ಮಿಕ ಘಟನೆ ಅಲ್ಲ. ಜನಾರ್ದನ ರೆಡ್ಡಿಯವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸಂಪೂರ್ಣವಾಗಿ ಸುಟ್ಟುಹಾಕುವ ಉದ್ದೇಶದೊಂದಿಗೆ ದಾಳಿ ನಡೆಸಲಾಗಿದೆ,” ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ಧವೂ ಅವರು ಆರೋಪ ಹೊರಿಸಿದರು. “ಕಾಂಗ್ರೆಸ್ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಲು ಬಂದಿರಲಿಲ್ಲ. ಜನಾರ್ದನ ರೆಡ್ಡಿಯವರ ಮೇಲೆ ಗುಂಡು ಹಾರಿಸುವ ಹಾಗೂ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದಲೇ ಬಂದಿದ್ದರು. ಗುಂಡು ಗಾಳಿಗೆ ಹಾರಿಸಲ್ಪಟ್ಟಿಲ್ಲ, ಅದು ನೇರವಾಗಿ ಜನಾರ್ದನ…

ಮೈಸೂರು ಅರಮನೆ ಮುಂಭಾಗ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟ; ಓರ್ವ ಸಾವು

ಮೈಸೂರು: ಮೈಸೂರು ಅರಮನೆಮುಂಭಾಗದಲ್ಲಿ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೈಸೂರು ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಬಲೂನ್‌ಗೆ ಗ್ಯಾಸ್ ತುಂಬುವ ವೇಳೆ ಸ್ಫೋಟ ಸಂಭವಿಸಿದೆ. ಅರಮನೆ ಮುಂಭಾಗ ಮಕ್ಕಳ ಆಟಿಕೆ ಸಾಮಾನುಗಳ ಮಾರಾಟ ಸ್ಥಳದಲ್ಲಿ, ಜನನಿಬಿಡ ಸ್ಥಳದಲ್ಲಿ ಹಿಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟವಾಗಿದ್ದು, ಬಲೂನ್ ಮಾರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ನಡೆಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. #WATCH | Karnataka | A helium cylinder explosion occurred in front of the Jayamarthanda gate of the Mysore Palace at around 8.30 pm. The balloon…

63% ಭ್ರಷ್ಟಾಚಾರ ಆರೋಪ; ಸ್ವಲ್ಪ ಸಮಯ ಕೊಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದ ಸಿಎಂ

ಬೆಂಗಳೂರು: ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಇದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಮಾಡಿರುವ ಆರೋಪ ಬಿಜೆಪಿ ಸರ್ಕಾರದ ಅವಧಿಯದ್ದು ಎಂದು ಸಿಎಂ ಸಿದ್ದರಾಮಯ್ಯ ಬೊಟ್ಟು ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಲೋಕಾಯುಕ್ತರ ಮಾತನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬಿಜೆಪಿಯ ಪಾಪದ ಗಂಟನ್ನು ನಮ್ಮ ತಲೆಗೆ ಕಟ್ಟಲು ಹೋಗಿ ತಮ್ಮ ಕಾಲ ಮೇಲೆ ತಾವೇ ಚಪ್ಪಡಿ ಎಳೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳಿಗೆ ಎದಿರೇಟು ನೀಡಿರುವ ಸಿದ್ದರಾಮಯ್ಯ, ಉಪಲೋಕಾಯುಕ್ತ ಬಿ.ವೀರಪ್ಪ ಅವರು 2019ರ ನವೆಂಬರ್‌ನಲ್ಲಿ ಕೊಟ್ಟ ವರದಿಯಲ್ಲಿ ರಾಜ್ಯದಲ್ಲಿ 63% ಭ್ರಷ್ಟಾಚಾರ ಇದೆ ಎಂಬುದಾಗಿತ್ತು. ಅದೇ ವರದಿಯನ್ನು ಆಧರಿಸಿ ಬಿ.ವೀರಪ್ಪನವರು ಈಗ ಮಾತನಾಡಿದ್ದಾರೆ. ಅವರು ವರದಿ ನೀಡುವ ವೇಳೆಯಲ್ಲಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ರಾಜ್ಯದಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳು ಒಂದೇ,…