ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಕತ್ರಿನಾ ಕೈಫ್, ರವೀನಾ ಟಂಡನ್

ಮುಂಬೈ,: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳ ಸಾಲಿಗೆ ಕತ್ರಿನಾ ಕೈಫ್ ಮತ್ತು ರವೀನಾ ಟಂಡನ್ ಸೇರಿಕೊಂಡರು. ಧಾರ್ಮಿಕ ಭೇಟಿಯ ಸಮಯದಲ್ಲಿ ಈ ಇಬ್ಬರು ‘ಗಂಗಾ ಆರತಿ’ಯಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ. ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ, ನಟ ಅಭಿಷೇಕ್ ಬ್ಯಾನರ್ಜಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ‘ಗಂಗಾ ಆರತಿ’ಯಲ್ಲಿ ಸೋಮವಾರ ಭಾಗಿಯಾದರು. ಕತ್ರಿನಾ ಕೈಫ್ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಕ್ಕೆ ಭೇಟಿ ನೀಡಿದರು. ದಿವಾ ಪೌಡರ್ ಪಿಂಕ್ ಜನಾಂಗೀಯ ಉಡುಪನ್ನು ಧರಿಸಿದ್ದರು. ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರ ಮಾರ್ಗದರ್ಶನ ಪಡೆದಿದ್ದಾರೆ.

ಮಹಾ ಕುಂಭಮೇಳ: ಈವರೆಗೂ 60 ಕೋಟಿ ಮಂದಿ ಪುಣ್ಯಸ್ನಾನ

ಲಖನೌ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈವರೆಗೆ ಸುಮಾರು 60 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ. ಈ ಕುರಿತಂತೆ ಶನಿವಾರ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದುತಿಳಿಸಿದೆ. ಜನವರಿ 13 ರಂದು ಪ್ರಾರಂಭವಾದ ಕುಂಭಮೇಳಕ್ಕೆ ಫೆಬ್ರವರಿ 26 ರಂದು ಮಹಾ ಶಿವರಾತ್ರಿ ವರೆಗೂ ನಡೆಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳೆ ಕಣ್ತುಂಬಿಕೊಳ್ಳಲು ಪ್ರಯಾಗರಾಜ್​ ಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದೇ ರೀತಿಯ ಸ್ಥಿತಿ ಇದ್ದರೆ ಅಂತಿಮ ‘ಅಮೃತ ಸ್ನಾನ’ದ ವೇಳೆಗೆ ಈ ಸಂಖ್ಯೆ 65 ಕೋಟಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಆದಿಚುಂಚನಗಿರಿ ಶ್ರೀಗಳ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವ

ಮಂಡ್ಯ: ವಿಜ್ಞಾನ-ತಂತ್ರಜ್ಞಾನ ಯಾವಾಗಲೂ ಧರ್ಮದ ಜೊತೆಗೆ ಇರಬೇಕು. ವಿಜ್ಞಾನ ವಿವೇಕಿಗಳ ಕೈಯಲ್ಲಿ ಇದ್ದರೆ ಮಾತ್ರ ಸುರಕ್ಷಿತವಾಗಿರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ನಾಗಮಂಗಲದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ, ಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 12 ನೇ ವಾರ್ಷಿಕ ಪಟ್ಟಾಭಿಷೇಕ ಉತ್ಸವದಲ್ಲಿ ಆರ್‌.ಅಶೋಕ ಅವರು ಪಾಲ್ಗೊಂಡರು. ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನಕ್ಕೂ ಮಠಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಬರುತ್ತದೆ. ಈ ಕಾರ್ಯಕ್ರಮದಲ್ಲಿ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ತೋರಿಸಲಾಗಿದೆ. ಧರ್ಮ ಪಾಲಿಸುವವರ ಕೈಯಲ್ಲಿ ಧರ್ಮ ಇದ್ದರೆ ಮಾತ್ರ ಎಲ್ಲರಿಗೂ ಒಳಿತಾಗುತ್ತದೆ. ಅಧರ್ಮೀಯರ ಕೈಯಲ್ಲಿ ವಿಜ್ಞಾನ ಸಿಕ್ಕಿದರೆ ಅದರಿಂದ ದೊಡ್ಡ ಅನಾಹುತವಾಗುತ್ತದೆ. ಇಂದು ರೈಲು, ವಿಮಾನದ ಮೂಲಕ ವೇಗವಾಗಿ ದೂರದ ಸ್ಥಳಗಳನ್ನು ತಲುಪಬಹುದು. ಧರ್ಮ ಪಾಲನೆ ಮಾಡುವವರು ಇಂತಹ ವಿಜ್ಞಾನ-ತಂತ್ರಜ್ಞಾನದ ಸಾಧನ ಬಳಸಿದರೆ ಏನೂ ಆಗಲ್ಲ. ಅದರೆ ಅಧರ್ಮೀಯರು ಬಳಸಿದರೆ ಅಪಾಯವಾಗುತ್ತದೆ. ವಿಮಾನವನ್ನು ಬಳಸಿಯೇ ಅಮೆರಿಕದ…

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿಗೆ ಸಚಿವರ ಮಾಸ್ಟರ್ ಪ್ಲಾನ್; ಆಯುಕ್ತರ ನೇತೃತ್ವದ ಸಮಿತಿ ರಚನೆ

ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಸಚಿವರು ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಿ, ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಒದಗಿಸುವ ಹಾಗೂ ಶ್ರೀ ಕ್ಷೇತ್ರವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿ ಯಾಗಿಸಲು ಮಾಸ್ಟರ್ ಪ್ಲಾನ್ ರೂಪಿಸಲು ಸಭೆ ನಡೆಸಿದ ಸಚಿವರು, ಹೊಸದಾಗಿ ಸಮಿತಿ ರಚಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 77 ರನ್ವಯ 15 ಜನ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಮತ್ತು ಹೆಚ್ಚುವರಿಯಾಗಿ 3 ಜನ ಸದಸ್ಯರುಗಳನ್ನು ಒಳಗೊಂಡಂತೆ ಮೇಲ್ವಿಚಾರಣಾ ಸಮಿತಿ ರಚಸಿ ಆದೇಶಿಸಲಾಗಿದೆ. 15.02.2025 ರಂದು ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಈ‌ ಕೆಳಕಂಡ…

ಹೊಸ ಚರಿತ್ರೆ ಬರೆದ ಮಹಾಕುಂಭಮೇಳ: ಈವರೆಗೂ 50 ಕೋಟಿಗೂ ಹೆಚ್ಚು ಮಂದಿ ಪುಣ್ಯಸ್ನಾನ

ಪ್ರಯಾಗರಾಜ್: ಹಿಂದೂಗಳ ಪವಿತ್ರ ಆಚರಣೆಯಾಗಿ ಹೆಗ್ಗುರುತಾಗಿರುವ ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇದು ಜಾಗತಿಕ ದಾಖಲೆಯಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನವರಿ 13ರಂದು ಪ್ರಾರಂಭವಾಗಿರುವ ಮಹಾಕುಂಭ ಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ದಡದಲ್ಲಿ ಮಹಾಕುಂಭ ನಡೆಯುತ್ತಿದೆ.ಈ ಮಹಾಕುಂಭಮೇಳದ ಸಂದರ್ಭದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

ಅಯೋಧ್ಯೆ: ಅಯೋಧ್ಯೆಯಲ್ಲಿರುವ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶರಾಗಿದ್ದಾರೆ. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 3 ರಂದು ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದು ಅನಂತರ ಅವರ ಆರೋಗ್ಯ ಕ್ಷೀಣಿಸಿತ್ತೆನ್ನಲಾಗಿದೆ. 85 ವರ್ಷ ವಯಸ್ಸಿನ ಆಚಾರ್ಯ ಸತ್ಯೇಂದ್ರ ದಾಸ್ ಅವರು, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕ ರಾಮ ಮಂದಿರದ ಅರ್ಚಕರಾಗಿದ್ದರು. ಭವ್ಯ ರಾಮ ಮಂದಿರ ನಿರ್ಮಾಣ ನಂತರವೂ ಶ್ರೀರಾಮನ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದರು.‌

ಸನಾತನ ಬಗ್ಗೆ ಸಕಾರಾತ್ಮಕ ನಿಲುವು; ಮಹಾಕುಂಭ ಮೇಳದಲ್ಲಿಪವಿತ್ರ ಸ್ನಾನ ಮಾಡಿದ ಡಿಕೆಶಿ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರವರೆಗೆ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮವು ಈಗಾಗಲೇ ದೇಶಾದ್ಯಂತ ಮತ್ತು ಅದರಾಚೆಗಿನ ಲಕ್ಷಾಂತರ ಭಕ್ತರನ್ನು ಆಕರ್ಷಿಸಿದೆ.ಈ ಇಬ್ಬರೂ ನಾಯಕರು ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು ಮತ್ತು ಭವ್ಯವಾದ ಆಧ್ಯಾತ್ಮಿಕ ಸಭೆಗಾಗಿ ಮಾಡಿದ ವ್ಯವಸ್ಥೆಗಳನ್ನು ಶ್ಲಾಘಿಸಿದರು. ತಮ್ಮ ಈ ಅಪೂರ್ವ ಕ್ಷಣ ಬಗ್ಗೆ ಅನುಭವ ಹಂಚಿಕೊಂಡ ಡಿ.ಕೆ.ಶಿವಕುಮಾರ್, ‘ಇದು ಒಬ್ಬರ ಜೀವನದಲ್ಲಿ ಒಂದು ಐತಿಹಾಸಿಕ ಕ್ಷಣ. ಇಲ್ಲಿ ನೆರೆದಿರುವ ಕೋಟ್ಯಂತರ ಭಕ್ತರಿಗೆ ವ್ಯವಸ್ಥೆಗಳನ್ನು ನಿರ್ವಹಿಸುವಲ್ಲಿ ಸಂಘಟಕರು ಅದ್ಭುತ ಕೆಲಸ ಮಾಡಿದ್ದಾರೆ. ನನ್ನ ಕುಟುಂಬ ಮತ್ತು ನಾನು ಪವಿತ್ರ ಸ್ನಾನ ಮಾಡಿದ್ದಕ್ಕೆ ತುಂಬಾ ಸಂತೋಷವಾಗಿದೆ’…

ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಮುಜರಾಯಿ ಮಂತ್ರಿ ರಾಮಲಿಂಗಾ ರೆಡ್ಡಿ ಪಣತೊಟ್ಟಿದ್ದಾರೆ. ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ‌ ಪುಣ್ಯಸ್ನಾನವನ್ನು ಪ್ರಾರಂಭಿಸಲು ಪ್ರಮುಖರಾದವರು ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಕೈಲಾಸಾಶ್ರಮ ತಿರುಚ್ಚಿ ಮಹಾಸಂಸ್ಥಾನ ಮಠದ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿ. ದಕ್ಷಿಣ ಭಾರತದಲ್ಲಿ ಪ್ರತಿ ಮೂರು…

ಪ್ರಯಾಗ್ ರಾಜ್ ಮಹಾಕುಂಭ ಮೇಳ: ಈ ವರೆಗೂ 35 ಕೋಟಿ ಆಸ್ತಿಕರಿಂದ ಪುಣ್ಯ ಸ್ನಾನ

ಪ್ರಯಾಗ್ ರಾಜ್: ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈ ವರೆಗೂ ಸುಮಾರು 35 ಕೋಟಿ ಆಸ್ತಿಕರು ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ ಕೋಟ್ಯಂತರ ಜನರು ಸಮಾಗಮವಾಗಿದ್ದು, ವಸಂತ ಪಂಚಮಿಯ ಅಮೃತ ಸ್ನಾನದ ಶುಭ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರವು ಅಂಕಿ ಅಂಶ ಬಿಡುಗಡೆ ಮಾಡಿದೆ. ಮಹಾಕುಂಭ ಪ್ರಾರಂಭವಾದಾಗಿನಿಂದ ಈವರೆಗೂ 35 ಕೋಟಿಗೂ ಅಧಿಕ ಜನರು ಸ್ನಾನ ಮಾಡಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಇನ್ನೂ 23 ದಿನ ಮಹಾಕುಂಭ ಮೇಳ ನಡೆಯಲಿದ್ದು, 50 ಕೋಟಿ ಅಧಿಕ ಜನರು ಸ್ನಾನ ಮಾಡುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಸಂಘ ಕಾರ್ಯ ಮಹಾಕಾರ್ಯ; ಪ್ರಯಾಗರಾಜ್’ನಲ್ಲಿ ಭಕ್ತರಿಗೆ ದೃಷ್ಟಿ ನೀಡುತ್ತಿರುವ ‘ನೇತ್ರ ಮಹಾಕುಂಭ’

ಪ್ರಯಾಗರಾಜ್‌: ಜಗದ್ವಿಖ್ಯಾತ ಕುಂಭಮೇಳ ನಡೆಯುತ್ತಿರುವ ಪ್ರಯಾಗರಾಜ್‌ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತಿದೆ. ಮಹಾ ಕುಂಭಕ್ಕೆ ಆಗಮಿಸುವ ಭಕ್ತರಿಗಾಗಿ ‘ನೇತ್ರ ಮಹಾಕುಂಭ’ ಹೆಸರಿನ ವಿಶೇಷ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದಲ್ಲಿ ಉಚಿತ ಕಣ್ಣಿನ ಪರೀಕ್ಷೆ, ಚಶ್ಮೆ ಹಾಗೂ ಔಷಧಿಗಳನ್ನು ವಿತರಿಸಲಾಗುತ್ತಿದೆ. ಜನವರಿ 13 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಿಬಿರವು ಅಗತ್ಯವಿರುವವರಿಗೆ ಉಚಿತ ಕಣ್ಣು ಶಸ್ತ್ರಚಿಕಿತ್ಸೆಯನ್ನೂ ಒದಗಿಸುತ್ತಿದ್ದು, ಕಣ್ಣು ದಾನ ಕುರಿತು ಜನಜಾಗೃತಿ ಮೂಡಿಸುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS), ಸಕ್ಷಮ್ ಫೌಂಡೇಶನ್ ಹಾಗೂ ಇತರ ಸಾಮಾಜಿಕ ಸಂಘಟನೆಯ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ದಿನನಿತ್ಯ ಸಾವಿರಾರು ಯಾತ್ರಿಕರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಈ ಬಾರಿ ‘ನೇತ್ರ ಮಹಾಕುಂಭ’ದ ಉದ್ದೇಶ ಐದು ಲಕ್ಷ ಜನರಿಗೆ ಉಚಿತ ಕಣ್ಣಿನ ಆರೈಕೆ ನೀಡುವ ಪ್ರಯತ್ನ ಸಾಗಿದೆ. ಇದರಲ್ಲಿ ಮೂರು ಲಕ್ಷ ಜನರಿಗೆ ಉಚಿತ ಕಣ್ಣು ಪರೀಕ್ಷೆ, ಚಶ್ಮೆ ಹಾಗೂ ಔಷಧಿ ವಿತರಣೆ ಸೇರಿದಂತೆ ಉಚಿತ…