ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರದ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ನಂದ ಕಿಶೋರ್ ನಿರ್ದೇಶನದ ಈ ದ್ವಿಭಾಷಾ ಮಹಾಕಾವ್ಯವು ತಂದೆ ಮತ್ತು ಮಗನ ನಡುವಿನ ಬಾಂಧವ್ಯದ ಸುತ್ತ ಕಥೆ ಹೆಣೆದುಕೊಂಡಿದೆ. ಗುರುವಾರ ಬಿಡುಗಡೆಯಾದ ಭವ್ಯ ಟೀಸರ್‌ನಲ್ಲಿ ಮೋಹನ್ ಲಾಲ್ ಅವರನ್ನು ಪುರಾತನ ರಾಜನಾಗಿ ಹಾಗೂ ವರ್ತಮಾನದಲ್ಲಿ ತಂದೆಯಾಗಿ ತೋರಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜನ ಪಾತ್ರದಲ್ಲಿ ಮಿಂಚುತ್ತಿರುವ ಮೋಹನ್ ಲಾಲ್ ಅವರ ಗಂಭೀರ ತೋರ್ಪಡಿಕೆ ಅಭಿಮಾನಿಗಳನ್ನು ಆಕರ್ಷಿಸಿದೆ. ಮೋಹನ್ ಲಾಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಹಂಚಿಕೊಂಡು, “ಕಾಯುವಿಕೆ ಇಲ್ಲಿಗೆ ಕೊನೆಗೊಳ್ಳುತ್ತಿದೆ. ನನ್ನ ಹೃದಯಕ್ಕೆ ಹತ್ತಿರವಾದ ‘ವೃಷಭ’ ಜಗತ್ತಿಗೆ ಸ್ವಾಗತ. ಈ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ” ಎಂದು ಬರೆದಿದ್ದಾರೆ. ರಾಗಿಣಿ ದ್ವಿವೇದಿ ಮತ್ತು ಯುವ ನಟ ಸಮರ್ಜಿತ್ ಲಂಕೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ಛಾಯಾಗ್ರಾಹಕ…
Category: ಪ್ರಮುಖ ಸುದ್ದಿ
ಅಳಿಸಲಾದ ಪ್ರತಿಯೊಂದು ಮತವು ಕದ್ದ ಧ್ವನಿಯಾಗಿದೆ; ಮತಗಳ್ಳತನ ಆರೋಪ ಬಗ್ಗೆ ರಾಹುಲ್ ಹೇಳಿಕೆ
ನವದೆಹಲಿ: ಮತಗಳ್ಳತನ ಬಗ್ಗೆ ಸರಣಿ ಆರೋಪಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನೂ ಯಾವ ರೀತಿ ತೆಗೆದುಹಾಕಲಾಗಿದೆ ಎಂಬ ಬಗ್ಗೆ ವಿವರಿಸಿರುವ ವೈಖರಿ ಗಮನಸೆಳೆದಿದೆ. In just 14 minutes, 12 voters were deleted under the name of Suryakant.One of them was Babita Chaudhary, her voice stolen without her knowledge. Suryakant himself didn’t even know his login was being used. Then who was behind it? Who had access? Who is running this organised… pic.twitter.com/XFjrAhsWku — Karnataka Congress (@INCKarnataka) September 18, 2025 ಕೇವಲ 14 ನಿಮಿಷಗಳಲ್ಲಿ, ಸೂರ್ಯಕಾಂತ್ ಹೆಸರಿನಲ್ಲಿ 12 ಮತದಾರರನ್ನು ಅಳಿಸಲಾಗಿದೆ ಎಂದು ರಾಹುಲ್ ಗಾಂಧಿ ಬೊಟ್ಟು ಮಾಡಿದ್ದಾರೆ. ಒಬ್ಬರು…
ಸೆ.22ರ ಮೊದಲು ತಯಾರಿಸಿದ ಸರಕುಗಳ ಬೆಲೆ ಸ್ಟಿಕ್ಕರ್ ಬದಲಾಯಿಸಬೇಕಿಲ್ಲ: ಕೇಂದ್ರ ಸ್ಪಷ್ಟನೆ
ನವದೆಹಲಿ: ಜಿಎಸ್‌ಟಿ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆದು, ಸೆಪ್ಟೆಂಬರ್ 22 ರ ಮೊದಲು ತಯಾರಿಸಿದ ಮಾರಾಟವಾಗದ ಸರಕುಗಳ ಮೇಲೆ ಹೊಸ ಬೆಲೆ ಸ್ಟಿಕ್ಕರ್ ಅಂಟಿಸುವ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ತಯಾರಕರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ತೂಕ ಮತ್ತು ಅಳತೆ ಘಟಕದಿಂದ ಸೆಪ್ಟೆಂಬರ್ 18 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, “ತಯಾರಕರು, ಪ್ಯಾಕರ್‌ಗಳು ಅಥವಾ ಆಮದುದಾರರು ಬಯಸಿದರೆ ಮಾತ್ರ ಸ್ವಯಂಪ್ರೇರಣೆಯಿಂದ ಪರಿಷ್ಕೃತ ಬೆಲೆ ಸ್ಟಿಕ್ಕರ್ ಅಂಟಿಸಬಹುದು. ಆದರೆ ಪ್ಯಾಕೇಜ್‌ನಲ್ಲಿರುವ ಮೂಲ ಬೆಲೆ ಘೋಷಣೆಗೆ ಅದು ಅಡ್ಡಿಯಾಗಬಾರದು” ಎಂದು ತಿಳಿಸಲಾಗಿದೆ. ಇದರ ಮೂಲಕ ಕೈಗಾರಿಕಾ ಸಂಘಟನೆಗಳು ಮತ್ತು ವ್ಯಾಪಾರಿಗಳಿಂದ ಬಂದ ದೂರುಗಳನ್ನು ಸರ್ಕಾರ ಪರಿಗಣಿಸಿದೆ. ಹಳೆಯ ಮಾರ್ಗಸೂಚಿಗಳಿಂದ ಉಂಟಾಗುತ್ತಿದ್ದ ಅನುಸರಣೆ ಸವಾಲುಗಳನ್ನು ಹೀಗಾಗಿ ದೂರ ಮಾಡಲಾಗಿದೆ. ಹಿಂದಿನ ನಿಯಮ ಪ್ರಕಾರ, ಕಂಪನಿಗಳು ಬೆಲೆ ಬದಲಾವಣೆಗಳನ್ನು ಎರಡು ಪತ್ರಿಕೆಗಳಲ್ಲಿ…
ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ? ಚುನಾವಣಾ ಆಯೋಗಕ್ಕೆ ಸುರ್ಜೇವಾಲ ಪ್ರಶ್ನೆ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ಗಾಂಧೀ ಅವರು ಮತಗಳ್ಳತನ ಬಗ್ಗೆ ಇದೀಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎತ್ತಿರುವ ಪ್ರಶ್ನೆ ಗಮನಸೆಳೆದಿದೆ. . ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಅವರು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ. ಆಳಂದದಲ್ಲಿ ಮತಗಳ್ಳತನವಾಗಿರುವ ಕುರಿತು ರಾಹುಲ್ ಗಾಂಧಿ ಅವರು ಮಾಡಿರುವ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ಚುನಾವಣಾ ಆಯೋಗಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆದ ರಣದೀಪ್ ಸಿಂಗ್ ಸುರ್ಜೇವಾಲ ಅವರು ಎಕ್ಸ್ ನಲ್ಲಿ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ. ಕರ್ನಾಟಕದ ಸಿಐಡಿ ಕೇಳಿದ ಮಾಹಿತಿಯನ್ನು ಯಾವಾಗ ಒದಗಿಸುತ್ತೀರಿ? ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ನಿಮಗೆ ನೀಡಿರುವ ಮಾಹಿತಿ ಕುರಿತು ನೀವು ಯಾವಾಗ ಪ್ರತಿಕ್ರಿಯಿಸುತ್ತೀರಿ? ನೀವು ಕಾಲಮಿತಿಯ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವುದು ಯಾವಾಗ? ಇದಿಷ್ಟೇ ನಾವೆಲ್ಲರೂ ಹುಡುಕುತ್ತಿರುವ ಸತ್ಯ. ಭಾರತೀಯ…
ಅಕ್ರಮ ನಿವೇಶನ ಹಂಚಿಕೆ ಪ್ರಕರಣ: ಮುಡಾ ಮಾಜಿ ಆಯುಕ್ತರಿಗೆ 9 ದಿನಗಳ ಇಡಿ ವಶ
ಬೆಂಗಳೂರು: ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಂಧಿತರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಒಂಬತ್ತು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಇಡಿ) ವಶಕ್ಕೆ ಪಡೆದಿದೆ. ಹಣ ವರ್ಗಾವಣೆ ಮತ್ತು ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪ ಹಿನ್ನೆಲೆಯಲ್ಲಿ ಮಂಗಳವಾರ ಇಡಿ ಅಧಿಕಾರಿಗಳು ದಿನೇಶ್ ಕುಮಾರ್ ಅವರನ್ನು ಬಂಧಿಸಿದ್ದರು. ವಿಚಾರಣೆ ನಂತರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಒಂದು ದಿನ ಕಸ್ಟಡಿಗೆ ಪಡೆದಿದ್ದ ಇಡಿ, ಬುಧವಾರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿತು. ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ತಮ್ಮ ವಶಕ್ಕೆ ಒಪ್ಪಿಸುವಂತೆ ಇಡಿ ಮನವಿ ಮಾಡಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ಮಾಡಿದೆ.
ನೆಲ್ಲೂರಿನಲ್ಲಿ ಭೀಕರ ಅಪಘಾತ: ಆರು ಮಂದಿ ದುರ್ಮರಣ
ನೆಲ್ಲೂರು: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಂಗಮ್ ಮಂಡಲದ ಪೆರಮನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮರಳು ತುಂಬಿಕೊಂಡಿದ್ದ ಟಿಪ್ಪರ್ ಲಾರಿ, ಕಾರಿಗೆ ಡಿಕ್ಕಿ ಹೊಡೆದ ಬಳಿಕ ಕೆಲ ಅಂತರವರೆಗೆ ಎಳೆದೊಯ್ದ ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಒಂದು ಮಗು ಸೇರಿ ಒಟ್ಟು ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಪಂಜಾಬ್‌ನಲ್ಲಿ ಪ್ರವಾಹದಿಂದ 4,658 ಕಿ.ಮೀ ರಸ್ತೆ, 68 ಸೇತುವೆ ಹಾನಿ
ಚಂಡೀಗಢ: ಇತ್ತೀಚಿನ ಪ್ರವಾಹದಿಂದ ಪಂಜಾಬ್ ರಾಜ್ಯದ ಮೂಲಸೌಕರ್ಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಒಟ್ಟು 4,658 ಕಿ.ಮೀ ರಸ್ತೆ ಮತ್ತು 68 ಸೇತುವೆಗಳು ಹಾನಿಗೊಳಗಾಗಿವೆ ಎಂದು ಲೋಕೋಪಯೋಗಿ ಸಚಿವ ಹರ್ಭಜನ್ ಸಿಂಗ್ ಇಟಿಒ ಬುಧವಾರ ಮಾಹಿತಿ ನೀಡಿದರು. ನಷ್ಟದ ಮೌಲ್ಯಮಾಪನ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಯೋಜನಾ ರಸ್ತೆಗಳ ಅಡಿಯಲ್ಲಿ 19 ಸೇತುವೆಗಳು ಹಾಗೂ 1,592 ಕಿ.ಮೀ ರಸ್ತೆ ಹಾನಿಯಾಗಿದ್ದು, 92 ಕಲ್ವರ್ಟ್‌ಗಳು ಮತ್ತು 4,014 ಮೀಟರ್ ಆರ್-ಗೋಡೆಗಳು ನಾಶವಾಗಿವೆ ಎಂದರು. ರಾಷ್ಟ್ರೀಯ ಹೆದ್ದಾರಿ ಅಡಿಯಲ್ಲಿ 49.69 ಕಿ.ಮೀ ರಸ್ತೆ, ನಾಲ್ಕು ಸೇತುವೆ ಹಾಗೂ 14 ಕಲ್ವರ್ಟ್‌ಗಳಿಗೆ ಹಾನಿಯಾಗಿದೆ. ಲಿಂಕ್ ರಸ್ತೆಗಳ ಅಡಿಯಲ್ಲಿ 45 ಸೇತುವೆ ಮತ್ತು 2,357 ಕಿ.ಮೀ ರಸ್ತೆ ಹಾನಿಗೊಳಗಾಗಿದ್ದು, ಜೊತೆಗೆ 376 ಕಲ್ವರ್ಟ್‌ಗಳು ಹಾನಿಯಾಗಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾದ 657 ಕಿ.ಮೀ ರಸ್ತೆ ಸಹ ಹಾನಿಗೊಳಗಾಗಿದೆ. ಸೇತುವೆ, ರಸ್ತೆ, ಆರ್-ವಾಲ್‌ಗಳು…
ಸಾವಿನಲ್ಲೂ ಮಾನವೀಯತೆ; ಪ್ರಯಾಣಿಕರ ಜೀವ ಉಳಿಸಿ ಕೊನೆಯುಸಿರೆಳೆದ KSRTC ಚಾಲಕ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಚಾಲಕ ರಾಜೀವ್ ಬೀರಸಾಲ ಎಂಬವರು ಸಾವಿನಲ್ಲೂ ಮಾನವೀಯತೆ ಮೆರೆದು ಪ್ರಯಾಣಿಕರ ಜೀವ ಉಳಿಸಿದ್ದಾರೆ. 56 ವರ್ಷ ವಯಸ್ಸಿನ ರಾಜೀವ್ ಬೀರಸಾಲ ಅವರು KSRTC ಬಸ್ಸಿನಲ್ಲಿ ಚಾಲಕ- ಕಂ-ನಿರ್ವಾಹಕ ಹುದ್ದೆಯಲ್ಲಿದ್ದರು. ಇವರು ಹರಿಹರ ಘಟಕದ ‘ರಾಜಹಂಸ’ ಬಸ್ಸಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರು – ದಾವಣಗೆರೆ ಮಾರ್ಗದಲ್ಲಿ ಕಾರ್ಯಚರಣೆಯಲ್ಲಿದ್ದಾಗ ನೆಲಮಂಗಲ ಟೋಲ್ ಹತ್ತಿರ ವಾಹನ ಚಾಲನೆ ಮಾಡುತ್ತಿದ್ದಾಗ ರಾಜೀವ್ ಬೀರಸಾಲ ಅವರಿಗೆ ಹೃದಯಾಘಾತವಾಗಿದೆ. ಆದರೂ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಿ, ಬಸ್ಸನ್ನು ಹೆದ್ದಾರಿಯ ಒಂದು ಬದಿಯಲ್ಲಿ ಪಕ್ಕಕ್ಕೆ ನಿಲ್ಲಿಸಿ, ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಪ್ರಯಾಣಿಕರ ಜೀವದ ಬಗ್ಗೆ ಕಾಳಜಿ ತೋರಿದ ಈ ಚಾಲಕ ನೆಲಮಂಗಲ ಆಸ್ಪತ್ರೆಯಲ್ಲಿ ಮರಣ ಕೊನೆಯುಸಿರೆಳೆದಿದ್ದಾರೆ. ಚಾಲಕನ ಅಕಾಲಿಕ ನಿಧಾನ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದುಃಖ ವ್ಯಕ್ತಪಡಿಸಿದ್ದಾರೆ. ಮೃತ ಚಾಲಕರ ಆತ್ಮಕ್ಕೆ ಶಾಂತಿ ಕೋರಿರುವ ಅವರು,…
ನೆಫ್ರೋ ಸಂಸ್ಥೆಗೆ NABH ಮಾನ್ಯತೆ; ಈ ಗರಿಮೆ ಪಡೆದ ಕರ್ನಾಟಕದ ಎರಡನೇ ಸರ್ಕಾರಿ ಆಸ್ಪತ್ರೆ
ಬೆಂಗಳೂರು: ಮೂತ್ರಶಾಸ್ತ್ರ ವಿಭಾಗದಲ್ಲಿ ಅತ್ಯಾಧುನಿಕ ಸೇವೆ ಒದಗಿಸುತ್ತಿರುವ ಸರ್ಕಾರದ ಸೂಪರ್ ಸ್ಪೆಷಾಲಿಟಿ ನೆಫ್ರೋ-ಮೂತ್ರ ಶಾಸ್ತ್ರ ಸಂಸ್ಥೆ (INU) ಮತ್ತೊಂದು ಮೈಲುಗಲ್ಲು ದಾಟಿದೆ. ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವವರಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (NABH) ಮಾನ್ಯತೆಯನ್ನು ಪಡೆಯುವ ಮೂಲಕ ನೆಫ್ರೋ ಸಂಸ್ಥೆಯು ವಿಶೇಷ ಸ್ಥಾನ ಪಡೆದುಕೊಂಡಿದೆ. ಕರ್ನಾಟಕದಲ್ಲಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಂತರ ಈ ಸ್ಥಾನಮಾನ ಪಡೆದ ಎರಡನೇ ಸಂಸ್ಥೆಯಾಗಿದೆ. ನೆಫ್ರೋ ಸಂಸ್ಥೆಗೆ NABH ಮಾನ್ಯತೆ ಸಿಕ್ಕಿರುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೋಶಿನ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಾನ್ಯತೆ ಪಡೆದ ಆಸ್ಪತ್ರೆಗಳು ರೋಗಿಗಳ ಸುರಕ್ಷತೆ ಮತ್ತು ಆರೈಕೆಯಲ್ಲಿ ಜಾಗತಿಕ ಮಾನದಂಡಗಳನ್ನು ಅನುಸರಿಸುತ್ತದೆ. ಆರೋಗ್ಯ ಆರೈಕೆ ಗುಣಮಟ್ಟ ಸೊಸೈಟಿ (ISQua) ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಂಸ್ಥೆಗಳು ನೀಡುವ ಗುಣಮಟ್ಟದ ಸರ್ಟಿಫಿಕೇಟ್ ಪಡೆದುಕೊಂಡಿದೆ. ರೋಗಿಯ ಸುರಕ್ಷತೆ, ಆರೈಕೆಯ ಗುಣಮಟ್ಟ, ಸೋಂಕು…
ಉತ್ತರಾಖಂಡದಲ್ಲಿ ಮಳೆ ಆರ್ಭಟ: 13 ಸಾವು
ಶಿಮ್ಲಾ: ಉತ್ತರಾಖಂಡದಲ್ಲಿ ನಿರಂತರ ಮಳೆ ಮತ್ತು ಸರಣಿ ಮೇಘಸ್ಫೋಟಗಳಿಂದ ಭೀಕರ ನಾಶ ಸಂಭವಿಸಿದೆ. ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ. 16 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದಿಂದ ನಿರಂತರ ಮಳೆಯಾಗುತ್ತಿದ್ದು, ಭಾರೀ ಮಳೆಗೆ ರಸ್ತೆ, ಸೇತುವೆ, ಮನೆಗಳು ಕೊಚ್ಚಿಕೊಂಡು ಹೋಗಿದೆ. ನದಿಗಳು ಭೋರ್ಗರೆಯುತ್ತಾ ಪ್ರವಾಹದ ರೂಪ ಪಡೆದಿವೆ. ಪ್ರಾಥಮಿಕ ಅಂದಾಜು ಪ್ರಕಾರ ಸಾವಿನ ಸಂಖ್ಯೆ 25 ಕ್ಕೆ ಏರಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಸಹಸ್ರಧಾರ ಮತ್ತು ಮಾಲ್ದೇವ್ತಾ ಭೀಕರವಾಗಿ ದುರಂತಕ್ಕೀಡಾಗಿವೆ. ರಿಸ್ಪಾನಾ, ಬಿಂದಾಲ್ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮನೆಗಳು ಅವಶೇಷಗಳಿಂದ ತುಂಬಿ ಹೋಗಿದ್ದು, ನೂರಾರು ಅಂಗಡಿಗಳು ಮತ್ತು ಹೋಟೆಲ್‌ಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
