ತಮಿಳುನಾಡು ಸಿಎಂ ಸ್ಟಾಲಿನ್ ನಿವಾಸಕ್ಕೆ ಬಾಂಬ್ ಬೆದರಿಕೆ; ಪೊಲೀಸರಿಂದ ಶೋಧ

ಚೆನ್ನೈ: ಭಾನುವಾರ ಮುಂಜಾನೆ, ಅಪರಿಚಿತ ಕರೆ ಮಾಡಿದ ವ್ಯಕ್ತಿಯೊಬ್ಬರು ಚೆನ್ನೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಲ್ವಾರ್‌ಪೇಟೆಯಲ್ಲಿರುವ ನಿವಾಸದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿಕೊಂಡರು. ಈ ಎಚ್ಚರಿಕೆಯ ಕರೆ ತ್ವರಿತ ಮತ್ತು ಉನ್ನತ ಮಟ್ಟದ ಭದ್ರತಾ ಪ್ರತಿಕ್ರಿಯೆಯನ್ನು ನೀಡಿತು. ಬೆದರಿಕೆ ಬಂದ ತಕ್ಷಣ, ಪೊಲೀಸರು ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ಶ್ವಾನ ದಳವನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ಕಳುಹಿಸಿದರು. ಆವರಣದಾದ್ಯಂತ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಲಾಯಿತು, ಅಧಿಕಾರಿಗಳು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರತಿಯೊಂದು ಮೂಲೆಯನ್ನೂ ಶೋಧಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ವಿವರವಾದ ಪರಿಶೀಲನೆಯ ನಂತರ, ಬಾಂಬ್ ಬೆದರಿಕೆ ಸುಳ್ಳು ಎಂದು ಪೊಲೀಸರು ದೃಢಪಡಿಸಿದರು. ಆವರಣದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ವಂಚನೆ ಕರೆಯ ಹಿಂದಿನ ವ್ಯಕ್ತಿಯನ್ನು ಪತ್ತೆಹಚ್ಚಲು ಅಧಿಕಾರಿಗಳು…

ಹರಿದ್ವಾರ: ಮಾನಸ ದೇವಿ ಕಾಲ್ತುಳಿತದಲ್ಲಿ ಆರು ಮಂದಿ ಸಾವು

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿರುವ ಮಾನಸ ದೇವಿ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಶ್ರಾವಣ ಮಾಸದ ಪವಿತ್ರ ಸಮಯದಲ್ಲಿ ಸಾವಿರಾರು ಭಕ್ತರು ಪವಿತ್ರ ಸ್ಥಳದಲ್ಲಿ ನೆರೆದಿದ್ದರಿಂದ ದೇವಾಲಯದ ಆವರಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. #WATCH | Haridwar, Uttarakhand | The injured are being rushed to the hospital following a stampede at the Mansa Devi temple. 6 people died and several others got injured in the stampede. pic.twitter.com/ScUaYyq2Z3 — ANI (@ANI) July 27, 2025 ಸರತಿ ಸಾಲಿನಲ್ಲಿ ಕಾಯುತ್ತಿದ್ದ ಜನರು ಪರಸ್ಪರ ತಳ್ಳಾಡಲು ಪ್ರಾರಂಭಿಸಿದಾಗ ಗೊಂದಲ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ, ಇದರಿಂದಾಗಿ ಜನರು ಭಯಭೀತರಾಗಿದ್ದರು ಮತ್ತು ಹಠಾತ್ ದಟ್ಟಣೆ ಉಂಟಾಗಿತ್ತು.…

ಕರಾವಳಿ–ಮಲೆನಾಡಲ್ಲಿ ಮಳೆಯ ಅಬ್ಬರ; ಭೂಕುಸಿತದಿಂದ ಸಂಚಾರ ಅಸ್ತವ್ಯಸ್ತ

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಶನಿವಾರದಿಂದ ಮಳೆಯ ಅಬ್ಬರ ಮತ್ತಷ್ಟು ತೀವ್ರವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಭಾನುವಾರವೂ ಧಾರಾಕಾರವಾಗಿ ಮಳೆಯಾಗುತ್ತಿದೆ. ಹೀಗಾಗಿ ಜನಜೀವನದ ಮೇಲೆ ಪರಿಣಾಮ ಬೀರಿದ್ದು, ಕೆಲವಡೆ ಅವಘಡಗಳು ಸಂಭವಿಸಿವೆ. ಮಳೆ ಸಹಿತ ಬಿರುಗಾಳಿಯಿಂದಾಗಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ರಸ್ತೆಯ ಮೂರು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹಾಗೂ ಝರಿ ಜಲಪಾತಕ್ಕೆ ಸಂಪರ್ಕವಿರುವ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಇದೇ ವೇಳೆ ಶೃಂಗೇರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲೂ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸಂಬಂಧಪಟ್ಟ ಇಲಾಖೆಗಳು ಮರಗಳನ್ನು ತೆರವುಗೊಳಿಸಲು ಮತ್ತು ಭೂಕುಸಿತ ಸ್ಥಳದಲ್ಲಿ ರಸ್ತೆ ಸಂಚಾರ ಪುನರ್‌ಸ್ಥಾಪನೆಗಾಗಿ ಕ್ರಮ ಕೈಗೊಂಡಿವೆ.

ಅಮೆರಿಕನ್ ಏರ್ಲೈನ್ಸ್ ವಿಮಾನದಲ್ಲಿ ಬೆಂಕಿ; 173 ಪ್ರಯಾಣಿಕರ ರಕ್ಷಣೆ

ಡೆನ್ವರ್: ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿಯಾಮಿಗೆ ಹೊರಟಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನವೊಂದು ಲ್ಯಾಂಡಿಂಗ್ ಗೇರ್‌ ದೋಷದಿಂದಾಗಿ ಟೇಕ್ ಆಫ್ ನಿಂದ ಮುನ್ನೆ ಚಿಮ್ಮಿದ ಬೆಂಕಿ ಹಾಗೂ ಹೊಗೆಯಿಂದ ತುರ್ತು ಪರಿಸ್ಥಿತಿ ಉಂಟಾಗಿ ಟೇಕ್ ಆಫ್ ನ್ನು ರದ್ದುಪಡಿಸಲಾಗಿತ್ತು. BREAKING – An American Airlines plane at Denver International Airport was rapidly evacuated after one of its wheels caught fire and passengers and crew fled the aircraft via emergency slide. pic.twitter.com/JoMX2oUypE — Right Angle News Network (@Rightanglenews) July 26, 2025 ವಿಮಾನದಲ್ಲಿದ್ದ 173 ಪ್ರಯಾಣಿಕರನ್ನು ತಕ್ಷಣ ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಈ ಘಟನೆಯಲ್ಲಿ ಒಬ್ಬ ಪ್ರಯಾಣಿಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: “ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇಲ್ಲದಿದ್ದರೆ ಇವತ್ತಿಗೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು” ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “RSS ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಅವರಿಗೇ ಸಂಘದ ಬಗ್ಗೆ ಏನು ಅರಿವು ಇದೆ?” ಎಂದು ಪ್ರಶ್ನಿಸಿದರು. “ಶತಮಾನಗಳ ಇತಿಹಾಸ ಹೊಂದಿರುವ ಶಿಸ್ತಿನ ಸಂಘಟನೆ ಇದಾಗಿದೆ. ದೇಶದಲ್ಲಿ ಹಿಂದೂ ಸಮುದಾಯದ ಏಕತೆ ಹಾಗೂ ಸಂಸ್ಕೃತಿಯ ಉಳಿವಿಗೆ ಸಂಘವೇ ಆಧಾರ. ಕಾಂಗ್ರೆಸ್ ನಾಯಕರು, ವಿಶೇಷವಾಗಿ ಖರ್ಗೆ ಹಾಗೂ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಹಾಗೂ RSS ವಿರುದ್ಧ ಕೆಟ್ಟ ಪದಗಳನ್ನು ಬಳಸುತ್ತಿದ್ದಾರೆ. ಧಾನ್ಯರಾಗಬೇಕೆಂದು ಬಯಸುವವರು ಇಂತಹ ಮಟ್ಟಕ್ಕೆ ಇಳಿಯಬಾರದು,” ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ ಪಕ್ಷದ ನಾಯಕರಿಗೆ RSS ವಿರುದ್ಧ ದ್ವೇಷ ಹರಡುವುದೇ ಈಗ…

ಕಾಂಗ್ರೆಸ್ಸಿನ ‘ಭಾಗಿಧಾರಿ ಸಮಾವೇಶ’ ಬಗ್ಗೆ ವಿಜಯೇಂದ್ರ ಟೀಕೆ

ಬೆಂಗಳೂರು: ಆರೆಸ್ಸೆಸ್-ಬಿಜೆಪಿಯನ್ನು ವಿಷಕಾರಕ ಎಂದಿದ್ದ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಶುಕ್ರವಾರ ನಡೆದ ‘ಭಾಗಿಧಾರಿ ಸಮಾವೇಶ’ದಲ್ಲಿ ನಿಂತು ಹಿಂದುಳಿದ ಸಮುದಾಯಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 1956 ರಲ್ಲಿ OBC ಸಮುದಾಯಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದ ಕಾಕಾ ಕಾಲೇಲ್ಕರ್ ವರದಿಯನ್ನು ಹೊಸಕಿ ಹಾಕಿ ಹಿಂದುಳಿದವರ ಭವಿಷ್ಯಕ್ಕೆ ವಿಷ ಹಾಕಿದ್ದು ನಿಮ್ಮ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಎಂಬುದನ್ನು ನೀವು ಮರೆತುಬಿಟ್ಟಿರಾ? ಎಂದು ವಿಜಯೇಂದ್ರ ಅವರು ಎಐಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷದ 39 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಿಂದುಳಿದವರಿಗೆ ಮೀಸಲಾತಿ ಏಕೆ ನೀಡಲಿಲ್ಲ? ಕರ್ನಾಟಕದಲ್ಲಿ ಹಿಂದುಳಿದವರ ಬದುಕಿಗೆ ಬೆಳಕಾಗಲು ಮೀಸಲಾತಿ ಜಾರಿಗೊಳಿಸಿದ ಡಿ. ದೇವರಾಜ ಅರಸರ ರಾಜಕೀಯ ಬದುಕಿಗೆ ನಿಮ್ಮ ಸಮ್ಮುಖದಲ್ಲೇ ವಿಷ ಹಾಕಿದ್ದು ನಿಮ್ಮ ಕಾಂಗ್ರೆಸ್ ನ ಅಂದಿನ ಅಧಿನಾಯಕಿ ಇಂದಿರಾ ಗಾಂಧಿ ಯವರು ಎಂಬುದನ್ನು…

ಮಂಡಳಿ–ನಿಗಮಗಳ ಅಧ್ಯಕ್ಷರ ಪಟ್ಟಿಗೆ ಅಂತಿಮ ರೂಪ: ಶೀಘ್ರವೇ ಹೆಸರು ಘೋಷಣೆ

ಬೆಂಗಳೂರು: ರಾಜ್ಯದ 29 ಮಂಡಳಿ ಮತ್ತು ನಿಗಮಗಳಿಗೆ ಅಧ್ಯಕ್ಷರ ಪಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಗುರುವಾರ ಸಂಜೆ ಅಂತಿಮ ರೂಪ ನೀಡಿದ್ದಾರೆ. ಒಂದು ಅಥವಾ ಎರಡು ದಿನಗಳಲ್ಲಿ ಈ ಪಟ್ಟಿಯ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಈ ಕುರಿತು ಸುಳಿವು ನೀಡಿರುವ ಸಿಎಂ ಸಿದ್ದರಾಮಯ್ಯ, “ನಾನು ಮತ್ತು ಶಿವಕುಮಾರ್‌ ನಮ್ಮ ಶಿಫಾರಸುಗಳನ್ನು ನೀಡಿದ್ದಾರೆವು. ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ” ಎಂದು ಸ್ಪಷ್ಟಪಡಿಸಿದರು. ಆಗಸ್ಟ್ 11ರಂದು ನಡೆಯಲಿರುವ ವಿಧಾನಸಭೆಯ ಜಂಟಿ ಅಧಿವೇಶನಕ್ಕೂ ಮುನ್ನ ನಾಲ್ವರು ವಿಧಾನ ಪರಿಷತ್ ಸದಸ್ಯರ ನಾಮ ನಿರ್ದೇಶನವಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು, “ಬಹುಶಃ ಆಗಬಹುದು” ಎಂದು ಪ್ರತಿಕ್ರಿಯಿಸಿದರು. ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಪ್ರಕ್ರಿಯೆ ಮಧ್ಯೆ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರ ಹೆಸರಿನ ಕುರಿತು ಹೈಕಮಾಂಡ್‌ ಮಟ್ಟದಲ್ಲಿ…

‘SIR’ ಹೆಸರಿನಲ್ಲಿ ಮತ ಹಕ್ಕಿಗೆ ಧಕ್ಕೆ: INDIA ಮೈತ್ರಿಕೂಟದ ಪ್ರತಿಭಟನೆ

ನವದೆಹಲಿ: ಬಿಹಾರದಲ್ಲಿ ‘ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR)’ ಎಂಬ ಹೆಸರಿನಲ್ಲಿ ಮತದಾರರ ಪಟ್ಟಿಯಲ್ಲಿ ಜಾರಿಗೊಳಿಸಲಾಗುತ್ತಿರುವ ಪ್ರಕ್ರಿಯೆ ಮತಚೌಕಟ್ಟಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿರುವ INDIA ಮೈತ್ರಿಕೂಟದ ಸಂಸದರು, ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. SIR (Special Intensive Revision) के नाम पर बिहार में वोट चोरी की जा रही है, जनता के मताधिकार छीने जा रहे हैं। आज INDIA गठबंधन के सांसदों ने SIR लिखे पोस्टर को फाड़कर इसका बहिष्कार किया। 📍संसद परिसर, दिल्ली pic.twitter.com/7Vx6uiL3WV — Congress (@INCIndia) July 25, 2025 ಬಿಹಾರದಲ್ಲಿ ನಡೆಯುತ್ತಿರುವ ಈ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾವಿರಾರು ಜನರನ್ನು ಪಟ್ಟಿಯಿಂದ ಹೊರಗಿಡಲಾಗುತ್ತಿದ್ದು, ಈ ಮೂಲಕ ಅವರ ಮತದಾನದ ಹಕ್ಕು ಕಸಿಯಲ್ಪಡುತ್ತಿದೆ ಎಂದು…

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಬಂಧನ

ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಕಾರ್ಯದರ್ಶಿ ದೇವರಾಜ್ ರಾಮಚಂದರ್ ಅವರನ್ನು ತೆಲಂಗಾಣ ಪೊಲೀಸರ ಸಿಐಡಿ ಶುಕ್ರವಾರ ಬಂಧಿಸಿದೆ. ತಪ್ಪಿಸಿಕೊಂಡಿದ್ದ ದೇವರಾಜ್ ಅವರನ್ನು ಪುಣೆಯ ಹೋಟೆಲ್‌ನಿಂದ ಬಂಧಿಸಿ ಹೈದರಾಬಾದ್‌ಗೆ ಕರೆತರಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಜೂನ್ 9 ರಂದು ಎಚ್‌ಸಿಎ ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ದೇವರಾಜ್ ಎರಡನೇ ಆರೋಪಿಯಾಗಿದ್ದರು. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರನೇ ಆರೋಪಿ. ಎಚ್‌ಸಿಎ ಅಧ್ಯಕ್ಷ ಎ. ಜಗನ್ ಮೋಹನ್ ರಾವ್, ಖಜಾಂಚಿ ಸಿ.ಜೆ. ಶ್ರೀನಿವಾಸ ರಾವ್, ಸಿಇಒ ಸುನಿಲ್ ಕಾಂಟೆ, ಶ್ರೀ ಚಕ್ರ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಜಿ. ಕವಿತಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಯಾದವ್ ಅವರನ್ನು ಜುಲೈ 9 ರಂದು ಬಂಧಿಸಲಾಗಿದೆ. ಸಿಐಡಿ ಪ್ರಕಾರ, ಇದು ವಂಚನೆ ಮತ್ತು ಹಣ ದುರುಪಯೋಗದ ಉದ್ದೇಶಕ್ಕಾಗಿ ದಾಖಲೆಗಳನ್ನು ನಕಲಿ ಮಾಡಿದ ಪ್ರಕರಣವಾಗಿದ್ದು, ಆರೋಪಿಗಳು…

ಕಾಂಗ್ರೆಸ್ಸಿನ 9 ಲೋಕಸಭಾ ಸೀಟ್ ಗೆಲುವಿನಲ್ಲಿ ಯಾವುದೋ ಷಡ್ಯಂತ್ರ: ಸಿ.ಟಿ.ರವಿ ಆರೋಪ

ದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು 9 ಲೋಕಸಭಾ ಸೀಟ್ ಗೆಲ್ಲುವಲ್ಲಿ ಯಾವುದೋ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ. ಇಲ್ಲಿನ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಷಡ್ಯಂತ್ರ ಮೀರಿ ಎನ್‍ಡಿಎ 19 ಸೀಟ್ ಗೆದ್ದಿದ್ದು ಅದು ಪ್ರಜಾಪ್ರಭುತ್ವದ ಗೆಲುವು. ಇಲ್ಲದೇ ಇದ್ದರೆ, ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಅಳಿಯ ಗೆಲ್ಲಲು ಹೇಗೆ ಸಾಧ್ಯವಾಗುತ್ತಿತ್ತು ಎಂದು ಪ್ರಶ್ನೆಯನ್ನು ಮುಂದಿಟ್ಟರು. ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿಕ್ಕೋಡಿ, ದಾವಣಗೆರೆ, ಚಾಮರಾಜನಗರ, ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದರೆ ಚುನಾವಣಾ ಅಕ್ರಮ ನಡೆಸಿಯೇ ಗೆದ್ದಿದ್ದಾರೆ ಅನಿಸುತ್ತದೆ. ಕಾಂಗ್ರೆಸ್ಸಿನವರೇ ಚುನಾವಣಾ ಅಕ್ರಮ ನಡೆಸಿದ್ದಾರೆಂಬ ಅನುಮಾನ ತಮ್ಮದು ಎಂದು ನುಡಿದರು. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಚುನಾವಣಾ…