ಸಿಎಂ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ?

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ಎರಡೂವರೆ ವರ್ಷಗಳ ಅಗ್ರಿಮೆಂಟ್‌ ನಡೆದಿದ್ದು, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಲು ಸಿದ್ಧತೆ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. . ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ಅಗ್ರಿಮೆಂಟ್‌ ಆಗಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಒಪ್ಪಿಕೊಂಡಿದ್ದಾರೆ. ಕಳೆದ ಆರು ತಿಂಗಳಿಂದ ನಾನು ಇದನ್ನೇ ಹೇಳುತ್ತಿದ್ದೇನೆ. ಸಿದ್ದರಾಮಯ್ಯನವರನ್ನು ಅತಂತ್ರ ಮಾಡಲು ಕುತಂತ್ರ ನಡೆದಿದೆ. ಅವರಿಗೆ ಗೇಟ್‌ಪಾಸ್‌ ನೀಡುವುದು ಗ್ಯಾರಂಟಿಯಾಗಿದೆ. ನಾನು ಹೇಳಿದ್ದ ಜ್ಯೋತಿಷ್ಯ ನಿಜವಾಗಿದೆ. ಕಾಂಗ್ರೆಸ್‌ನ ಶಾಸಕರು ರಾಜಾರೋಷವಾಗಿ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಿದ್ದರಾಮಯ್ಯನವರಿಗೆ ಬೋರ್ಡಿಂಗ್‌ ಪಾಸ್‌ ಇದ್ದಂತೆ ಎಂದರು. ಸರ್ಕಾರ ಎರಡೂವರೆ ವರ್ಷಗಳಲ್ಲಿ ಟೇಕಾಫ್‌ ಆಗಿಲ್ಲ. ಶಾಸಕರೆಲ್ಲರೂ ತಿರುಗುಬಿದ್ದಿದ್ದಾರೆ. ಶಾಸಕರು ಸಿದ್ದರಾಮಯ್ಯನವರ ಪರವಾಗಿ ಇಲ್ಲ ಎಂಬುದು ಸುರ್ಜೇವಾಲಾ ಅವರ ಸಭೆಯಿಂದ ಗೊತ್ತಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೇಂದ್ರಕ್ಕೆ…

ಬೋಗಸ್ ಸಮೀಕ್ಷೆಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ದುಂದುವೆಚ್ಚ?

ಬೆಂಗಳೂರು: ಬೋಗಸ್ ಸಮೀಕ್ಷೆಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡಿದೆ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ಹೊರ ಹಾಕಿದೆ. ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿಕೆ ಸಂಬಂಧ ನಡೆಯುತ್ತಿರುವ ಸಮೀಕ್ಷೆ ಸಂಪೂರ್ಣ ಬೋಗಸ್‌ ಎನ್ನುವುದಕ್ಕೆ ಮೇಲಿಂದ ಮೇಲೆ ಸಾಕ್ಷ್ಯ ಲಭಿಸುತ್ತಿದೆ. ಇದರ ಬೆನ್ನಲ್ಲೇ ಸಮೀಕ್ಷೆ ನೆಪದಲ್ಲಿ ಕಾಂಗ್ರೆಸ್ ಸರ್ಕಾರ ಕೋಟ್ಯಂತರ ಹಣ ದುಂದುವೆಚ್ಚ ಮಾಡುತ್ತಿರುವ ವರದಿ ಹೊರಬಂದಿದೆ ಎಂದು ಬಿಜೆಪಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿ ಗಂಭೀರ ಆರೋಪ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮೀಕ್ಷೆ ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಮನೆ ಮನೆಗಳಿಗೆ ಸ್ಟಿಕ್ಕರ್‌ ಅಂಟಿಸಲು 3.60 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈವರೆಗೂ ಬೆಂಗಳೂರು ನಗರದಲ್ಲಿ 60%ರಷ್ಟು ಕೂಡ ಸರ್ವೇ ನಡೆದಿಲ್ಲ. ಇನ್ನೂ ಕೆಲವೆಡೆ ಸಮೀಕ್ಷೆ ಮಾಡದೇ ಸ್ಟಿಕ್ಕರ್ ಅಂಟಿಸಿದ್ದಾರೆ. ಕೆಲವೆಡೆ ಬೇಕರಿ, ದಿನಸಿ ಅಂಗಡಿಗಳಿಗೂ ಸಮೀಕ್ಷೆ…

ಕಾಗಿನೆಲೆ ಗುರುಪೀಠಕ್ಕೆ ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ: ಸಿಎಂ ಭರವಸೆ

ಬೆಂಗಳೂರು: ಕಾಗಿನೆಲೆ ಮಹಾಸಂಸ್ಥಾನದ ಪೀಠದ ವತಿಯಿಂದ ಸಮಾಜಮುಖಿ ಕೆಲಸಗಳಾಗುತ್ತಿರುವುದು ಶ್ಲಾಘನೀಯ ಎಂದು ಸಿಎಂ ಸಿದ್ದರಾಮಯ್ಯ ಕೊಂಡಾಡಿದ್ದಾರೆ. ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ ಹಾಗೂ ಶಾಖಾಮಠ ಮತ್ತು ಬೆಂಗಳೂರು ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಗಿನೆಲೆ ಗುರುಪೀಠದ ಶಾಖಾಮಠದ ಭಕ್ತರ ಭಂಡಾರದ ಕುಟೀರಕ್ಕೆ ಹಿಂದೆ ನಾನೇ ಶಂಕುಸ್ಥಾಪನೆ ಮಾಡಿದ್ದೆ, ಇಂದು ನಾನೇ ಉದ್ಘಾಟನೆ ಮಾಡುತ್ತಿರುವುದು ಹೆಚ್ಚು ಸಂತಸ ನೀಡಿದೆ. ಕಾಗಿನೆಲೆ ಗುರುಪೀಠದ ಸ್ವಾಮಿಗಳು ಶಾಖಾಮಠದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದಾರೆ. 10 ಕೋಟಿ ರೂ. ಬೆಲೆಬಾಳುವ ಆಸ್ತಿಯನ್ನು ಒಂದು ಎಕರೆ ಜಾಗವನ್ನು ಮಹೇಶ್ ಅವರು ಕೊಟ್ಟಿದ್ದು ಶ್ಲಾಘನೀಯ. ಅವರಿಗೆ ಎಲ್ಲರ ಪರವಾಗಿ ಧನ್ಯವಾದ ಹೇಳಿದರು. ಕಾಗಿನೆಲೆ ಗುರುಪೀಠದ ನಿರಂಜನಾನಂದ ಸ್ವಾಮೀಜಿಯವರು ಯಾವುದೇ ಕಟ್ಟಡಗಳನ್ನು ಅತ್ಯಂತ ಕ್ಷಿಪ್ರವಾಗಿ ಕಟ್ಟುತ್ತಾರೆ. ಎರಡೇ ವರ್ಷಗಳಲ್ಲಿ ಭಕ್ತರಿಂದ ವಂತಿಗೆ ಪಡೆದು ನಿರ್ಮಾಣ ಮಾಡಿದ್ದಾರೆ. ಇದು ಅವರ ಕಾರ್ಯದಕ್ಷತೆಗೆ ಸಾಕ್ಷಿ. ಸಚಿವರಾದ ಬೈರತಿ ಸುರೇಶ್…

ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆಯೇ ಮಹಿಳೆಗೆ ಹೆರಿಗೆ: ಸೇನಾ ವೈದ್ಯನ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ

ಝಾನ್ಸಿ (ಉತ್ತರ ಪ್ರದೇಶ): ಪ್ರಯಾಣದ ಮಧ್ಯೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ, ಭಾರತೀಯ ಸೇನೆಯ ವೈದ್ಯಾಧಿಕಾರಿಯೊಬ್ಬರು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆಯೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಶನಿವಾರ ಮಧ್ಯಾಹ್ನ ಪನವೇಲ್‌–ಗೋರಖಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಝಾನ್ಸಿ ರೈಲು ನಿಲ್ದಾಣದಲ್ಲಿ ಇಳಿದರು. ತೀವ್ರ ನೋವಿನಿಂದ ಮಹಿಳೆಯ ಕಿರುಚಾಡುತ್ತಿದುದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಕೂಡಲೇ ಸೇನಾ ವೈದ್ಯರನ್ನು ಸಂಪರ್ಕಿಸಿದರು. ಅದಾಗಲೇ, ಅಲ್ಲೇ ಇದ್ದ ಭಾರತೀಯ ಸೇನೆಯ ಮೇಜರ್‌ ಡಾ. ರೋಹಿತ್‌ ಬಚ್‌ವಾಲಾ (31) ಅವರು ಕೂಡಲೇ ಮಹಿಳೆಯ ನೆರವಿಗೆ ಧಾವಿಸಿದರು. ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿಯೇ ಹೆರಿಗೆ ಪ್ರಕ್ರಿಯೆ ನಡೆಸಿದರು. ವೈದ್ಯರ ಸಮಯ ಪ್ರಜ್ಞೆಯಿಂದಾಗಿ ತಾಯಿ ಮತ್ತು ಮಗು ಇಬ್ಬರೂ ಕೂಡ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತುರ್ತು ವೈದ್ಯಸೇವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ…

‘ರಾಮಾಯಣ’ಶೀರ್ಷಿಕೆಗೆ ತಕರಾರು; ‘ಆಂಗ್ಲೀಕರಣ ನಿಲ್ಲಿಸಿ’ ಎಂದ ಉದ್ಯಮಿ

ಮುಂಬೈ: ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ “ರಾಮಾಯಣ” ಚಿತ್ರದ ನಿರ್ಮಾಪಕರು ಗುರುವಾರ ಈ ಚಿತ್ರದ ಆರಂಭಿಕ ನೋಟವನ್ನು ಹಂಚಿಕೊಂಡಾಗ, ಕೈಗಾರಿಕೋದ್ಯಮಿ ಮತ್ತು ಚಿಟಾಲೆ ಗುಂಪಿನ ಮಾಲೀಕರಲ್ಲಿ ಒಬ್ಬರಾದ ನಿಖಿಲ್ ಚಿಟಾಲೆ ಚಿತ್ರದ ಶೀರ್ಷಿಕೆಯ ಕುರಿತು ಪ್ರಶ್ನೆಯನ್ನು ಎತ್ತಿದ್ದಾರೆ. ಅದು ‘ರಾಮಾಯಣ’ ಅಲ್ಲ, ರಾಮಾಯಣ್’ ಆಗಿರಬೇಕು ಎಂದು ಅವರು ಸೂಚಿಸಿದರು. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ನಿಖಿಲ್, ರಾಮಾಯಣ ಮತ್ತು ರಾಮನಂತಹ ಪದಗಳನ್ನು ಆಂಗ್ಲೀಕರಣಗೊಳಿಸುವುದನ್ನು ನಿಲ್ಲಿಸುವಂತೆ ಎಲ್ಲರನ್ನೂ ಒತ್ತಾಯಿಸಿದರು. ನಮ್ಮ ಶ್ರೀಮಂತ ಪರಂಪರೆಗೆ ವಸಾಹತುಶಾಹಿ ಉಚ್ಚಾರಣೆ ಅಗತ್ಯವಿಲ್ಲ ಎಂದು ಹೇಳುವ ಮೂಲಕ, ಅವರು ತಮ್ಮ X ಟೈಮ್‌ಲೈನ್‌ನಲ್ಲಿ “ಇದು ರಾಮಾಯಣ್, ರಾಮಾಯಣವಲ್ಲ. ಇದು ರಾಮ್, ರಾಮನಲ್ಲ. ನಮ್ಮ ಪದಗಳ ಆಂಗ್ಲೀಕರಣವನ್ನು ನಾವು ತಪ್ಪಿಸಬೇಕು. ನಮ್ಮ ಪರಂಪರೆಗೆ ವಸಾಹತುಶಾಹಿ ಉಚ್ಚಾರಣೆ ಅಗತ್ಯವಿಲ್ಲ. ಇದನ್ನು ವಾಲ್ಮೀಕಿ ಬರೆದಿದ್ದಾರೆ’ ಎಂದವರು ಪ್ರತಿಪಾದಿಸಿದ್ದಾರೆ. “ನಮ್ಮ ಪರಂಪರೆಯ ಸತ್ಯಾಸತ್ಯತೆಯನ್ನು ಕಾಪಾಡುವ ಬಗ್ಗೆ ಅದು…

ಟ್ರಂಪ್‌ ಆಡಳಿತಕ್ಕೆ ಸವಾಲ್; ‘ಅಮೆರಿಕ ಪಕ್ಷ’ ಘೋಷಿಸಿದ ಎಲಾನ್ ಮಸ್ಕ್‌

ಅಮೆರಿಕದ ರಾಜಕೀಯ ವ್ಯವಸ್ಥೆ “ಏಕಪಕ್ಷೀಯ”ವಾಗಿದೆ ಎಂಬ ಗಂಭೀರ ಆರೋಪ ಹೇರಿದ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್‌, ತಮ್ಮದೇ ಆದ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ‘ಅಮೆರಿಕ ಪಾರ್ಟಿ’ ಎಂಬ ಹೆಸರಿನಲ್ಲಿ ಈ ಹೊಸ ಪಕ್ಷವನ್ನು ಪ್ರಕಟಿಸಿರುವ ಮಸ್ಕ್, ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. “ನೀವು ನಿಮ್ಮ ಸ್ವಾತಂತ್ರ್ಯವನ್ನು ಮರಳಿ ಪಡೆಯಲು ಅಮೆರಿಕ ಪಕ್ಷವನ್ನು ರಚಿಸಲಾಗಿದೆ,” ಎಂದು ಮಸ್ಕ್ ಹೇಳಿದ್ದಾರೆ. ದೇಶದ ರಾಜಕೀಯದ ಪ್ರಸ್ತುತ ಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ಗಳ ನಡುವೆ ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ಭಿನ್ನತೆ ಇಲ್ಲ. ವಾಸ್ತವವಾಗಿ ಇಬ್ಬರೂ ಒಂದೇ ಪಕ್ಷದವರಂತೆ ನಡೆದುಕೊಳ್ಳುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ. ಅಮೆರಿಕದ ಸ್ವಾತಂತ್ರ್ಯ ದಿನದಂದು ಅವರು ಎಕ್ಸ್‌ ನಲ್ಲಿ ಸಮೀಕ್ಷೆ ನಡೆಸಿ, “ನೀವು ಎರಡು ದೊಡ್ಡ ಪಕ್ಷಗಳಿಂದ ಸ್ವಾತಂತ್ರ್ಯ ಬಯಸುತ್ತೀರಾ? ನಾವು ಹೊಸ ಪಕ್ಷವನ್ನು ಸ್ಥಾಪಿಸಬೇಕಾ?” ಎಂದು ಸಾರ್ವಜನಿಕ…

ಕಮಿಷನ್ ಅವಾಂತರ; ಸಚಿವ ಶಿವರಾಜ್ ತಂಗಡಗಿ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟಿರುವ ಆರೋಪದಲ್ಲಿ ಸಿಲುಕಿರುವ ಸಚಿವ ಶಿವರಾಜ್ ತಂಗಡಗಿ ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದೆ. ಇಷ್ಡುದಿನ ಗುತ್ತಿಗೆದಾರರು, ಅಧಿಕಾರಿಗಳಿಂದ ಕಲೆಕ್ಷನ್, ಕಮಿಷನ್ ಪಡೆಯುತ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಹಿಂದೂ ಮಠಗಳನ್ನು ಟಾರ್ಗೆಟ್ ಮಾಡಿ ಕಮಿಷನ್ ಗೆ ಡಿಮ್ಯಾಂಡ್ ಇಟ್ಟು ಸಿಕ್ಕಿಬಿದ್ದಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ನೆಲಮಂಗಲದ ತೈಲೇಶ್ವರ ಗಾಣಿಗ ಮಠಕ್ಕೆ ಮಂಜೂರಾದ ಅನುದಾನದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಸಚಿವ ಶಿವರಾಜ್ ತಂಗಡಿಗೆ 25% ಕಮಿಷನ್‌ ಕೇಳಿದ್ದಾರೆಂದು ಪೂರ್ಣಾನಂದಪೂರಿ ಸ್ವಾಮೀಜಿ ಭ್ರಷ್ಟ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದಿರುವ ಬಿಜೆಪಿ, ‘ಮಠಗಳು ಬಳಿ ಕಮಿಷನ್ ಕೇಳುವ ನಿಮ್ಮ ಸರ್ಕಾರಕ್ಕೆ ಮಸೀದಿಗಳಿಂದಲೂ ಕಮಿಷನ್ ಕೇಳುವ ತಾಕತ್ತು ಇದೆಯಾ?’ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ. ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ನೈತಿಕ ಹೊಣೆ…

ಕೇರಳದಲ್ಲಿ ನಿಫಾ ವೈರಸ್ ಆತಂಕ: ತೀವ್ರ ನಿಗಾದಲ್ಲಿ 425 ಜನ

ತಿರುವನಂತಪುರಂ: ಕೇರಳ ರಾಜ್ಯಾದಲ್ಲಿ ನೀಫಾ ವೈರಸ್ ಸಂಪರ್ಕ ಪಟ್ಟಿಯಲ್ಲಿ 425 ವ್ಯಕ್ತಿಗಳನ್ನು ಇರಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ದೃಢಪಡಿಸಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಅತಿ ಹೆಚ್ಚು 228 ಜನರು ಸಂಪರ್ಕದಲ್ಲಿದ್ದಾರೆ, ನಂತರ ಪಾಲಕ್ಕಾಡ್‌ನಲ್ಲಿ 110 ಮತ್ತು ಕೋಝಿಕ್ಕೋಡ್‌ನಲ್ಲಿ 87 ಜನರು ಸಂಪರ್ಕದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಟ್ಟಿಯಲ್ಲಿರುವವರಲ್ಲಿ ಒಬ್ಬ ವ್ಯಕ್ತಿಗೂ ಇಲ್ಲಿಯವರೆಗೆ ವೈರಸ್ ಇಲ್ಲ ಎಂದು ವರದಿಯಾಗಿದೆ. ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಪೀಡಿತ ಪ್ರದೇಶಗಳಲ್ಲಿ ವ್ಯಾಪಕ ಕಣ್ಗಾವಲು ಮತ್ತು ನಿಯಂತ್ರಣ ಕ್ರಮಗಳನ್ನು ಪ್ರಾರಂಭಿಸಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ, ರೋಗದ ಮೂಲವನ್ನು ಪತ್ತೆಹಚ್ಚಲು ಮತ್ತು ಮತ್ತಷ್ಟು ಹರಡುವುದನ್ನು ತಡೆಯಲು ತೀವ್ರ ಕ್ಷೇತ್ರಕಾರ್ಯ ನಡೆಯುತ್ತಿದೆ. ಮಕ್ಕರಪರಂಬ, ಕುರುವಾ, ಕೂಟ್ಟಿಲಂಗಡಿ ಮತ್ತು ಮಂಕಡ ಪಂಚಾಯತ್‌ಗಳಾದ್ಯಂತ 20 ವಾರ್ಡ್‌ಗಳಲ್ಲಿ ಕಣ್ಗಾವಲು ಇರಿಸಲಾಗಿದೆ. ಮನೆ-ಮನೆಗೆ ಜಾಗೃತಿ ಅಭಿಯಾನಗಳು ಮತ್ತು ಸಂಪರ್ಕ-ಪತ್ತೆಹಚ್ಚುವ ಪ್ರಯತ್ನಗಳ ಭಾಗವಾಗಿ ಒಟ್ಟು 65 ತಂಡಗಳು 1,655…

‘ಒಂದು ದೊಡ್ಡ ಸುಂದರ ಮಸೂದೆ’ಗೆ ಕಾನೂನಿಗೆ ಟ್ರಂಪ್ ಅಂಕಿತ

ವಾಷಿಂಗ್ಟನ್: ಶ್ವೇತಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಒಂದು ದೊಡ್ಡ ಸುಂದರ ಮಸೂದೆ”ಗೆ ಕಾನೂನಿಗೆ ಸಹಿ ಹಾಕಿದ್ದಾರೆ. ಪ್ರತಿನಿಧಿಗಳ ಸಭೆಯು ಮಸೂದೆಯನ್ನು ಅಂಗೀಕರಿಸಿದ ಒಂದು ದಿನದ ನಂತರ ಅಧ್ಯಕ್ಷ ಟ್ರಂಪ್ ಅವರ ಮಹತ್ವಾಕಾಂಕ್ಷೆಯ ಶಾಸನಕ್ಕೆ ಅಂತಿಮ ಅನುಮೋದನೆ ಸಿಕ್ಕಿದೆ. ಈ ಕುರಿತಂತೆ ದೇಶದ ಜನತೆ ಜೊತೆ ಸಂತಸ ಹಂಚಿಕೊಂಡಿರುವ ಟ್ರಂಪ್ , ‘ನಮ್ಮ ದೇಶದಲ್ಲಿ ಜನರು ಇಷ್ಟು ಸಂತೋಷವಾಗಿರುವುದನ್ನು ನಾನು ಎಂದಿಗೂ ನೋಡಿಲ್ಲ, ಏಕೆಂದರೆ ಹಲವಾರು ವಿಭಿನ್ನ ಗುಂಪುಗಳ ಜನರನ್ನು ನೋಡಿಕೊಳ್ಳಲಾಗುತ್ತಿದೆ: ಮಿಲಿಟರಿ, ಎಲ್ಲಾ ರೀತಿಯ ನಾಗರಿಕರು, ಎಲ್ಲಾ ರೀತಿಯ ಉದ್ಯೋಗಗಳು. ಆದ್ದರಿಂದ ನೀವು ಅತಿದೊಡ್ಡ ತೆರಿಗೆ ಕಡಿತ, ಅತಿದೊಡ್ಡ ಖರ್ಚು ಕಡಿತ, ಅಮೆರಿಕಾದ ಇತಿಹಾಸದಲ್ಲಿ ಅತಿದೊಡ್ಡ ಗಡಿ ಭದ್ರತಾ ಹೂಡಿಕೆಯನ್ನು ಹೊಂದಿದ್ದೀರಿ’ ಎಂದರು. ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ದಕ್ಷಿಣ ಡಕೋಟಾದ ರಿಪಬ್ಲಿಕನ್‌ನ ಸೆನೆಟ್ ಬಹುಮತದ ನಾಯಕ…

ವಿದೇಶದಲ್ಲಿ ಮೋದಿ ಮೋಡಿ: ಭಾರತ ಪ್ರಧಾನಿಗೆ ಬ್ರೆಸಿಲ್ ಮಂದಿ ಜೈಕಾರ

ರಿಯೊ ಡಿ ಜನೈರೊ: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಭೇಟಿಗಾಗಿ ಶನಿವಾರ ಬ್ರೆಜಿಲ್‌ ತಲುಪಿದಾಗ ಅಲ್ಲಿನ ಭಾರತೀಯ ಸಮುದಾಯದ ಸದಸ್ಯರಿಂದ ಭವ್ಯ ಸ್ವಾಗತ ಸಿಕ್ಕಿದೆ. “ಬ್ರೆಜಿಲ್‌ನ ಭಾರತೀಯ ಸಮುದಾಯದವರು ರಿಯೊ ಡಿ ಜನೈರೊದಲ್ಲಿ ಬಹಳ ರೋಮಾಂಚಕ ಸ್ವಾಗತವನ್ನು ನೀಡಿದರು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರುವುದರ ಜೊತೆಗೆ ಭಾರತದ ಅಭಿವೃದ್ಧಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ ಎಂಬುದು ಅದ್ಭುತವಾಗಿದೆ! ಸ್ವಾಗತದ ಕೆಲವು ಝಲಕ್‌ಗಳು ಇಲ್ಲಿವೆ…” ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆ ಸಂತಸ ಹಂಚಿಕೊಂಡ ಬ್ರೆಸಿಲ್ ನಲ್ಲಿರುವ ಭಾರತೀಯರು “ಇದು ಅದ್ಭುತ ಅನುಭವ. ಅವರನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಯಿತು. ಅವರು ನನ್ನ ಮಗಳನ್ನು ಸಹ ಆಶೀರ್ವದಿಸಿದರು ಮತ್ತು ನಿಧಾನವಾಗಿ ಅವರ ತಲೆಯ ಮೇಲೆ ಕೈ ಇಟ್ಟರು…” ಎಂದರು. ‘ಇಂತಹ ಮಹಾನ್ ನಾಯಕರನ್ನು ಮೊದಲ…