ಬೆಂಗಳೂರು: RCB ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ದುರಂತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಭವಿಷ್ಯದಲ್ಲಿಯೇ ಅಂತಹ ಘಟನೆಗಳು ಮರುಕಳಿಸದಂತೆ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಭಾನುವಾರಗಳು, ಮೆರವಣಿಗೆಗಳು, ಪ್ರತಿಭಟನೆಗಳು, ಕ್ರೀಡಾ ಕೂಟಗಳು ಮುಂತಾದವುಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲಾಗಿದೆ ಎಂದು ತಿಳಿಸಿದರು. ಸಮಾರಂಭಕ್ಕೂ ಮುನ್ನ ಸ್ಥಳ ಪರಿಶೀಲನೆ, ಆಯೋಜಕರ ಜತೆ ಯೋಜನೆ ರೂಪಿಸುವುದು ಕಡ್ಡಾಯವಾಗಿದ್ದು, ಸ್ಥಳದ ಸಾಮರ್ಥ್ಯ, ತುರ್ತು ನಿರ್ಗಮನ ಮಾರ್ಗ, ತಂತ್ರಜ್ಞಾನ ಬಳಕೆ ಸಾಧ್ಯತೆಗಳ ವಿಶ್ಲೇಷಣೆ ಅಗತ್ಯವಾಗಿದೆ. ಮುಖ್ಯ ಅಂಶಗಳು ಹೀಗಿವೆ: ತರಬೇತಿ ಪಡೆದ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ನಿಯೋಜನೆ QR ಕೋಡ್, ಬಯೋಮೆಟ್ರಿಕ್ ತಂತ್ರಜ್ಞಾನ ಬಳಕೆ ಪುರುಷ, ಮಹಿಳೆ, ವೃದ್ಧ,…
Category: ಪ್ರಮುಖ ಸುದ್ದಿ
ಕಾಂಗ್ರೆಸ್ ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ? ಸಿ.ಟಿ.ರವಿ ಪ್ರಶ್ನೆ
ಬೆಂಗಳೂರು: ಕಾಂಗ್ರೆಸ್ ಅಧಿಕಾರ ಮತ್ತು ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಭೀಭತ್ಸ ಕೃತ್ಯ ನಡೆದು ತಣ್ಣಗಾಗಿತ್ತು. ಆಗ ಕೃತ್ಯ ಎಸಗಿದಾತ ಮಾನಸಿಕ ಅಸ್ವಸ್ಥ ಎಂದಿದ್ದರು. ಅದರ ನಂತರ ಭಟ್ಕಳದಲ್ಲಿ ಪ್ರಕರಣ ಆಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು, ಹೊಸನಗರ, ಬೆಳಗಾವಿಯಲ್ಲಿ ಇಂಥ ಘಟನೆಗಳಾಗಿವೆ. ಅಂದರೆ ಹಸುವಿನ ಕೆಚ್ಚಲು ಕತ್ತರಿಸುವ ಇಷ್ಟೊಂದು ಮಾನಸಿಕ ಅಸ್ವಸ್ಥರು ಯಾಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹುಟ್ಟಿಕೊಂಡರು ಎಂದು ಕೇಳಿದರು. ಹುಣ್ಣಿಮೆ ಬಂದಾಗ ಕೆಲವರಿಗೆ ಹುಚ್ಚು ಕೆದರುತ್ತಂತೆ. ಕಾಂಗ್ರೆಸ್ ಬಂದಾಗ ಈ ಹುಚ್ಚು ಹೆಚ್ಚಾಗುತ್ತದೆಯೇ? ಎಂದ ಅವರು, ಇದು ಪ್ರತ್ಯೇಕ ಘಟನೆ ಅಲ್ಲ; ಗೋವನ್ನು…
‘ಬುಲೆಟ್ ಟ್ರೈನ್ ಮಾತಿನಲ್ಲಿ ರೈಲುಗಳು ಮಾಯ’: ಸುರ್ಜೇವಾಲ ಔಕ್ಷೇಪ
ಬೆಂಗಳೂರು: “ಬುಲೆಟ್ ಟ್ರೈನ್ ನೀಡುತ್ತೇವೆ ಎನ್ನುತ್ತಾ ರೈಲುಗಳನ್ನೇ ಮಾಯ ಮಾಡಿದ್ದಾರೆ. ಜನರ ನಿರೀಕ್ಷೆಗೆ ಮೂಗುತೂಗು ಹಾಕಿದ್ದಾರೆ,” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಕೇಂದ್ರದ ಬೆಲೆ ಏರಿಕೆ ನೀತಿಗಳು ದೇಶದ ಜನಸಾಮಾನ್ಯರನ್ನು ಜರ್ಜರಿತಗೊಳಿಸುತ್ತಿವೆ ಎಂದರು. “ಗ್ಯಾಸ್ ಸಿಲಿಂಡರ್, ದಿನಬಳಕೆಯ ವಸ್ತುಗಳಿಗೆ ಝಡ್ ಪ್ಲಸ್ ಸೆಕ್ಯೂರಿಟಿ ಬೇಕಾಗುವ ಪರಿಸ್ಥಿತಿ ಬಂದಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಜನರ ಜೇಬಿಗೆ ಕೈ ಹಾಕುತ್ತಿರುವ ‘ಪಿಕ್ ಪಾಕೆಟ್ ಸರ್ಕಾರ’,” ಎಂದು ವ್ಯಂಗ್ಯವಾಣಿ ಹಾಕಿದರು. ಜುಲೈ 1ರಿಂದ ರೈಲ್ವೆ ದರ ಏರಿಕೆ ಮೂಲಕ ₹700 ಕೋಟಿ ಹೊರೆಯನ್ನು ಜನರ ಮೇಲೆ ಹಾಕಲಾಗಿದೆ. ಇದರ ಹಿಂದೆ “ರೈಲ್ವೆ ಹಳಿಗಳ ದರೋಡೆ” ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು. ಅಕ್ಟೋಬರ್ 2024ರವರೆಗೆ ಟೋಲ್ ಹಾಗೂ ಪ್ಯಾಸೆಂಜರ್ ದರ ಏರಿಕೆ ನಿರಂತರವಾಗಿ…
ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಸೂಕ್ತ ಕ್ರಮಕ್ಕೆ ಸರ್ಕಾರದ ನಿರ್ದೇಶನ
ಬೆಂಗಳೂರು: ಯುವ ಸಮುದಾಯದಲ್ಲಿ ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ತನಿಖಾ ವರದಿ ನಡೆಸಿ, ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ಯುವ ಸಮುದಾಯದಲ್ಲಿ ಅದರಲ್ಲೂ ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವರು, ಈ ಬಗ್ಗೆ ಸೂಕ್ತ ಹಾಗೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಒಂದು ತಿಂಗಳಿಂದ ಸುಮಾರು ಜನ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಪ್ರಕರಣಗಳೂ ಸೇರಿದಂತೆ ಈ ಹಿಂದಿನ ಘಟನೆಗಳ ಬಗ್ಗೆಯೂ ಸೂಕ್ತ ತನಿಖೆ ನಡೆಸಿ, ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ. ಹಾಸನದಲ್ಲಿ ಪ್ರಕರಣಗಳು ಹೆಚ್ಚಾಗಿರುವ ಬಗ್ಗೆ ವರದಿಗಳು ಬಂದ ಕೂಡಲೇ ಹಾಸನ ವೈದ್ಯಕೀಯ ಸಂಸ್ಥೆ…
ಕಾರು ಪಲ್ಟಿಯಾಗಿ ಆರು ಮಂದಿ ಸಾವು; ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಅಪಘಾತ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪಿದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಯಲಹಂಕ- ಹಿಂದೂಪುರ ಹೆದ್ದಾರಿಯ ಮಾಕಳಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಮೃತರನ್ನು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿ ನಿವಾಸಿಗಳಾದ ಈಶ್ವರಪ್ಪ (75), ಪುರುಷೋತ್ತಮ (75), ಕಾಳಪ್ಪ(68), ನಾರಾಯಣಪ್ಪ(70),ಗೋಪಿನಾಥ್ (45) ಸೇರಿದಂತೆ ಚಾಲಕ ನರಸಿಂಹಮೂರ್ತಿ(50) ಎಂದು ಗುರುತಿಸಲಾಗಿದೆ. ಸುದ್ದಿತಿಳಿದು ಸ್ಥಳಕ್ಕೆ ಧಾವಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
‘ಸಿಲಾ’ ಚಿತ್ರದ ಮೋಷನ್ ಪೋಸ್ಟರ್; ಪ್ರೀತಿಯ ಕಥಾಹಂದರ ತಂದ ಭರವಸೆ!
ಮುಂಬೈ: ಮುಂಬರುವ ‘ಸಿಲಾ’ ಚಿತ್ರದ ಮೋಷನ್ ಪೋಸ್ಟರ್ ಸೋಮವಾರ ಅನಾವರಣಗೊಂಡಿದೆ. ಈ ಪೋಸ್ಟರ್‌ನಲ್ಲಿ ಚಿತ್ರದ ಪ್ರಮುಖ ಜೋಡಿ ಹರ್ಷವರ್ಧನ್ ರಾಣೆ ಮತ್ತು ಸಾದಿಯಾ ಖತೀಬ್ ಪರಸ್ಪರ ಅಪ್ಪಿಕೊಳ್ಳುತ್ತಿದ್ದಾರೆ. ಇದು ಇಬ್ಬರು ಮುಖ್ಯಪಾತ್ರಗಳನ್ನು ಆಳವಾದ ಆತ್ಮೀಯ ಅಪ್ಪುಗೆಯಲ್ಲಿ ಸೆರೆಹಿಡಿಯುತ್ತದೆ, ಪ್ರೀತಿ, ಹಂಬಲ ಮತ್ತು ಮಾತನಾಡದ ಪ್ರಕ್ಷುಬ್ಧತೆಯ ಬಗ್ಗೆ ಮಾತನಾಡುವ ಒಂದು ಕ್ಷಣ. ಅವರ ದೇಹ ಭಾಷೆ ಮತ್ತು ಅಭಿವ್ಯಕ್ತಿಗಳು ಉತ್ಸಾಹದಿಂದ ಕೆತ್ತಿದ ಮತ್ತು ವಿಧಿಯಿಂದ ಪರೀಕ್ಷಿಸಲ್ಪಟ್ಟ ಸಂಬಂಧವನ್ನು ಸೂಚಿಸುತ್ತವೆ. ಈ ಪೋಸ್ಟರ್ ಅನ್ನು ಬ್ರೆಜಿಲಿಯನ್ ಗಾಯಕಿ ಅಲೆಕ್ಸಿಯಾ ಎವೆಲಿನ್ ಹಾಡಿದ ಗಾಯನ ಟ್ರ್ಯಾಕ್‌ಗೆ ಹೊಂದಿಸಲಾಗಿದೆ, ಇದು ಭಾವನಾತ್ಮಕವಾಗಿ ತಲ್ಲೀನಗೊಳಿಸುವ ಅನುಭವಕ್ಕೆ ಧ್ವನಿಯನ್ನು ಹೊಂದಿಸುತ್ತದೆ. HARSHVARDHAN RANE – SADIA KHATEEB STARRER TITLED 'SILAA' – FILMING BEGINS TOMORROW… #Silaa is the title of the upcoming romantic-action drama starring #HarshvardhanRane and #SadiaKhateeb,…
ಖರ್ಗೆ ಕೇವಲ ಕೈಗೊಂಬೆ’: ಪ್ರಲ್ಹಾದ್ ಜೋಶಿ ವ್ಯಂಗ್ಯ
ಬೆಂಗಳೂರು: ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೆಸರಿಗೆ ಮಾತ್ರ ಅಧ್ಯಕ್ಷರನ್ನಾಗಿ ಮಾಡಿದೆ ಮತ್ತು ಅವರನ್ನು ಕೇವಲ ಕೈಗೊಂಬೆಯಾಗಿಟ್ಟುಕೊಂಡು ಪಕ್ಷವನ್ನು ನಡೆಸುತ್ತಿದೆ ಎಂದು ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಬಣ್ಣಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಜೋಶಿ, ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಖರ್ಗೆ ಹೊಂದಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಕೇವಲ ಸಾಂಕೇತಿಕ ಅಧಿಕಾರವನ್ನು ನೀಡಿದೆ ಎಂದು ವಿಶ್ಲೇಷಿಸಿದರು. ಖರ್ಗೆ ಅವರ ಪ್ರಸ್ತುತ ಪರಿಸ್ಥಿತಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ ಎಂದು ಅವರು ಪ್ರತಿಪಾದಿಸಿದರು. ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹೈಕಮಾಂಡ್ ಕೈಯಲ್ಲಿದೆ; ನಮಗೆ ಅದರ ಬಗ್ಗೆ ಏನೂ ತಿಳಿದಿಲ್ಲ’ ಎಂಬ ಖರ್ಗೆ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಇದು ಕಾಂಗ್ರೆಸ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸ್ಪಷ್ಟ ಪ್ರತಿಬಿಂಬವಾಗಿದೆ ಮತ್ತು ಹಿರಿಯ ನಾಯಕರಿಗೆ ಪಕ್ಷದಲ್ಲಿ ಯಾವುದೇ…
ವಾಣಿಜ್ಯ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆ; ಗ್ರಾಹಕರಿಗೆ ತಾತ್ಕಾಲಿಕ ರಿಲೀಫ್
ನವದೆಹಲಿ: ಜುಲೈ ತಿಂಗಳ ಆರಂಭದಲ್ಲೇ ದೇಶದ ಜನತೆಗೆ ತೈಲ ಮಾರುಕಟ್ಟೆ ಕಂಪನಿಗಳು ಗುಡ್‌ನ್ಯೂಸ್ ನೀಡಿವೆ. 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ 60ರಷ್ಟು ಇಳಿಕೆ ಘೋಷಿಸಿರುವುದು ಸಾರ್ವಜನಿಕರಲ್ಲಿ ಸಂತಸ ತಂದಿದೆ. ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಗಳು ಮಂಗಳವಾರದಿಂದಲೇ ಈ ಹೊಸ ದರ ಪ್ರಕಟಿಸಿವೆ. ಇಳಿಕೆಯಿಂದಾಗಿ ಹೋಟೆಲ್, ರೆಸ್ಟೋರೆಂಟ್, ವ್ಯಾಪಾರಿ ಬಳಕೆದಾರರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.ಆದರೆ, ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
RSSಗೆ ನಿಷೇಧ? ಪ್ರಿಯಾಂಕ್ ಪ್ರತಿಪಾದನೆಗೆ ವಿಜಯೇಂದ್ರ ಪ್ರಹಾರ
ಬೆಂಗಳೂರು: ‘ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?’ ಎಂದು ಆರೆಸ್ಸೆಸ್ ಬ್ಯಾನ್ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ. RSSನ ರಂಬೆ-ಕೊಂಬೆಗಳನ್ನೂ ಕೊಂಕಿಸಲಾಗದವರ ಸೊಲ್ಲಡಗಿ ದಿಕ್ಕು ಕಾಣದಂತೆ ಧೂಳಿಪಟವಾಗಿವೆ ಎಂದು ವಿಜಯೇಂದ್ರ ಅವರು ಪ್ರಿಯಾಂಕ್ ಖರ್ಗೆಗೆ ನೆನಪಿಸಿದರು. ಈ ಸಾಲಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದಲೇ…
ಔಷಧ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 35ಕ್ಕೆ ಏರಿಕೆ; ಪ್ರಧಾನಿಯಿಂದ ಪರಿಹಾರ ಘೋಷಣೆ
ಹೈದರಾಬಾದ್: ತೆಲಂಗಾಣದ ಸಾಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯಲ್ಲಿ ಸೋಮವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಕಂಪನಿಯ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಸ್ಥಳದಲ್ಲೇ ಸಾವನ್ನಪಿದರೆ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದ ಹಿನ್ನೆಲೆ ಇದಾಗಿದ್ದು, ಘಟನೆಯ ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ಪಡೆ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತು. ಘಟನೆ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
