ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ತೀರ್ಪು ಒಪ್ಪಬಾರದು ಸಂಕಷ್ಟ ಸೂತ್ರ ಜಾರಿಯಾಗೂ ತನಕ ಒಪ್ಪುವುದಿಲ್ಲ ಎಂದು ರಾಜ್ಯ ಸರ್ಕಾರ ಮರು ಪರಿಶೀಲನೆ ಅರ್ಜಿ ಸಲ್ಲಿಸಬೇಕು ಎಂದು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ರಾಜ್ಯದ ಜನರ ರೈತರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನಾರ್ತ್ ಈಸ್ಟ್ ಮಾನ್ಸೂನ್ ಮಳೆ ತಮಿಳುನಾಡಿಗೆ ಹೆಚ್ಚು ಬರುವ ಅಲ್ಲಿನ ನೀರು ಅದೇ ರಾಜ್ಯಕ್ಕೆ ಹೋಗುವ ಕಾರಣ ಕಾರಣ ನಾವು ಕಾವೇರಿ ಜಲಾಶಯದಿಂದ ನೀರು ಹರಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ನ್ಯಾಯಾಲಯಕ್ಕೆ ತಿಳಿಸಿ, ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಬೇಕು ಸಂಕಷ್ಟ ಸೂತ್ರ ಜಾರಿಯಾಗುವ ತನಕ ಆದೇಶ ಪಾಲನೆ ಸಾಧ್ಯವಿಲ್ಲ ಎಂದು ತಿಳಿಸಬೇಕು ಎಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖ್ಯಸ್ಥರೂ ಆದ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಾಜಕೀಯ ಒತ್ತಡದ ಕಾರಣ ರೈತರು ಜನಸಾಮಾನ್ಯರು ತೊಂದರೆಗೆ ಸಿಲುಕುತ್ತಿದ್ದಾರೆ ಆದ್ದರಿಂದ ಕಾವೇರಿ ನೀರು ಪ್ರಾಧಿಕಾರ ಹಾಗೂ ನೀರು ನಿರ್ವಹಣ ಪ್ರಾಧಿಕಾರ ರದ್ದು ಮಾಡಬೇಕು, ಈ ಸಂಸ್ಥೆಗಳು ಸ್ವತಂತ್ರ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಬೇಕು ಈ ನೂತನ ಪ್ರಾಧಿಕಾರಕ್ಕೆ ವಿಶೇಷ ನೀತಿ ನಿಯಮಗಳ ರಚಿಸಬೇಕು, ಈ ಪ್ರಾಧಿಕಾರಕ್ಕೆ ಕಾವೇರಿ ಅಚ್ಚು ಕಟ್ಟು ಭಾಗದ ಎಲ್ಲ ರಾಜ್ಯಗಳ ಪರಿಣಿತರು ವಿಷಯ ಪರಿಣಿತರು ರೈತರು ಒಳಗೊಂಡಂತೆ ರಚನೆ ಆಗಬೇಕು ಈ ಸಮಿತಿಯ ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು ,ಕೇಂದ್ರ ಚುನಾವಣಾ ಆಯೋಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದ ಅವರು, ಕನ್ನಡದ ನೆಲ ಜಲ ವಿಚಾರದಲ್ಲಿ ಹೋರಾಟ ಮಾಡಿದ ಕನ್ನಡ ಪರ ಸಂಘಟನೆಗಳ ಹಾಗೂ ರೈತ ಸಂಘಟನೆಗಳ ಮುಖಂಡರ ಮೇಲೆ ಇರುವ ಎಲ್ಲ ಪೊಲೀಸ್ ಮುಖದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ವಾಪಸ್ ಪಡಯಬೇಕು ಎಂದರು.
ಕಾವೇರಿ ಅಚ್ಚುಕಟ್ಟು ಭಾಗದ ರೈತರ ಬೆಳೆಗೆ ಬೆಳೆ ಬೆಳೆಯಲು ನೀರು ಕೊಡದೆ ತಮಿಳುನಾಡಿಗೆ ಹರಿಸಿ ರೈತರ ಬಲಿ ಪಡೆದ ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು ಈಗ ಬೆಂಗಳೂರಿನ ಜನರ ಬಲಿ ಪಡೆಯಬಾರದು ಎಂದ ಅವರು, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜೊತೆ ನಿಕಟ ಬಾಂಧವ್ಯದ ಕಾರಣ ನೀರಿನ ವ್ಯಾಪಾರ ಮಾಡುವ ನೀರಾವರಿ ಸಚಿವ ಡಿ ಕೆ ಶಿವಕುಮಾರ್ ಸಚಿವ ಖಾತೆ ಬದಲಾಯಿಸಿ ನೀರು ನಿಲ್ಲಿಸಬೇಕ ಎಂದರು.
ಕರ್ನಾಟಕದ ನೆಲ ಜಲ ವಿಚಾರದ ಬಗ್ಗೆ ಮಾತನಾಡಲು ಸಾಧ್ಯವಾಗದ ಕರ್ನಾಟಕವನ್ನು ಪ್ರತಿನಿಧಿಸುವ ರಾಜ್ಯಸಭಾ ಸದಸ್ಯರು ಕೇಂದ್ರ ಸರ್ಕಾರದಲ್ಲಿ ಪ್ರಬಲವಾಗಿರುವ ಕೇಂದ್ರ ಹಣಕಾಸು ಸಚಿವರು ರಾಜ್ಯ ಸರ್ಕಾರ ಕರೆದ
ಸಭಗೆ ಬಾರದೆ ನಿರ್ಲಕ್ಷತನ ತೂರಿರುವ ಇವರು ನೈತಿಕವಾಗಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು
ಅಮ್ ಅದ್ಮಿಪಕ್ಷದ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ ಜನರ ಹಿತ ರಕ್ಷಣೆಗಾಗಿ ನೀರು ಬಿಡುವುದಿಲ್ಲ ಎನ್ನುವ ಕಠಿಣ ನಿರ್ಧಾರ ಮಾಡಿ ಮುಖ್ಯಮಂತ್ರಿ ರಾಜ್ಯದ ಜನರ ಹೀರೋ ಆಗಬೇಕು ಕೂಡಲೇ ವಿಧಾನಸಭೆ ಅಧಿವೇಶನ ಕರೆದು ಸುಗ್ರೀವಾಜ್ಞೆ ಹೊರಡಿಸಬೇಕು ಎಂದರು
ಸಭೆಯಲ್ಲಿ ಭಾಗವಹಿಸಿದ ಕನ್ನಡ ಸಂಘಟನೆಗಳ ಮುಖಂಡರಾದ ಕನ್ನಡ ಚಳುವಳಿ ಗುರುದೇವ ನಾರಾಯಣ ಮಾತನಾಡಿ ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆ ಅರಿವು ಮೂಡಿಸಲು ಪಂಜಿನ ಮೆರವಣಿಗೆ ನಡೆಸೋಣ ಎಂದರು
ಕರ್ನಾಟಕ ನವ ನಿರ್ಮಾಣ ವೇದಿಕೆ ಯತಿರಾಜ್ ನಾಯ್ಡು ಮಾತನಾಡಿ ಲೋಕಸಭಾ ಸದಸ್ಯರ ನಿರ್ಲಕ್ಷತನ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಖಂಡಿಸಿದರು ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಕುಮಾರಸ್ವಾಮಿ ರಾಜ್ಯಾದ್ಯಂತ ತಕ್ಷಣ ಹೋರಾಟಕ್ಕೆ ಕರೆಕೊಡಬೇಕು ಎಂದರು. ರೈತ ಸಂಘದ ಪುಟಸ್ವಾಮಿ ಮಾತನಾಡಿ ಬೆಂಗಳೂರು ನಗರಕ್ಕೆ ಕುಡಿಯನೀರು ಸರಬರಾಜು ರೈತರು ಸ್ಥಗಿತಗೊಳಿಸಿದರೆ ಸಮಸ್ಯೆ ಉಲ್ಬಣವಾದರೆ ಹೋರಾಟಕ್ಕೆ ಬರುತ್ತಾರೆ ಎಂದರು.
ಚಲನಚಿತ್ರ ನಟರು ಚುನಾವಣೆಯಲ್ಲಿ ಸ್ಪರ್ಧಾತ್ಮಕವಾಗಿ ಪ್ರಚಾರಕ್ಕೆ ಬರುತ್ತಾರೆ ಇಂದು ಜನರ ಸಂಕಷ್ಟದ ಸಮಯದಲ್ಲಿ ಹೇಳಿಕೆ ಕೊಟ್ಟರೆ ಸಾಲದು ಹೋರಾಟಕ್ಕೆ ಇಳಿಯಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು ರಾಜ್ಯದ ಪ್ರತಿಷ್ಠಿತ ಮಠಾಧೀಶರು ಕರೆ ಕೊಟ್ಟರೆ ಸರ್ಕಾರವೇ ಬೀದಿಗೆ ಬರುತ್ತದೆ ಈ ಬಗ್ಗೆ ಗಮನ ಸೆಳೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು
ಅಮ್ಮಾ ಆದ್ಮಿ ಪಕ್ಷದ ಪೃಥ್ವಿರೆಡ್ಡಿ ,ಮೋಹನ್ ದಾಸರಿ, ಸಂಜಿತ್, ಉಷಾ ನರಸಿಂಹಮೂರ್ತಿ, ನಿಲೇಶ್ ಗೌಡ್ರು, ಗಾಂಧಿನಗರ ಮೂರ್ತಿ, ಜೈ ಶ್ರೀನಿವಾಸ್ , ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.