ಸರ್ಕಾರದ ವಿರುದ್ದ ಸಿಡಿದೆದ್ದ ಕುರುಬೂರು ಸೈನ್ಯ; ಜಲಾಶಯಗಳ ನೀರು ನಿಲ್ಲಿಸುವ ತನಕ ಚಳುವಳಿ ಘೋಷಣೆ

ಬೆಂಗಳೂರು: ಕಾವೇರಿ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕರ್ನಾಟಕ ಜಲಸಂರಕ್ಷಣಾ ಸಮಿತಿ, ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸುವ ತನಕ ಚಳುವಳಿ ನಿಲ್ಲಿಸುವುದಿಲ್ಲ ಘೋಷಿಸಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಗಾಂಧೀಜಯಂತಿ ದಿನ ಮೌನ ಧರಣಿ ಆರಂಭಿಸಿ ಮುಂದಿನ ಹೋರಾಟ ಘೋಷಣೆ ಮಾಡಿರುವ ಜಲಸಂರಕ್ಷಣಾ ಸಮತಿ ಪ್ರಮುಖರು, ಕಾವೇರಿ ನೀರಿನ ಅವೈಜ್ಞಾನಿಕ ತೀರ್ಪಿನ ವಿರುದ್ಧ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ಮಾಡಿದ್ದು 29ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ರವರನ್ನು ಭೇಟಿ ಮಾಡಿ ಚರ್ಚೆ ಮಾಡಿ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ,ವಿಶೇಷ ವಿಧಾನ ಮಂಡಲದ ಅಧಿವೇಶನ ಕರೆದು ಸಂಕಷ್ಟ ಸೂತ್ರ ಜಾರಿ ಆಗುವ ತನಕ ನೀರು ಬಿಡುವುದಿಲ್ಲ ಎನ್ನುವ ನಿರ್ಣಯ ಕೈಗೊಳ್ಳಬೇಕೆಂದು ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಕುರುಡು ಆದೇಶ ಆವೈಜ್ಞಾನಿಕ ತೀರ್ಪುಗಳನ್ನ ನೀಡುತ್ತಿರುವ ಕಾರಣ ಈ ಮಂಡಳಿಯನ್ನು ರದ್ದು ಮಾಡಿ ಸ್ವತಂತ್ರ ಕಾರ್ಯನಿರ್ವಹಣೆ ಮಾಡುವ ಚುನಾವಣಾ ಆಯೋಗದ ರೀತಿ ಕಾರ್ಯನಿರ್ವಹಿಸುವ ನೀರು ನಿರ್ವಾಹಣ ಪ್ರಾಧಿಕಾರ ರಚಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಳ್ಳಲು ಒತ್ತಡ ಹೇರಬೇಕಿದೆ ಎಂದು ಪ್ರತಿಪಾದಿಸಿದರು.

ಮಳೆ ಹೆಚ್ಚು ಬಂದಾಗ ನೀರು ಸಂಗ್ರಹಿಸಿಕೊಳ್ಳಲು ಮೇಕೆದಾಟು ನಿರ್ಮಾಣ ತಕ್ಷಣ ಕಾರ್ಯಾ ಆರಂಭ ಮಾಡಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ಬಂದಿಲ್ಲವಾದ ಕಾರಣ ಗಾಂಧಿ ಜಯಂತಿಯ ದಿನ ಮಹಾತ್ಮ ಗಾಂಧಿಯವರನ್ನು ನೆನೆದು ಮೌನ ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಎಚ್ಚರಿಸುವ ಪ್ರತಿಭಟನಾ ಮೌನ ಧರಣಿ ಚಳುವಳಿ ನಡೆಸಲಾಯಿತು ಎಂದು ಜಲಸಂರಕ್ಷಣಾ ಸಮಿತಿಯ ಸಂಚಾಲಕರೂ ಆದ, ರೈತ ನಾಯಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಜನತೆಯ ಹೋರಾಟವನ್ನು ಭಾವನೆಗಳನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷತನ ತೋರುತಿದೆ, ಮುಖ್ಯಮಂತ್ರಿಗಳು ನೀರು ನಿಲ್ಲಿಸುವ ಕಠಿಣ ನಿರ್ಧಾರ ಪ್ರಕಟಿಸಿಲ್ಲ ಇಂದು ಆರಂಭವಾದ ಚಳುವಳಿ ಇಡೀ ಬೆಂಗಳೂರು ನಗರವನ್ನು ಜಾಗೃತಗೊಳಿಸಿ ಸರ್ಕಾರದ ಸರ್ವನಾಶಕ್ಕೆ ಬಲೆ ಹೆಣೆಯುತ್ತದೆ ಎಚ್ಚರಿಕೆ ಇರಲಿ ಎಂದರು ಮುಖ್ಯಮಂತ್ರಿ ಚಂದ್ರು ಮಾತನಾಡಿ ಸರ್ಕಾರಕ್ಕೆ ಜನಸಾಮಾನ್ಯರ ಸಂಕಷ್ಟದ ಅರಿವು ಇನ್ನು ಮೂಡಿಲ್ಲ ನುಡಿದಂತೆ ನಡೆಯುವಲ್ಲಿ ವಿಫಲವಾಗುತ್ತಿದೆ ಆದ್ದರಿಂದ ನಿರಂತರ ಚಳುವಳಿ ಅವಶ್ಯಕ ಎಂದರು ಬೆಳಿಗ್ಗೆ 11ರಿಂದ ಒಂದು ಗಂಟೆ ತನಕ ಎಲ್ಲ ಚಳುವಳಿಗಾರರು ಮೌನವಾಗಿ ಕುಳಿತು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು ನೂರಾರು ಸಂಘ ಸಂಸ್ಥೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು ನಾಳೆಯಿಂದ ದಿನನಿತ್ಯ ಒಂದೊಂದು ಸಂಘಟನೆ ಧರಣಿ ನಡೆಸಲು ತೀರ್ಮಾನಿಸಲಾಯಿತು ಪ್ರತಿನಿತ್ಯ ಬೆಂಗಳೂರಿನ ಸ್ವತಂತ್ರ ಉದ್ಯಾನವನ ಬಳಿ 10 ಗಂಟೆಗೆ ಬರಬೇಕು ಬೆಂಗಳೂರಿನ ನಾಗರಿಕರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು ಎಂದು ನಿಶ್ಚಯ ಮಾಡಲಾಯಿತು ಎಂದು ತಿಳಿಸಿದರು.

ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಸಾಹಿತಿ ತಲಕಾಡು ಚಿಕ್ಕೆರಂಗೆಗೌಡ ಕನ್ನಡ ಪಕ್ಷದ ಪುರುಷೋತ್ತಮ್ ಗುರುದೇವ ನಾರಾಯಣ ,ರಾಜಪ್ಪ, ಅಮ್‌ಆದ್ಮಿ ಪಕ್ಷದ ಸಂಜಿತ್ ಕುಮಾರಸ್ವಾಮಿ ಹತ್ತಳ್ಳಿ ದೇವರಾಜ್
ವಕೀಲ ಕಿಸಾನ್ ,ಮೋಹನ್, ಉಷಾ ಮೋಹನ್ ಸಹಿತ ಹಲವಾರು ಸಂಘಟನೆಗಳ ಮುಖಂಡರು ಈ ಹೋರಾಟದಲ್ಲಿ ಭಾಗಿಯಾದರು.

Related posts