ಹನೂರು: ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿಯಲ್ಲಿ ಸ್ವಾಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.
ಈ ವೇಳೆ ಶಾಸಕ ಎಂ ಆರ್ ಮಂಜುನಾಥ್ ರವರು ಮಾತನಾಡಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಇ ಸ್ವತ್ತುಗಳ ಸಮಸ್ಯೆಗಳನ್ನು ಬಗೆಹರಿಸಲು ವಸತಿ ಪ್ರದೇಶಗಳಿಗೆ ಡ್ರೋನ್ ಅಥವಾ ಯುಎ ವಿ ತಂತ್ರಜ್ಞಾನದ ಮೂಲಕ ಸರ್ವೇ ನಡೆಸಿ ಡ್ರೋನ್ ಮುಖಾಂತರ ನಿಮ್ಮ ಜಾಗದ ಅಳತೆಯನ್ನು ನಡೆಸಿ ನಿಮಗೆ ಪಿ ಆರ್ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ. ಇದನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಡಿ ಡಿ ಎಲ್ ಆರ್ ವಿದ್ಯಾರಾಣಿ ಮಾತನಾಡಿ ಕಳೆದ 50 ವರ್ಷಗಳ ಹಿಂದೆ ಕಂದಾಯ ಕಟ್ಟಿರುವ ಜಮೀನುಗಳಿಗೆ ಮಾತ್ರ ಸರ್ವೆ ಮಾಡಲಾಗಿತ್ತು, ಗ್ರಾಮ ಗ್ರಾಮ ಠಾಣ ವಿಭಾಗಗಳಲ್ಲಿ ನಿಖರವಾದ ಯಾವುದೇ ದಾಖಲಾತಿಗಳು ಸಹ ಲಭ್ಯವಿರುವುದಿಲ್ಲ ಆದ್ದರಿಂದ ಡ್ರೋನ್ ಮುಖಾಂತರ ನಿಮ್ಮ ಜಾಗ ಹಾಗೂ ಜಮೀನುಗಳನ್ನು ಸರ್ವೆ ಮಾಡಿ ಸರ್ವೆ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಜಾಗದ ಮಾಲೀಕರೊಂದಿಗೆ ಚರ್ಚೆ ಮಾಡಿ ಪಿಆರ್ ಕಾರ್ಡುಗಳ ಡ್ರಾಫ್ಟ್ ಗಳನ್ನು ವಿತರಿಸಲಾಗುತ್ತದೆ, ಪಿ ಆರ್ ಡ್ರಾಫ್ಟ್ ನಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಸರಿಪಡಿಸಿಕೊಳ್ಳಬೇಕು , ಪಿ.ಆರ್. ಡ್ರಾಫ್ಟ್ ನೀಡಿದ 30 ದಿನದ ಒಳಗೆ ಯಾವುದೇ ತೊಂದರೆ ಇಲ್ಲವಾದಲ್ಲಿ ನಿಮಗೆ ಪಿ. ಆರ್. ಕಾಡುಗಳನ್ನು ವಿತರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಸ್ವತ್ತುಗಳನ್ನು ಮಾರಾಟ ಮಾಡಲು ವಿಭಾಗ ಮಾಡಲು ಪಿ ಆರ್ ಕಾರ್ಡ್ ಗಳು ಅವಶ್ಯಕವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಗುರುಪ್ರಸಾದ್, ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್, ಎಡಿಎಲ್ಆರ್ ನಟರಾಜು, ಸರ್ವೆ ಸೂಪರ್ವೈಸರ್ ಭಾನುರೇಖಾ, ಅಜ್ಜೀಪುರ ಗ್ರಾಮ ಪಂಚಾಯಿತಿ ಅಬಿವೃದ್ಧಿ ಅಧಿಕಾರಿ ನಂದೀಶ್, ಅಜ್ಜೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರನಾಯಕ , ಉಪಾಧ್ಯಕ್ಷರಾದ ಪ್ರಭುಸ್ವಾಮಿ, ಸದಸ್ಯರಾದ ಚಂದ್ರ ಮುರಳಿ ,ರಾಜೇಂದ್ರ, ಸೈಯದ್ ಜಬ್ಬಾರ್, ಕೃಷ್ಣಮೂರ್ತಿ, ಶಿವಮೂರ್ತಿ,ರಾಜೇಂದ್ರ, ಮಹದೇವ, ರುಕ್ಮಿಣಿ, ಗೀತಾ ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು .