ದೆಹಲಿ: ಲಡಾಕ್ ಗಡಿ ಭಾಗ, ಗಲ್ವಾನ್ ಸಂಘರ್ಷದ ನಂತರ ಚೀನಾ ವಿರುದ್ಧ ಡಿಜಿಟಲ್ ಸಮರ ಕೈಗೊಂಡಿರುವ ಭಾರತ ಚೀನಾ ಮೂಲದ ಟಿಕ್ ಟಾಕ್ ಸೇರಿದಂತೆ 59 ಆ್ಯಪ್’ಗಳನ್ನು ನಿಷೇಧಿಸಿದೆ.
ಮೋದಿ ಸರ್ಕಾರದ ಈ ಹೊಡೆತದಿಂದಾಗಿ ಚೀನಾ ಮೂಲದ ಕಂಪೆನಿಗಳಲ್ಲಿ ನಡುಕ ಉಂಟಾಗಿದೆಯಾದರೂ ಡ್ರಾಗನ್ ರಾಷ್ಟ್ರ ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಇದೀಗ ಭಾರತ ಮೂಲದ ಉದ್ಯೋಗಿಗಳತ್ತ ಅಸ್ತ್ರ ಪ್ರಯೋಗಿಸಲು ಚೀನಾ ಪಿತೂರಿ ನಡೆಸಿದೆ ಎನ್ನಲಾಗಿದೆ. ಕೋಟ್ಯಂತರ ನಷ್ಟ ಅನುಭವಿಸುತ್ತಿರುವ ಚೀನಾ ಸಂಸ್ಥೆಗಳು ಇದೀಗ ಕಾಸ್ಟ್ ಕಟ್ಟಿಂಗ್ ನೆಪದಲ್ಲಿ ಭಾರತ ಮೂಲದ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾರಂಭಿಸಿದೆ.
ಯುಸಿ ವೆಬ್ ಬ್ರೌಸರ್ ನಿಷೇಧದ ಕಾರಣಕ್ಕಾಗಿ ಆಲಿಬಾಬ ಒಡೆತನದ ಕಂಪೆನಿಗಳು ಭಾರತದಲ್ಲಿರುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಯುಸಿ ಬ್ರೌಸರ್ ಮತ್ತು ವಿಮೇಟ್ ವಿಡಿಯೋ ಆ್ಯಪ್ ಜುಲೈ 15ರಂದು ಉದ್ಯೋಗಗಳಿಗೆ ಕತ್ತರಿ ಹಾಕುವ ಕುರಿತು ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಸಂಸ್ಥೆಗಳು 100ಕ್ಕೂ ಅಧಿಕ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಕ್ಲಬ್ ಫ್ಯಾಕ್ಟರಿ ಕೂಡಾ ವಿವಾದಿತ ನಿರ್ಧಾರವೊಂದನ್ನು ಕೈಗೊಂಡಿದೆ ಎನ್ನಲಾಗಿದೆ. ಭಾರತೀಯ ಮಾರಾಟಗಾರರಿಗೆ ಬಾಕಿ ಹಣವನ್ನು ಕ್ಲಬ್ ಫ್ಯಾಕ್ಟರಿ ತಡೆಹಿಡಿದಿದೆ. ಇದರಿಂದಾಗಿ ಕ್ಲಬ್ ಫ್ಯಾಕ್ಟರಿಯನ್ನು ಅವಲಂಭಿಸಿದ್ದ ಸುಮಾರು 30 ಸಾವಿರ ಮಾರಾಟಗಾರರಿಗೆ ಸಂಕಟದ ಪರಿಸ್ಥಿತಿ ಎದುರಾಗಿದೆ.