ಮೊಮ್ಮಗನಿಗೆ ಕ್ರಿಕೆಟಿಗರ ಜೊತೆ ಫೋಟೋಗ್ರಾಫ್ ಆಟೋಗ್ರಾಫ್ ಭರದಲ್ಲಿ ಬೆಂಗಳೂರನ್ನು ಸ್ಮಶಾನವಾಗಿಸಿದರೇ ಸಿಎಂ?

ಬೆಂಗಳೂರು: ಮೊಮ್ಮಗನಿಗೆ ಕ್ರಿಕೆಟಿಗರ ಜೊತೆ ಫೋಟೋಗ್ರಾಫ್ ಆಟೋಗ್ರಾಫ್ ಭರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರನ್ನು ಸ್ಮಶಾನವಾಗಿಸಿದರೆ? ಇಂಥದ್ದೊಂದು ಆರೋಪವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾಡಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಗೂಬೆ ಕೂರಿಸಿ ಹರಕೆಯ ಕುರಿ ಮಾಡಲು ಹೊರಟಿರುವ ಕೊಲೆಗಡುಕ ಕಾಂಗ್ರೆಸ್ ಸರ್ಕಾರ 11 ಅಮಾಯಕ ಜನರ ಸಾವಿಗೆ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನಿಗೆ ಕ್ರಿಕೆಟ್ ಆಟಗಾರರ ಜೊತೆ ಫೋಟೋಗ್ರಾಫ್ ಆಟೋಗ್ರಾಫ್ ತೆಗೆಸಿಕೂಡುವ ಭರದಲ್ಲಿ ಜನಸಾಮಾನ್ಯರ ಮನೆ ಮಕ್ಕಳನ್ನ ಕೊಂದು ಬಿಟ್ಟಿದ್ದಾರೆ, ಅವರಿಗೆ ಆತ್ಮಸಾಕ್ಷಿ ಇದೆಯಾ ಎಂದು ಸಾಮಾಜಿಕ ಜಾಲತಾಣ ‘X’ನಲ್ಲಿ ಅಶೋಕ್ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

‘ನಿಮ್ಮ ಮೊಮ್ಮಗನಿಗೆ ವೇದಿಕೆಯ ಮೇಲೆ ಕುರ್ಚಿ, ಜನಸಾಮಾನ್ಯರಿಗೆ ಬೀದಿಯಲ್ಲಿ ಕಾಲ್ತುಳಿತ. ಆಹಾ, ಇನ್ನು ಮುಂದೆಂದೂ ಸಮಾಜವಾದ, ಸಾಮಾಜಿಕ ನ್ಯಾಯ ಎಂದು ಭಾಷಣ ಬಿಗಿದು ಆ ಪದಗಳಿಗೆ, ಸಿದ್ಧಾಂತಗಳಿಗೆ ಅಪಮಾನ ಮಾಡಬೇಡಿ’ ಎಂದು ಅಶೋಕ್ ಅವರು ಬರೆದುಕೊಂಡಿದ್ದಾರೆ.

Related posts