ಮಾವಿನ ಹಣ್ಣಿನಲ್ಲಿ ಬಗೆಬಗೆಯ ಖಾದ್ಯ ತಯಾರಿಸಬಹುದು. ಅದೇ ಹಣ್ಣಿನಲ್ಲಿ ಐಸ್ ಕ್ರೀಮ್ ಕೂಡಾ ತಯಾರಿಸುತ್ತಾರೆ. ಅದರ ಕ್ಯಾನದಿ ಕೂಡಾ ಸಕತ್ ರುಚಿ.
ನೀವೂ ಮಾವಿನಹಣ್ಣು ಕ್ಯಾಂಡಿ ಕಂಡಿದ್ದೀರಾ? ಸವಿರುಚಿ ಅನುಭವಿಸಿದ್ದೀರಾ? ಮನೆಯಲ್ಲೇ ಕ್ಯಾಂಡಿ ತಯಾರಿಸಿ ಸವಿರುಚಿ ಅನುಭವಿಸಲು ಇದು ಸಕಾಲ.
ಬೇಕಾದ ಸಾಮಗ್ರಿ:
- ಮಾವಿನಹಣ್ಣು 3
- ಸಕ್ಕರೆ 13
- ತೆಂಗಿನ ಹಾಲು 2 ಕಪ್
- ಏಲಕ್ಕಿ ಹುಡಿ 1 ಚಮಚ
ಮಾಡುವ ವಿಧಾನ
ಮೊದಲಿಗೆ ಮಾವಿನಹಣ್ಣಿನ ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ರುಬ್ಬಬೇಕು. ನಂತರ ಅದಕ್ಕೆ ಸಕ್ಕರೆ, ಏಲಕ್ಕಿ ಹುಡಿ ಹಾಕಿ ಇನ್ನೊಂದು ಸಲ ರುಬ್ಬಿಕೊಳ್ಳಬೇಕು. ನಂತರ ಸ್ವಲ್ಪ ಕಾಯಿಹಾಲು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಕ್ಯಾಂಡಿ ಮೇಕರ್’ಗೆ ಹಾಕಿ 7-8 ಗಂಟೆಗಳ ಕಾಲ deep fridge ನಲ್ಲಿ ಇಟ್ಟರೆ ರುಚಿಯಾದ ಮಾವಿನಹಣ್ಣು ಕ್ಯಾಂಡಿ ಸವಿಯಲು ಸಿದ್ಧ.
ಇದನ್ನೂ ಮಾಡಿ ನೋಡಿ.. ರುಚಿ, ಆರೋಗ್ಯಕರ ‘ಬಾಳೆಹಣ್ಣು ಒರೆಯೋ ಕೇಕ್’