ಬೆಂಗಳೂರು: ವಿಧಾನಸಭಾ ಚುನಾವಣೆಗೆ ಪ್ರದೇಶ ಕಾಂಗ್ರೆಸ್ ಸಜ್ಜಾಗಿದ್ದು ಇಙದು 124 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನಾನಾವರ ಮಾಡಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ತನ್ನ ಕಿಸಾನ್ ಘಟಕಕ್ಕೂ ಆದ್ಯತೆ ನೀಡಿದೆ.
ಇಂದು ಪ್ರಕಟವಾದ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕರ್ನಾಟಕ ಕಿಸಾನ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಮಹೇಂದ್ರ ತಮಣ್ಣರವರನ್ನು ಕುಡಿಚಿ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಷ್ಟ್ರೀಯ ಚುನಾವಣಾ ಸಮಿತಿ ಘೋಷಿಸಿದೆ. ಇನ್ನೂ 7 ಮಂದಿ ಕಿಸಾನ್ ಕಾಂಗ್ರೆಸ್‌ನ ಪದಾಧಿಕಾರಿಗಳ ಹೆಸರುಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಘೋಷಿಸಲಾಗುತ್ತದೆ ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್‌ನ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
7 ಕ್ಷೇತ್ರಗಳಾದ ಚನ್ನಗಿರಿ, ಕುಮಟಾ,ದೇವರಹಿಪ್ಪರಗಿ, ತೆರದಾಳ, ರಾಯಬಾಗ್ , ಮುದೊಳ,ನಗುಂದ ಕ್ಷೇತ್ರಗಳಲ್ಲಿ ಕಿಸಾನ್ ಪದಾಧಿಕಾರಿಗಳ ಹೆಸರುಗಳು ಅಬ್ಯರ್ಥಿ ಪಟ್ಟಿಯಲ್ಲಿ ಘೋಷಣೆಯಾಗಲಿದೆ ರಾಜ್ಯ ಅಧ್ಯಂತ ರೈತ ವಿಬಾಗವನ್ನು ಸಮರ್ಕವಾಗಿ ಸಂಘಟಿಸಿದ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳ ಶ್ರಮದಿಂದ ಹಾಗು ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಸಂಪಾದಿಸಿದ ವರ್ಚಸ್ ನಿಂದ ಇದು ಸಾಧ್ಯವಾಗಿದೆ ಎಂದು ಸಚಿನ್ ಮೀಗಾ ಹೇಳಿದ್ದಾರೆ.