ನವದೆಹಲಿ: ಸಶಸ್ತ್ರ ಪಡೆಗಳ ಅತ್ಯುನ್ನತ ಶೌರ್ಯ ಮತ್ತು ಯಶಸ್ಸಿಗೆ ನಮನ ಸಲ್ಲಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾರತದಾದ್ಯಂತ ‘ಜೈ ಹಿಂದ್ ಸಭೆ’ಗಳನ್ನು ನಡೆಸಲಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಎಐಸಿಸಿ ನಾಯಕ ಕೆ.ಸಿ.ವೇಣುಗೋಪಾಲ್, ಭದ್ರತಾ ವೈಫಲ್ಯಗಳು, ರಾಷ್ಟ್ರೀಯ ಭದ್ರತೆಯನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿ ಮತ್ತು ನಮ್ಮ ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯ ಬಗ್ಗೆ ಅದರ ಮೌನದ ಬಗ್ಗೆಯೂ ನಾವು ಗಂಭೀರ ಪ್ರಶ್ನೆಗಳನ್ನು ಎತ್ತಬೇಕು ಎಂದಿದ್ದಾರೆ.
ಮೇ 20-30 ರವರೆಗೆ, ದೆಹಲಿ, ಬಾರ್ಮರ್, ಶಿಮ್ಲಾ, ಹಲ್ದ್ವಾನಿ, ಪಾಟ್ನಾ, ಜಬಲ್ಪುರ್, ಪುಣೆ, ಗೋವಾ, ಬೆಂಗಳೂರು, ಕೊಚ್ಚಿ, ಗುವಾಹಟಿ, ಕೋಲ್ಕತ್ತಾ, ಹೈದರಾಬಾದ್, ಭುವನೇಶ್ವರ ಮತ್ತು ಪಠಾಣ್‌ಕೋಟ್‌ಗಳಲ್ಲಿ ಜೈ ಹಿಂದ್ ಸಭೆಗಳು ನಡೆಯಲಿದ್ದು, ಇದರಲ್ಲಿ ಸೇನಾ ನಿವೃತ್ತರು, ಪಕ್ಷದ ನಾಯಕರು ಮತ್ತು ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.