ಬೆಂಗಳೂರು: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಸೋಂಕು ನಿವಾರಣೆಗೆ ಔಷಧಿ ಸಿದ್ಧವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ಈ ವಿಷಯದಲ್ಲಿ ವೇದಕಾಲದ ಆಯುರ್ವೇದ ಪದ್ಧತಿ ಅನುಸರಿಸುತ್ತಿರುವ ವೈದ್ಯರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಡಾ.ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ. ಕೋವಿಡ್ ಆಸ್ಪತ್ರೆಗಳಲ್ಲೊಂದಾಗಿರುವ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಕೊರೋನಾ ರೋಗಿಗಳಿಗೆ ಈ ಔಷಧಿ ನೀಡಲಾಗಿದ್ದು ಸೋಂಕಿತರು ಗುಣಮುಖರಾಗಿದ್ದಾರೆನ್ನಲಾಗಿದೆ.
ಜೂನ್ 7ರಿಂದ ಜೂನ್ 25ರ ನಡುವೆ 23 ವರ್ಷದಿಂದ 65 ವರ್ಷದವರೆಗಿನ ಕೊರೋನಾ ರೋಗಿಗಳಿಗೆ ಈ ಔಷಧಿ ನೀಡಲಾಗಿತ್ತು. ಶೀತ, ಕೆಮ್ಮು, ಜ್ವರ, ಸುಸ್ತು, ತಲೆನೋವು, ಉಸಿರಾಟದ ತೊಂದರೆ ಸಂಪೂರ್ಣ ಗುಣಮುಖವಾಗಿದೆ. 3ರಿಂದ 9 ದಿನಗಳಲ್ಲಿ ರೋಗಿಗಳ ಪರೀಕ್ಷಾ ವರದಿಯೂ ನೆಗೆಟಿವ್ ಎಂದು ಬಂದಿದೆ ಎಂದು ಮೂಲಗಳು ತಿಳಿಸಿವೆ.
ಒಬ್ಬ ರೋಗಿಯ ಔಷಧಕ್ಕೆ 90ರಿಂದ 180 ರೂಪಾಯಿ ವೆಚ್ಚ ತಗಲುತ್ತದೆ ಆಯುರ್ವೇದ ವೈದ್ಯ ಗಿರಿಧರ ಕಜೆ ತಾವು ಕಂಡುಹಿಡಿದ ಔಷಧನ್ನು ಪ್ರಯೋಗ ಮಾಡಲು ರಾಜ್ಯ ವೈದ್ಯಕೀಯ ಇಲಾಖೆ ಬಳಿ ಅನುಮತಿ ಪಡೆದಿದ್ದರು.