ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ವೈರಾಣು ಎರಡನೇ ಅಲೆಯ ಆತಂಕ ಹೆಚ್ಚುತ್ತಲೇ ಇವೆ. ಕರ್ನಾಟಕದಲ್ಲೂ ಕೊರೋನಾ ಅಬ್ಬರ ಮತ್ತೆ ಹೆಚ್ಚುತ್ತಿದ್ದು, ಮಂಗಳವಾರ 1,135 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ 24 ಗಂಟೆಗಳಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಆರು ಮಂದಿ ಮೃತಪಟ್ಟಿದ್ದು, ಕೊರೋನಾ ಕಾರಣದಿಂದ ಮೃತಪಾಟ್ಟವರ ಸಾವಿನ ಸಂಖ್ಯೆ 12,403ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಸೋಕಿನ ಪ್ರಮಾಣ ಹೆಚ್ಚುತ್ತಲಿದ್ದು ಮಂಗಳವಾರ ಸುಮಾರು 710 ಮಂದಿಯಲ್ಲಿ ಪಾಸಿಟಿವ್ ವರದಿ ಬಂದಿದೆ. ಅಷ್ಟೇ ಅಲ್ಲ ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಸೋಂಕಿಗೆ ಐವರು ಬಲಿಯಾಗಿದ್ದಾರೆ.
ಇಂದಿನ 16/03/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/CLJWHE1JXT @PMOIndia @narendramodi @CMofKarnataka @BSYBJP @MoHFW_INDIA @drharshvardhan @mla_sudhakar @Comm_dhfwka @MDNHM_Kar @CovidIndiaSeva @KarnatakaVarthe @PIBBengaluru pic.twitter.com/zr4W6yA4wU
— K'taka Health Dept (@DHFWKA) March 16, 2021