ಬೆಂಗಳೂರು: ಕೊರೋನದಿಂದ ಗುಣಮುಖರಾದವರಲ್ಲಿ ಮುಂದೆ ಎದುರಾಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ರೋಗದಿಂದ ಗುಣಮುಖ ಹೊಂದಿದ ನಂತರ ಭವಿಷ್ಯದಲ್ಲಿ ಅದರಿಂದ ಪರಿಣಾಮ ಉಂಟಾಗಬಹುದೇ ಎಂಬ ಅನುಮಾನ ಉದ್ಭವಿಸಿದೆ. ಈ ನಿಟ್ಟಿನಲ್ಲಿ ಅಧ್ಯಯನದ ಅವಶ್ಯಕತೆ ಇದೆ. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿರುವ ಮತ್ತು ಇತರೆ ಗಂಭೀರ ರೋಗಗಳಿಂದ ಬಳಲುತ್ತಿದ್ದವರ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನದಿಂದ ತಿಳಿದುಕೊಳ್ಳಬೇಕಿದೆ ಏನಿದ್ದಾರೆ.
ಈ ಅಧ್ಯಯನದ ಆಧಾರದ ಮೇಲೆ ಕೋವಿಡ್-19 ರೋಗಿಗಳ ದೂರಗಾಮಿ ಆರೋಗ್ಯದ ದೃಷ್ಟಿಯಿಂದ ಸೂಕ್ತ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಟ್ವೀಟ್ ನಲ್ಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಸೋಂಕಿನಿಂದ ಗುಣಮುಖ ಹೊಂದಿದವರಲ್ಲಿ ಉಂಟಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಒಂದು ವಿಶೇಷ ತಜ್ಞ ವೈದ್ಯರ ಸಮಿತಿ ರಚಿಸಲಾಗುವುದು. ಲಘು ಮತ್ತು ತೀವ್ರ ರೋಗಲಕ್ಷಣ ಹೊಂದಿದ್ದ ಮತ್ತು ವಿಶೇಷವಾಗಿ ಇತರೆ ಸಹ-ಅಸ್ವಸ್ಥತೆಗಳನ್ನು ಹೊಂದಿದ್ದ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. (1/2)
— Dr Sudhakar K (Modi ka Parivar) (@DrSudhakar_) September 20, 2020