ಬೆಂಗಳೂರು: ದಿನ ಕಳೆದರೂ ಕೊರೋನಾ ಹಾವಳಿ ತಗ್ಗಿಲ್ಲ. ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದು ಸಾವಿನ ಸಂಖ್ಯೆಯೂ ಬೆಳೆದಿದೆ. ಕರ್ನಾಟಕದಲ್ಲೂ ಕೊರೋನಾ ವೈರಾಣು ಆರ್ಭಟ ಜೋರಾಗಿದ್ದು ಬುಧವಾರ ಒಂದೇ ದಿಂದ ವರದಿಯಲ್ಲಿ 100 ಮಂದಿ ಕೊರೋನಾಗೆ ಬಲಿಯಾದ ಸುದ್ದಿ ಆತಂಕವನ್ನೇ ಸೃಷ್ಟಿಸಿದೆ.
ಕರ್ನಾಟಕದಲ್ಲಿ ಬುಧವಾರ 5,619 ಕೊರೋನಾ ಸೋಂಕು ಪತ್ತೆಯಾಗಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಒಂದೇ ದಿನ 100 ಮಂದಿ ಸಾವನ್ನಪ್ಪಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 2,804ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಬುಧವಾರ 29 ಮಂದಿ ಮೃತಪಟ್ಟಿದ್ದು, ಉದ್ಯಾನನಗರಿಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 1163ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 11 ಮಂದಿ, ದಕ್ಷಿಣ ಕನ್ನಡದಲ್ಲಿ 10 ಮಂದಿ , ಶಿವಮೊಗ್ಗದಲ್ಲಿ 6 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಇಂದಿನ 05/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMMhttps://t.co/kKCG4EfmSZ pic.twitter.com/LxSmNeEuOF
— K'taka Health Dept (@DHFWKA) August 5, 2020