ದೆಹಲಿ: ಕೊರೋನಾ ವಿಚಾರದಲ್ಲಿ ಭಯ ಬೇಡ; ಎಚ್ಚರಿಕೆ ಇರಲಿ ಎಂಬುದು ಈಗಿನ ಆರೋಗ್ಯವಾಣಿ.
ದೇಶದ ಜನರನ್ನು ಬೆಂಬಿಡದ ಭೂತದಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಗಿನ್ನೂ ಸಾಮಾಜಿಕ ವಲಯದಲ್ಲಿ ರೌದ್ರಾವತಾರ ತಾಳಿಲ್ಲ ಎಂಬುದೇ ಸಮಾಧಾನಕರ ಸಂಗತಿ.
ಚೀನಾದಲ್ಲಿ ಸೃಷ್ಟಿಯಾಗಿರುವ ಕೋವಿಡ್-19 ವೈರಾಣು ಅಮೆರಿಕಾ, ಇಟೆಲಿ, ಫ್ರಾನ್ಸ್, ಸ್ಪೇನ್ ಸಹಿತ ಜಾಗತಿಕ ದೈತ್ಯ ರಾಷ್ಟ್ರಗಳನ್ನೇ ನಲುಗಿಸಿದೆ. ಭಾರತದಲ್ಲೂ ತನ್ನ ಕಬಂಧ ಬಾಹುಗಳನ್ನು ವಿಸ್ತಾರ ಮಾಡಿದ್ದು, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ಈಗಾಗಲೇ 4500 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 5000 ತಲುಪುವಷ್ಟರಲ್ಲಿ ಸೋಂಕು ಹರಡುವಿಕೆಯ ವೇಗಕ್ಕೆ ಅಂಕುಶ ಬೀಳಬಹುದೆಂದು ನಿರೀಕ್ಷಿಸಲಾಗುತ್ತಿದೆ. ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕೇರಳ ಮತ್ತು ತೆಲಂಗಾಣಗಳು ಸೋಂಕಿನಿಂದ ಹೆಚ್ಚು ಬಾಧಿತ ರಾಜ್ಯಗಳಾಗಿ ಗುರುತಿಸಿಕೊಂಡಿದೆ.
ಸೋಮವಾರ ಐವರು ಸಾವನ್ನಪ್ಪಿದ್ದು,ಈ ವರೆಗೂ ದೇಶದಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪಿದವರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
- ಮಹಾರಾಷ್ಟ್ರದಲ್ಲಿ 45 ಮಂದಿ ಬಲಿ
- ಗುಜರಾತ್ ನಲ್ಲಿ 11 ಮಂದಿ ಬಲಿ
- ಮಧ್ಯಪ್ರದೇಶದಲ್ಲಿ 9 ಮಂದಿ ಬಲಿ
- ತೆಲಂಗಾಣದಲ್ಲಿ 7 ಮಂದಿ ಬಲಿ
- ದೆಹಲಿದಲ್ಲಿ 7 ಮಂದಿ ಬಲಿ
- ಪಂಜಾಬ್’ನಲ್ಲಿ 6 ಮಂದಿ ಬಲಿ
- ತಮಿಳುನಾಡಲ್ಲಿ 6 ಮಂದಿ ಬಲಿ