ಕಿಲ್ಲರ್ ಕೊರೋನಾ ಅಟ್ಟಹಾಸ.. ಮುಂದುವರಿದ ಸಾವಿನ ಸರಣಿ..; ಬೆಂಗಳೂರು ಎಷ್ಟು ಸೇಫ್?

ಕಿಲ್ಲರ್ ಕೊರೋನಾ ಬೆಂಗಳೂರಿನಲ್ಲಿ ಅಟ್ಟಹಾಸ ಮೆರೆಯುತ್ತಲೇ ಇದೆ. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ಲಾಕ್ ಡೌನ್ ಎರಡನೇ ಅವಧಿಗೆ ಜಾರಿ ಮಾಡಿದರೂ ಕೂಡಾ ಮಾರಕ ಕೊರೋನಾ ವೈರಸ್ ಹಾವಳಿಗೆ ಬ್ರೇಕ್ ಬೀಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮರಣ ಮೃದಂಗ ಭಾರಿಸುತ್ತಲೇ ಇರುವ ಕೊರೋನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಬ್ಬರು ಬಲಿಯಾಗಿದ್ದಾರೆ.

ಬೆಂಗಳೂರಿನ ರಾಮಸ್ವಾಮಿ ಪಾಳ್ಯದ ನಿವಾಸಿ 66 ವರ್ಷದ ವೈರಸ್ ಸೋಂಕಿತ ವ್ಯಕ್ತಿ ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ರಾಜಧಾನಿಯ ಈ ಪ್ರಕರಣದ ನಂತರ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ಮಾರ್ಚ್ 12 ರಂದು ಮಣಿಪುರದಿಂದ ಬೆಂಗಳೂರಿಗ ಆಗಮಿಸಿದ್ದ ರಾಮಸ್ವಾಮಿ ಪಾಳ್ಯದ ಈ ವ್ಯಕ್ತಿ ಆಸ್ಪತ್ರಗೆ ದಾಖಲಾಗಿದ್ದರು. ಆರಂಭದಲ್ಲಿ ಜ್ವರ ಮತ್ತು ಉಸಿರಾಟದ ತೊಂದರೆಯಿಂದಾಗಿ ಹೆಬ್ಬಾಳದಲ್ಲಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ್ದ ವೈದ್ಯರು ಕೊರೋನಾ ಐಸೋಲೇಷನ್ ಆಸ್ಪತ್ರೆಗೆ ಕಳುಹಿಸಿದ್ದರು. ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಇದನ್ನೂ ಓದಿ.. ಕೊರೋನಾ ಕ್ರೌರ್ಯದ ಕರಿನೆರಳಲ್ಲಿದ್ದವರು ಈಗ ನಿರಾಳ.. ಇಲ್ಲಿ ಶಾಸಕರೇ ಹೀರೊ


ಬೆಂಗಳೂರು ಎಷ್ಟು ಸೇಫ್?

ಕೆಲ ದಿನಗಳಿಂದೀಚೆಗೆ ವೆಂಟಿಲೇಟರ್’ನಲ್ಲಿದ್ದ ಈ ವ್ಯಕ್ತಿ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇವರು ಬೆಂಗಳೂರಿನಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಪೈಕಿ ಇವರು ಮೂರನೆಯವರು. ಕಿಲ್ಲರ್ ಕೊರೋನಾ ಅಟ್ಟಹಾಸಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಬೆಂಗಳೂರು ಎಷ್ಟು ಸೇಫ್ ಎನ್ನುವ ಪ್ರಶ್ನೆ ಮೂಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹೊರತು ಈ ಸಮಸ್ಯೆಯಿಂದ ನಿರಾಳರಾಗುವುದು ಕಷ್ಟ ಸಾಧ್ಯ ಎನ್ನುತ್ತಿದ್ದಾರೆ ವೈದ್ಯ ಲೋಕದ ಪರಿಣಿತರು.

ಸರ್ಕಾರದ ಜೊತೆ ಸಂಘ ಸಂಸ್ಥೆಗಳ ಕಾರ್ಯಾಚರಣೆ

ರಾಜಧಾನಿ ಬೆಂಗಳೂರಿನಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಸೂಕ್ತ ಚಿಕಿತ್ಸೆಗೂ ಕೊರತೆಯಿಲ್ಲ. ಸರ್ಕಾರವಷ್ಟೇ ಅಲ್ಲ, ಸರ್ಕಾರದ ಜೊತೆ ಸಂಘ ಸಂಸ್ಥೆಗಳೂ ಕಾರ್ಯಾಚರಣೆಗೆ ಇಳಿದಿದ್ದು ಔಷಧಿ ವಿತರಣೆಯಲ್ಲೂ ಅಡ್ಡಿಯಾಗಿಲ್ಲ. ಇದೇ ವೇಳೆ ಔಷಧಿ, ಸ್ಟಾನಿಟೈಸರ್ ಸಹಿತ ಅಗತ್ಯ ವೈದ್ಯಕೀಯ ವಸ್ತುಗಳನ್ನು ಪೂರೈಸಲು ನಾವು ಸಿದ್ದ ಎನ್ನುತ್ತಿದ್ದಾರೆ ಅನ್ವರ್ ಷರೀಫ್ ಫೌಂಡೇಶನ್ ಮುಖ್ಯಸ್ಥ ಉಸ್ಮಾನ್ ಷರೀಫ್

ಇದನ್ನೂ ಓದಿ.. ನೀವು ರೆಡ್ ಝೋನ್’ನಲ್ಲಿದ್ದೀರಿ.. ಹಾಗಾದರೆ ನಿಮ್ಮ ಸ್ಥಿತಿ ಹೇಗಿರುತ್ತೆ ಗೊತ್ತಾ? 

 

Related posts