ಕೊರೋನಾ ಸೋಂಕಿತ ಬ್ರಿಟನ್ ಪ್ರಿನ್ಸ್ ಜೀವ ಉಳಿಸಿದ ಆಯುರ್ವೇದ; ಜಗತ್ತನ್ನೇ ನಿಬ್ಬೆರಗಾಗಿಸಿದ ಬೆಂಗಳೂರಿನ ವೈದ್ಯ

ಬೆಂಗಳೂರು: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಬ್ರಿಟನ್ ರಾಜಕುಮಾರನ ಜೀವ ಉಳಿಸಿದೆ ಆಯುರ್ವೇದ ಔಷಧಿ. ಇದು ಅಚ್ಚರಿಯೆನಿಸಿದರೂ ನಿಜ.

ಮಹಾಮಾರಿ ಕೊರೋನಾ ಸೋಂಕಿಗೆ ಸೂಕ್ತ ಔಷಧಿ ಇಲ್ಲದೆ ಇಡೀ ಜಗತ್ತೇ ಪರದಾಡುತ್ತಿದೆ. ಹೀಗಿರುವಾಗ ಕೋವಿಡ್-19 ಎಂಬ ಮಾರಣಾಂತಿಕ ವೈರಸ್ ದಾಳಿಗೆ ಆಯುರ್ವೇದ ಔಷಧಿ ಫಲಕಾರಿಯೇ? ಇದೀಗ ಇಲ್ಲೊಂದು ಸುದ್ದಿ ಜಗತ್ತನ್ನೇ ಬೆರಗಾಗುವಂತೆ ಮಾಡಿದೆ.

ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತಿನಂತೆ ಆಯುರ್ವೇದ ಬಗ್ಗೆ ನಮ್ಮ ದೇಶದಲ್ಲಿ ವ್ಯಂಗ್ಯ ಮಾಡುವವರೇ ಹೆಚ್ಚು. ಆದರೆ ಇದೀಗ ಜಗತ್ತೇ ಕೊರೋನಾದಿಂದ ತಲ್ಲಣ ಗೊಂಡಿರುವಾಗಲೇ ಅದಕ್ಕೆ ಯಾವ ಚಿಕಿತ್ಸಾ ಪದ್ಧತಿಯಲ್ಲೂ ಮದ್ದು ಸಿಗದೇ ಇಡೀ ವೈದ್ಯ ಲೋಕವೇ ಚಿಂತೆಯಲ್ಲಿರುವಾಗ ಪುರಾತನ ವೈದ್ಯಕೀಯ ತಂತ್ರ ಆಯುರ್ವೇದವೇ ಜೀವ ಸಂಜೀವಿನಿಯಾಗಿದೆ.

ಆಯುರ್ವೇದ ಭಾರತೀಯ ಪುರಾತನ ವೈದ್ಯ ಪದ್ಧತಿಯಾಗಿದ್ದು, ಇಲ್ಲಿ ಈ ಚಿಕಿತ್ಸೆ ಬಗ್ಗೆ ಒಲವು ವ್ಯಾಕವಾಗದಿದ್ದರೂ ದೂರದ ಬ್ರಿಟನ್ ಇದನ್ನು ನೆಚ್ಚಿಕೊಂಡಿದೆ. ಕೊರೋನಾದಿಂದ ಬಳಲಿ ಬೆಂಡಾದ ಬ್ರಿಟನ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್, ಆಯುರ್ವೇದ ಚಿಕಿತ್ಸಾ ಪದ್ಧತಿ ಮೂಲಕವೇ ಗುಣಮುಖರಾಗಿದ್ದಾರೆ. ಹಾಗಾಗಿ ಬ್ರಿಟನ್ ಈಗ ಭಾರತದ ಆಯುರ್ವೇದ ವೈದ್ಯ ಪದ್ಧತಿ ಮೊರೆ ಹೋಗಿದೆ.

ಕೊರೋನಾ ಪೀಡಿತ ಪ್ರಿನ್ಸ್ ಚಾರ್ಲ್ಸ್’ಗೆ ಬೆಂಗಳೂರು ಮೂಲದ ಆಯುರ್ವೇದ ವೈದ್ಯರು ಇಲ್ಲಿಂದಲೇ ಚಿಕಿತ್ಸೆ ನೀಡಿ ಗುಣಮುಖರಾಗಿಸಿದ್ದಾರೆಂದರೆ ಅಚ್ಚರಿ ಅಲ್ಲವೇ?

ಬೆಂಗಳೂರಿನ ಐಸಾಕ್ ಮಥಾಯ್ ಅವರು ಸೌಖ್ಯ ಎಂಬ ಆಯುರ್ವೇದ ರೆಸಾರ್ಟ್ ನಡೆಸುತ್ತಿದ್ದಾರೆ. ಇವರು ತಮ್ಮ ವೈದ್ಯ ಪದ್ಧತಿಯಿಂದ ಬ್ರಿಟನ್ ನ ಪ್ರಿನ್ಸ್ ಚಾರ್ಲ್ಸ್ ಗೆ ಔಷಧ ಸೂಚಿಸಿ ಕಾಯಿಲೆಯನ್ನೇ ವಾಸಿ ಮಾಡಿದ್ದಾರೆ ಎಂದು ಕೇಂದ್ರ ಆಯುಷ್ ಸಚಿವ ಶ್ರೀಪಾದ್  ನಾಯ್ಕ್ ತಿಳಿಸಿದ್ದಾರೆ. ಆಯುರ್ವೇದ ಹಾಗೂ ಹೋಮಿಯೋಪತಿಯಲ್ಲಿ ಕೊರೋನಾ ವೈರಸ್’ಗೆ ಚಿಕಿತ್ಸೆ ಇದೆ ಎಂಬುದು ಗೊತ್ತಾಗಿದ್ದು ಅವರಿಂದ ಮಾಹಿತಿ ಪಡೆದು, ಕೊರೋನಾಗೆ ಪರಿಣಾಮಕಾರಿ ಔಷಧಿ ಬಳಸಬಹುದೇ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಆಯುಷ್ ಸಚಿವರು ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ.. ಕೊರೋನಾ ವಿರುದ್ಧ ಹೋರಾಡಲು ಸಿನಿ ದಿಗ್ಗಜರಿಂದ ಕೋಟಿ ಕೋಟಿ ರೂ ನೆರವು

Uncategorized

Related posts