ಇಡೀ ದೇಶದ ಚಿತ್ತ ಸೆಳೆದ ರಾಜ್ಯದ ಸಾರಿಗೆ ಸಂಸ್ಥೆ; KSRTC, BMTC ಗೆ ಬರೋಬ್ಬರಿ 13 ಪ್ರಶಸ್ತಿಗಳು..

ನವದೆಹಲಿ: ದೇಶದಲ್ಲೇ ಜನಪಯ ಸಾರಿಗೆ ಸಂಸ್ಥೆಯಾಗಿ ಗುರುತಾಗಿರಿವ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ಇದೀಗ ಮತ್ತೊಮ್ಮೆ ಇಡೀ  ದೇಶದ ಚಿತ್ತ ಸೆಳೆದಿದೆ. ರಾಜ್ಯದ ಸಾರಿಗೆ ಸಂಸ್ಥೆಯಾಗಿರುವ KSRTC ಹಾಗೂ BMTC ನಿಗಮಗಳಿಗೆ ಮತ್ತೆ 13 ಪ್ರಶಸ್ತಿಗಳು ಸಿಕ್ಕಿವೆ.‌ KSRTCಗೆ ಒಟ್ಟು 9 ವರ್ಗಗಳಲ್ಲಿ ಹಾಗೂ BMTCಗೆ 4 ವರ್ಗಗಳಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ Corporate Collateral ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.  .

ಸೆಪ್ಟೆಂಬರ್ 22ರಂದು ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ನವದೆಹಲಿಯ ಪಿ.ಹೆಚ್.ಡಿ. ಚೇಂಬರ್ಸ್‌ನಲ್ಲಿ ನಡೆದ 17ನೇ ವಿಶ್ವ ಸಂವಹನ ಸಮ್ಮೇಳನದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿತರಿಸಲಾಯಿರು. ಪ್ರಶಸ್ತಿ ಸಮಾರಂಭದಲ್ಲಿ, ಗುಲಾಂ ರೆಹಮಾನ್, ಮಾಹಿತಿ ಆಯುಕ್ತರು, ಬಾಂಗ್ಲಾದೇಶ, ಎಂ ಬಿ ಜಯರಾಂ, ಗೌರವ ಮುಖ್ಯಸ್ಥರು, ಪಿ.ಆರ್.ಸಿ.ಐ,,  ಬಿ.ವಿ ವಿಠ್ಠಲ್, ನಿರ್ದೇಶಕರು, ಎನ್.ಎಫ್.ಎಲ್., ಪ್ರೊ. ಮ್ಯಾಥ್ಯು ಹಿಬರ್ಡ್, ನಿರ್ದೇಶಕರು, ಮಾಧ್ಯಮ ಹಾಗೂ ಪತ್ರಿಕೋದ್ಯಮ ಸಂಸ್ಥೆ (IMeG) ಸ್ವಿಜರ್ಲೆಂಡ್ ರವರು ಈ ಕೆಳಕಂಡ ವರ್ಗಗಳಲ್ಲಿ ಪ್ರಶಸ್ತಿಗಳನ್ನು KSRTC ಮತ್ತು BMTCಗೆ ಪ್ರದಾನ ಮಾಡಿದರು.

KSRTC ಸಾಧನೆಯ ಕಿರೀಟಕ್ಕೆ ಸಿಕ್ಕಿದ ಪ್ರಶಸ್ತಿಯ ಗರಿ ಹೀಗಿವೆ; 

  1. ವರ್ಷದ ಅತ್ಯುತ್ತಮ ಗ್ರಾಹಕ ಸ್ನೇಹಿ ಸಂಸ್ಥೆ- ಡೈಮಂಡ್ ಪ್ರಶಸ್ತಿ

  2. ಅತ್ಯುತ್ತಮ ವರ್ಷದ ಸೇವಾ ಉಪಕ್ರಮ – ಡೈಮಂಡ್ ಪ್ರಶಸ್ತಿ

  3. ಸಾಂಸ್ಥಿಕ ಹಾಗೂ ವ್ಯಾವಹಾರಿಕ ಸಂಪರ್ಕ ಉಪಕ್ರಮ- ಡೈಮಂಡ್ ಪ್ರಶಸ್ತಿ

  4. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಬೆಳ್ಳಿ ಪ್ರಶಸ್ತಿ

  5. ವಿವಿಧತೆ ಹಾಗೂ ಸಮಾನತೆಯ ಉತ್ತಮ ಉಪಕ್ರಮ- ಬೆಳ್ಳಿ ಪ್ರಶಸ್ತಿ

  6. ಅತ್ಯುತ್ತಮ ವರ್ಷದ ಉಪಕ್ರಮ ಉತ್ಪನ್ನ- ಬೆಳ್ಳಿ ಪ್ರಶಸ್ತಿ

  7. ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಕಂಚಿನ ಪ್ರಶಸ್ತಿ

  8. ಸಾರ್ವಜನಿಕ ಸಂಪರ್ಕ ಅಧ್ಯಯನ- ಕಂಚಿನ ಪ್ರಶಸ್ತಿ

  9. ಪ್ರಾದೇಶಿಕ ಆಂತರಿಕ ನಿಯತಕಾಲಿಕ ಮುದ್ರಣ- ಸಮಾಧಾನಕರ ಪ್ರಶಸ್ತಿ.

KSRTCಯ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಹಿಮವರ್ಧನ ನಾಯ್ಡು ಅಲೂರಿ, ಚಿಕ್ಕಬಳ್ಳಾಪುರ ವಿಭಾಗ, ವಿ.ಬಸವರಾಜು, ಕೋಲಾರ ವಿಭಾಗ, ಎಸ್. ಲಕ್ಷ್ಮಣ್, ಬೆಂಗಳೂರು ಕೇಂದ್ರೀಯ ವಿಭಾಗ, ಎಸ್.ಪಿ ನಾಗರಾಜ, ಮಂಡ್ಯ ವಿಭಾಗರವರು ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು.

ಬಿಎಂಟಿಸಿ ಗೆ ಈ ಕೆಳಕಂಡ 4 ವರ್ಗಗಳಲ್ಲಿ ಪ್ರಶಸ್ತಿ ಲಭಿಸಿದ್ದು, ಶ್ರೀನಾಥ್ ಎನ್, ವಿಭಾಗೀಯ ನಿಯಂತ್ರಣಾಧಿಕಾರಿ, ಪಶ್ಚಿಮ ವಲಯ ರವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

BMTC ಮುಡಿಗೆ ನಾಲ್ಕು ಪ್ರಶಸ್ತಿಗಳು: 

  1. ಸಾಂಸ್ಥಿಕ ಕೈಪಿಡಿ ( Corporate Broucher)- ಡೈಮಂಡ್ ಪ್ರಶಸ್ತಿ

  2. ಗ್ರಾಹಕ ಸೇವೆಯಲ್ಲಿ ಅತ್ಯುತ್ತಮ ತಾಂತ್ರಿಕತೆ ಬಳಕೆ- ಚಿನ್ನದ ಪ್ರಶಸ್ತಿ

  3. ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ- ಬೆಳ್ಳಿ ಪ್ರಶಸ್ತಿ

  4. ವರ್ಷದ ಅತ್ಯುತ್ತಮ ಸೃಜನಶೀಲ ಜಾಹೀರಾತು-ಕಂಚಿನ ಪ್ರಶಸ್ತಿ

Related posts