ಈ ಬಾರಿಯ ದೀಪಾವಳಿ ಹೊಸ ಮನ್ವಂತರಕ್ಕೆ ಮುನ್ನುಡಿ

ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆಮಾಡಿದೆ. ಕೊರೋನಾ ಕರಾಳತೆಯ ಸನ್ನಿವೇಶದಲ್ಲಿ ನಾಡು ಸಿಲುಕಿದ್ದರೂ ಈ ಬಾರಿಯ ದೀಪಾವಳಿಯ ಸಡಗರಕ್ಕೇನೂ ಅಡ್ಡಿಯಾಗಿಲ್ಲ. ಪಟಾಕಿ ಇಲ್ಲದೇ ದೀಪಗಳ ಬೆಳಕಿಗಷ್ಟೇ ಸೀಮಿತಗೊಳಿಸಲು ಪ್ರಜ್ಞಾವಂತ ಜನತೆ ನಿರ್ಧರಿಸುವ ಮೂಲಕ ಈ ದೀಪಾವಳಿ ಸಂದರ್ಭದಲ್ಲಿ ಹೊಸ ಮನ್ವಂತರಕ್ಕೂ ಮುನ್ನುಡಿ ಬರೆಯಲಾಗಿದೆ.

ಈ ಬಾರಿಯ ದೀಪಾವಳಿ ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ವಿಶೇಷ. ದೇಶ ಕಾಯುವ ಯೋಧರೊಂದಿಗೆ ಬೆಳಕಿನ ಹಬ್ಬ ಆಚರಿಸಿ ಸಿಹಿ ಸನ್ನಿವೇಶದಲ್ಲಿ ಅವರು ಪಾಲ್ಗೊಂಡು ಜಾಗತಿಕ ಗಮನಸೆಳೆದರು.

ಇದೇ ವೇಳೆ ಟ್ವೀಟ್ ಮಾಡಿ ದೇಶದ ಜನತೆಗೆ ದೀಪಾವಳಿಯ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ದೀಪಾವಳಿ ಸಂದರ್ಭದಲ್ಲಿ ದೇಶದ ಗಡಿ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ಸೆಲ್ಯೂಟ್ ಹೊಡೆಯಲು ದೀಪಗಳನ್ನು ಬೆಳಗಿಸಿ ಎಂದು ಕರೆ ಕೊಟ್ಟಿದ್ದಾರೆ.

Related posts