ರಾಜ್ಯದಲ್ಲಿ ಡೆಂಗ್ಯೂ ಮರಣ ಮೃದಂಗ; ನಿಯಮ ಮೀರಿದವರಿಗೆ ದಂಡ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಮರಣ ಮೃದಂಗ ಭಾರಿಸುತ್ತಿದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ರಾಜ್ಯಸರ್ಕಾರ ಕ್ರಮ ಕೈಗೊಂಡಿದೆ. ಜೊತೆಗೆ ನೈರ್ಮಲ್ಯ ಕಾಪಾಡದವರಿಗೆ ದಂಡವಿಧಿಸಲು ಸರ್ಕಾರ ಆದೇಶಿಸಿದೆ. ಈ ಸಂಬಂಧ ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿರುವ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಇತರ ಜಿಲ್ಲೆಗಳಲ್ಲಿ ಡಿಸಿಗಳಿಗೆ ಆದೇಶ ನೀಡಿದೆ. ಖಾಲಿ ನಿವೇಶನಗಳನ್ನು ಪರಿಶೀಲಿಸಿ ನೋಟಿಸ್‌ಗಳನ್ನು ನೀಡಬೇಕು ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಅಧಿಕಾರ ನೀಡಿದೆ.

ಯಾರಿಗೆ ಎಷ್ಟು ದಂಡ?

  • ನಗರ ಪ್ರದೇಶದ ಮನೆಗಳಿಗೆ 400 ರೂ.

  • ಗ್ರಾಮೀಣ ಪ್ರದೇಶದ ಮನೆಗಳಿಗೆ 200 ರೂ.

  • ನಗರ ಪ್ರದೇಶದ ವಾಣಿಜ್ಯ ಸ್ಥಳಗಳಿಗೆ 1,000 ರೂ.

  • ಗ್ರಾಮೀಣ ಭಾಗಗಳ ವಾಣಿಜ್ಯ ಸ್ಥಳಗಳಿಗೆ 500 ರೂ.

  • ನಗರ ಪ್ರದೇಶದ ನಿರ್ಮಾಣ ಸ್ಥಳ, ಖಾಲಿ ನಿವೇಶನಗಳಿಗೆ 2,000 ರೂ.

  • ಗ್ರಾಮೀಣ ಪ್ರದೇಶದ ನಿರ್ಮಾಣ ಸ್ಥಳ, ಖಾಲಿ ನಿವೇಶನಗಳಿಗೆ 1,000 ರೂ.

  • ಪುನರಾವರ್ತಿತ ಅಪರಾಧಗಳಿಗಾಗಿ, ಉಲ್ಲಂಘನೆಯ ಪ್ರತಿ ವಾರಕ್ಕೆ ಒಟ್ಟು ಮೊತ್ತದ 50% ಹೆಚ್ಚುವರಿ ದಂಡ. 

ಸೊಳ್ಳೆಗಳ ಉತ್ಪತ್ತಿ ತಾಣಗಳ ನಿವಾರಣೆಗೆ ಮಾಲೀಕರು ತಕ್ಷಣ ಕ್ರಮ ಕೈಗೊಳ್ಳಬೇಕು. ಕಾರ್ಯನಿರ್ವಹಿಸಲು ವಿಫಲವಾದ ವ್ಯಕ್ತಿಗೆ ದಂಡ ವಿಧಿಸಬೇಕು ಎಂದು ಸರ್ಕಾರವು ಅಧಿಕಾರಿಗಳಿಗೆ ಸೂಚಿಸದೆ. ಈ ಕುರಿತಂತೆ ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Related posts