ದೆಹಲಿ: ಭಾರತೀಯ ಸೇನೆಯ ಬತ್ತಳಿಕೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೊಂಡಿದೆ. ಭಾರತದ ಮಹತ್ವಾಕಾಂಕ್ಷೆಯ ಆಂಟಿ ಟ್ಯಾಂಕ್ ಧ್ರುವಾಸ್ತ್ರ ಮಿಸೈಲ್’ನ ಪರೀಕ್ಷಾರ್ಥ ಉಡ್ಡಯನ ಯಶಸ್ವಿಯಾಗಿದೆ.
ಮೇಕ್ ಇನ್ ಇಂಡಿಯಾ ಅಭಿಯಾನದಡಿ ಡಿಆರ್ ಡಿಒ ನಿರ್ಮಿಸಿರುವ ಮಿಸೈಲ್ ಇದಾಗಿದೆ.
ಒಡಿಶಾದ ಇಂಟರಿಮ್ ಟೆಸ್ಟ್ ರೇಂಜ್’ನಲ್ಲಿ ಇದರ ಪರೀಕ್ಷೆ ನಡೆಯಿತು. ಜುಲೈ 15 ಮತ್ತು 16ರಂದು ಕೂಡಾ ಈ ಕ್ಷಿಪಣಿಯ ಪರೀಕ್ಷೆ ನಡೆಸಲಾಗಿತ್ತು.