ಬೆಂಗಳೂರು: ವಿದ್ಯುತ್, ಹಾಲು ಬೆಲೆ ಹೆಚ್ಚಳ, ವಿವಿಧ ತೆರಿಗೆ ಹೊರೆಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರಇದೀಗ ಡೀಸೆಲ್ ದರ ಹೆಚ್ಚಳ ಮಾಡಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಗೆ “ಹೊಸ ತಡಕುವಿನ” ಉಡುಗೊರೆ ಎಂದು ರವಿ ಟೀಕಿಸಿದ್ದಾರೆ. ಬೆಲೆ ಏರಿಕೆಯ ಶೂಲಕ್ಕೆ ಜನರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಿಲುಕಿಸಿದೆ ಎಂದವರು ಆಕ್ರೋಶವನ್ನೂ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರದಿಂದ "ಹೊಸ ತಡಕುವಿನ" ಉಡುಗೊರೆ.
ಪ್ರತಿ ಲೀಟರ್ ಡೀಸಿಲ್ ಬೆಲೆ ಎರಡು ರೂಪಾಯಿ ಏರಿಕೆ.
ಬೆಲೆ ಏರಿಕೆಯ ಶೂಲಕ್ಕೆ ಜನರನ್ನು ಸಿಲುಕಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. pic.twitter.com/HIogQiPNfA
— C T Ravi 🇮🇳 ಸಿ ಟಿ ರವಿ (@CTRavi_BJP) April 1, 2025