ರಾತ್ರೋ ರಾತ್ರಿ ಹೀರೋ ಆದ ಡಿ.ಕೆ.ಶಿವಕುಮಾರ್

ಬೆಂಗಳೂರು: ನಾಡಿಗೆ ಕೊರೋನಾ ವಕ್ಕರಿಸಿರಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡ ಕೂಲಿ ಕಾರ್ಮಿಕರು ಪರದಾಡುತ್ತಿದ್ದಾರೆ. ಲಾಕ್ ಡೌನ್ ಜಾರಿಯಲ್ಲಿದ್ದುದರಿಂದಾಗಿ ದೂರದ ಜಿಲ್ಲೆಗಳಿಂದ ಕೆಲಸ ಅರಸಿ ಸುತ್ತಾಡುತ್ತಿದ್ದ ಮಂದಿ ಕೆಲ ಪಟ್ಟಣಗಳಲ್ಲಿ ಸಿಲುಕಿ ಪಡಬಾರದ ಕಷ್ಟ  ಅನುಭವಿಸುತ್ತಿದ್ದಾರೆ. ಈ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮೂರಿಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದೆ ತಡ,  ಸಾವಿರಾರು ಬಡಪಾಯಿಗಳು ಬಸ್ ಸ್ಟಾಂಡ್ ಬಳಿ ಜಮಾಯಿಸಿದ್ದರು. ಆದರೆ ಅವ್ಯವಸ್ಥೆ ಕಂಡು ಜನ ಕಣ್ಣೀರಿಡುತ್ತಿದ್ದರು.

ಜನರ ಗೋಳಿನ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ ಸ್ಥಳಕ್ಕೆ ದೌಡಾಯಿಸಿದ ಮಾಜಿ ಸಚಿವ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾನವೀಯತೆ ಮೆರೆದು, ಬಡವರ ಪಾಲಿಗೆ ಹೀರೊ ಆಗಿಬಿಟ್ಟಿದ್ದಾರೆ.

ಲಾಕ್’ಡೌನ್ 3ನೇ ಅವಧಿಗೆ ವಿಸ್ತಾರವಾಗಿದ್ದು ಆ ನಡುವೆ ಅತಂತ್ರ ಸ್ಥಿತಿಯಲ್ಲಿರುವ ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಸ್ ದರ ಮಾತ್ರ ದುಪ್ಪಟ್ಟಾಗಿತ್ತು. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ್ದ ಅಸಹಾಯಕರು ಈ ಬಸ್ ದರ ಪಟ್ಟಿ ಕಂಡು ದಂಗಾದರು.

 

  • ಬೆಂಗಳೂರಿನಿಂದ ವಿಜಾಪುರಕ್ಕೆ 41,340 ರೂಪಾಯಿ
  • ಬೆಂಗಳೂರಿನಿಂದ ಬೀದರಿಗೆ 54,600 ರೂಪಾಯಿ
  • ಬೆಂಗಳೂರಿನಿಂದ ಕಲಬುರ್ಗಿಗೆ 45,240 ರೂಪಾಯಿ
  • ಬೆಂಗಳೂರಿನಿಂದ ಮಂಗಳೂರಿಗೆ 28,080 ರೂಪಾಯಿ
  • ಬೆಂಗಳೂರಿನಿಂದ ಬೆಳಗಾವಿಗೆ 40,170 ರೂಪಾಯಿ
  • ಬೆಂಗಳೂರಿನಿಂದ ಧಾರವಾಡಕ್ಕೆ  33,930 ರೂಪಾಯಿ

ಇಷ್ಟು ಹಣವನ್ನು ಪಾವತಿಸಿ 30 ಮಂದಿ ಒಂದು ಬಸ್ಸಿನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರತೀಯೊಬ್ಬರ ಮೇಲೂ ದುಪ್ಪಟ್ಟು ದರ ನಿಗದಿಪಡಿಸರುವುದರಿಂದ ಬಡಪಾಯಿ ಮಂದಿ ಕಂಗಾಲಾದರು. ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಸಾವಿರಾರು ರೂಪಾಯಿಗಳನ್ನು ಎಲ್ಲಿಂದ ಕೊಡಲಿ ಎಂದು ಸಾರಿಗೆ ಸಂಸ್ಥೆ ಸಿಬ್ಬಂದಿ ಜೊತೆ ಜಗಳವಾಡುತ್ತಿದ್ದರು.

ಅಸಹಾಯಕರ ಈ ಪರಿಸ್ಥಿತಿ ಕಂಡು ಮಮ್ಮಲ ಮರುಗಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಕಂಗಾಲಾಗಿರುವ ಕೂಲಿ ಕಾರ್ಮಿಕರನ್ನು ಊರಿಗೆ ಕಳುಹಿಸಲು ಎಷ್ಟು ಹಣ ಬೇಕು ಹೇಳಿ. ನಾನು ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ. ಆದರೆ ಬಸ್ ವ್ಯವಸ್ಥೆ ಕಲ್ಪಿಸಿ’ ಎಂದು ಡಿಕೆಶಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ದವೂ ಅವರು ವಾಗ್ದಾಳಿ ನಡೆಸಿದರು.

ಇದೆ ವೇಳೆ ತನ್ನ ಜೊತೆಗಿದ್ದ ಕಾರ್ಯಕರ್ತರ ಮೂಲಕ ಆ ಕೂಲಿ ಕಾರ್ಮಿಕರ ನೆರವಿಗೆ ಧಾವಿಸಿ ಊರಿಗೆ ತೆರಳಲು ಅನುವು ಮಾಡಿಕೊಟ್ಟರು. ಇವರ ಈ ಸಹಾಯವನ್ನು ಕಂಡ ಬಡಪಾಯಿ ಮಂದಿ ‘ನೀವೇ ನಮ್ಮ ಪಾಲಿಗೆ ಹೀರೊ’ ಎನ್ನುತ್ತಾ ಕೃತಜ್ಞತೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ.. ಕುತೂಹಲ ಕೆರಳಿಸಿದ ಸಚಿವ ಶ್ರೀರಾಮುಲು ದುಬಾರಿ ಮಾಸ್ಕ್.. 

 

Related posts