ದೊಡ್ಡಬಳ್ಳಾಪುರ : ಕಳೆದ ಕೆಲ ದಿನಗಳಿಂದ ಹುಲುಕುಡಿ ಬೆಟ್ಟದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆಯನ್ನ ಸೆರೆ ಹಿಡಿಯಲು ಇಡಲಾಗಿದ್ದ ಅರಣ್ಯ ಇಲಾಖೆಗೆ ಬೋನಿಗೆ ಚಿರತೆ ಬಿದ್ದಿದೆ.
ದೊಡ್ಡಬಳ್ಳಾಪುರ ತಾಲೂಕು ಹುಲಿಕುಡಿ ಬೆಟ್ಟದ ತಪ್ಪಲಲ್ಲಿರುವ ಮಾಡೇಶ್ವರ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಬೆಟ್ಟದಲ್ಲಿ ನಾಲ್ಕೈದು ಚಿರತೆಗಳು ವಾಸವಾಗಿದ್ದು, ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದವು, ತೋಟದಲ್ಲಿ ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮಾರಗಳಲ್ಲಿ ಚಿರತೆಗಳ ಚಲನವನ ಸೆರೆಯಾಗಿತ್ತು.
ಚಿರತೆಗಳ ಚಲನವನದಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಚಿರತೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು, ಗ್ರಾಮಸ್ಥರ ಮನವಿ ಮೇರೆಗೆ ನಿನ್ನೆ ಸಂಜೆ 6 : 30 ರ ಸಮಯದಲ್ಲಿ ಗ್ರಾಮದ ಹೊರಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಇಟ್ಟಿದ್ದ, ಕೇವಲ ಎರಡೇ ತಾಸಿನಲ್ಲಿ 18 ತಿಂಗಳ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.
ಬೋನಿಗೆ ಬಿದ್ದ ಚಿರತೆಯನ್ನ ದೊಡ್ಡಬಳ್ಳಾಪುರ ಅರಣ್ಯ ಇಲಾಖೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿರುವುದ್ದಾಗಿ ಹೇಳಿದ್ದಾರೆ, ಸದ್ಯಕ್ಕೆ ಗ್ರಾಮಸ್ಥರು ನಿರಳರಾಗಿದ್ದರು, ಬೆಟ್ಟದಲ್ಲಿ ಇನ್ನೂ ನಾಲ್ಕೈದು ಚಿರತೆಗಳಿದ್ದು ಗ್ರಾಮಸ್ಥರ ಆತಂಕವನ್ನು ಇನ್ನೂ ಜೀವಂತವಾಗಿ ಇಟ್ಟಿದೆ.