ನೆಲಮಂಗಲ: ಮೈಸೂರು ಒಡೆಯರ ಕಾಲದಲ್ಲಿ ಜಾಗ ಪಡೆದ ಕಂಪನಿಯಿಂದ ರೈತರಿಗೆ ದೋಖ ಮಾಡಿ ನೂರಾರು ಎಕರೆ ಜಮೀನು ಗುಳುಂ ಮಾಡುವ ಹುನ್ನಾರ ನಡೆದಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ದಾಸರಹಳ್ಳಿ ಸಮೀಪದ ಸೋಲದೇವನಹಳ್ಳಿಯಲ್ಲಿ ಆಚಾರ್ಯ ಕಾಲೇಜು ಬಳಿ ಸುಮಾರು 118 ಎಕರೆ 24 ಗುಂಟೆ ಜಮೀನನ್ನು ಕಂಪನಿ ಗುಳುಂ ಮಾಡಿದೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಜಮೀನು ಕಳೆದುಕೊಂಡ ಸ್ಥಳಿಯ ನಿವಾಸಿ ಮಾರುತಿ ಮಾತನಾಡಿ “ಮೈಸೂರು ಸ್ಟೋನ್ ವೇರ್ ಪೈಪ್ಸ್ ಪ್ಯಾಟಿಂರ್ಸ ಲಿಮಿಟಿಟ್ ನಿಂದ ದುಂಡಾವರ್ತನೆ ನಡೆದು ನೂರಾರು ಎಕರೆ ಗುಳಂ ಮಾಡಲಾಗಿದೆ. ಈ ಜಮೀನನ್ನು ಬಗರ್ ಹುಕ್ಕಂ ನಿಂದ ಜಮೀನು ಪಡೆದಿರುವ ಸ್ಥಳೀಯರು, ಇದೀಗ ದಾಖಲೆಗಳಿದ್ದರೂ ಕಂಪನಿ ವಿರುದ್ಧ ಹೋರಡುವ ಪರಿಸ್ಥಿತಿ ಬಂದಿದೆ. ಯಲಹಂಕ ತಹಶೀಲ್ದಾರ್ ಕಚೇರಿಯಲ್ಲೂ ಬಲಾಡ್ಯರ ಪರವಾಗಿ ಅಧಿಕಾರಿಗಳು ಸಹಕರಿಸುತ್ತಿದ್ದಾರೆ , ಕಚೇರಿಗೆ ಅಲೆದು ನಾವು ತೊಂದರೆಗೆ ಒಳಗಾಗಿದ್ದೇವೆ. 1913ರಿಂದ ನಮ್ಮ ಪೂರ್ವಿಕರು ಅನುಭವಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಈ ಕಂಪನಿ ಇದೀಗ ಕಾರ್ಯನಿರ್ವಹಿಸದಿದ್ದರೂ ಜಾಗ ಒತ್ತುವರಿಗೆ ಹುನ್ನಾರ ನಡೆಸಿ ಯಶಸ್ವಿಯಾಗಿ, ಮನೆ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಇಡೀ ನೂರು ಎಕರೆ ಜಮೀನನ್ನು ಲೇಔಟ್ ಮಾಡುವ ಕೆಲಸಕ್ಕೆ ಕೈ ಹಾಕಿದೆ ಎಂದು ರೈತರು ದೂರಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಈ ಜಾಗ ಯಾವುದೇ ಕಾರಣಕ್ಕೂ ಬಲಾಡ್ಯರಿಗೆ ಬಿಡುವುದಿಲ್ಲ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ಹೊರಹಾಕಿದರು. ಜಮೀನು ಕಳೆದುಕೊಂಡ ರೈತರು ಹಾಗೂ ನೂರಾರು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.