‘ವೈದ್ಯ ಲೋಕದ ಬೆಳಕು’ ಡಾ.ಭುಜಂಗ ಶೆಟ್ಟಿ ವಿಧಿವಶ

ಬೆಂಗಳೂರು: ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ವಿಧಿವಶರಾಗಿದ್ದಾರೆ. ಶುಕ್ರವಾರ ಸಂಜೆ ಅವರು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ.

ಬೆಂಗಳೂರಿನ ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿರುವ ಅವರಿಗೆ ಸಂಜೆ 7.30ರ ಸುಮಾರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿದಿದ್ದಾರೆ.

ದೇಶದ ಪ್ರಮುಖ ನೇತ್ರ ತಜ್ಞರಾಗಿದ್ದ ಡಾ.ಭುಜಂಗ ಶೆಟ್ಟಿ ಅವರು ತಮ್ಮ ವೈದ್ಯ ವೃತ್ತಿಯ ಜೊತೆ ನೇತ್ರದಾನ ವಿಚಾರದಲ್ಲೂ ಅಭಿಯಾನ ಮೂಲಕ ದೇಶದ ಗಮನಸೆಳೆದಿದ್ದರು. ಡಾ.ರಾಜ್, ಪುನೀತ್ ರಾಜ್ ಕುಮಾರ್ ಸಹಿತ ಹಲವರ ನೇತ್ರದಾನ ಮಾಡಿಸಿ ಡಾ.ಭುಜಂಗ ಶೆಟ್ಟಿಯವರು ಗಮನಸೆಳೆದಿದ್ದಾರೆ.

ಡಾ. ಭುಜಂಗ ಶೆಟ್ಟಿಯವರ ನಿಧನಕ್ಕೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರನೇಕರು ದುಃಖ ವ್ಯಕ್ತಪಡಿಸಿದ್ದಾರೆ.

Related posts