ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿ ಉಪಾಧ್ಯಕ್ಷೆಯಾಗಿ ಡಾ.ಲತಾ ನೇಮಕ

ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ.ಲತಾ ಟಿ.ಎಸ್ ಅವರು ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ರಾಜ್ಯ ಸರ್ಕಾರೀ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ನಿಗಮ (KSRTC) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಡಾ.ಲತಾ ಟಿ.ಎಸ್. ಅವರು ರಾಜ್ಯ ಸರ್ಕಾರದ ಅಧೀನದ ನಿಗಮಗಳ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಾದರಿ ಸೇವೆ ಸಲ್ಲಿಸಿದ್ದಾರೆ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. KSRTC ನಿಗಮ ಮತ್ತು ಸಾರ್ವಜನಿಕರ ಮಧ್ಯೆ ರಾಯಬಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಲತಾ ಟಿ.ಎಸ್. ಅವರು ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಯಲ್ಲೂ ಸುದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಯುವ ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಮಾದರಿಯಾಗಿರುವ ಡಾ.ಲತಾ ಅವರನ್ನು ಇದೀಗ ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿಗೆ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಮಂಡಳಿಯ ಮುಖ್ಯಸ್ಥ ಎಂ.ಬಿ.ಜಯರಾಂ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಅಧ್ಯಕ್ಷರಾದ ಗೀತಾ ಶಂಕರ್ ತಿಳಿಸಿದ್ದಾರೆ.

ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯು ದೇಶದ್ಯಾಂತ 85 ಶಾಖೆಗಳನ್ನು ಹೊಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಶಾಖೆಗಳನ್ನು ಹೊಂದಿದ್ದು, ಸಿಂಗಾಪುರ್, ಲಂಡನ್, ಶ್ರೀಲಂಕಾ, ದುಬೈ, ನೇಪಾಳ, ಆಸ್ಟ್ರೇಲಿಯಾ, ಅಮೆರಿಕಾಗಳಲ್ಲಿ ಸಂಘಟನೆ ನಿರತವಾಗಿದೆ. ಜೊತೆಗೆ YCC Young Communicators Club of PRCI ಮೂಲಕ ದೇಶದ್ಯಾಂತ 70 ಕ್ಕೂ ಹೆಚ್ಚು ಕಾಲೇಜುಗಳಲ್ಲಿ‌ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಭಾರತೀಯ ಸಾರ್ವಜನಿಕ‌ ಸಂಪರ್ಕ ಮಂಡಳಿ ಗೌರವಾಧ್ಯಕ್ಷರೂ ಆದ ಎಂ.ಬಿ.ಜಯರಾಂ ತಿಳಿಸಿದ್ದಾರೆ.

Related posts