ಬೆಂಗಳೂರು. ರಾಜ್ಯದಲ್ಲಿ ಕೊರೋನಾ ವೈರಸ್’ನ ರಣಕೇಕೆ ಮುಂದುವರಿದಿದೆ. ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ ಕೂಡಾ ಕರ್ನಾಟಕದಲ್ಲಿನ ಹೊಸ ಕೊರೋನಾ ಪಾಸಿಟಿವ್ ಬಗ್ಗೆ ಅಂಕಿಅಂಶಗಳನ್ನು ಅನಾವರಣ ಮಾಡಿದೆ.
ಲಾಕ್’ ಡೌನ್ ಜಾರಿಯಲ್ಲಿದ್ದರೂ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮಂಗಳವಾರ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಹೊರಬರುವ ಹೊತ್ತಿಗೆ 8 ಹೊಸ ಪ್ರಕರಣಗಳು ಸೇರಿಕೊಂಡಿವೆ.
ಇದನ್ನೂ ಓದಿ.. ಖುಷಿಪಡಿಸೋ ರೌಡಿ ಬೇಬಿ
ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನ ನಡುವೆ 8 ಮಂದಿಯಲ್ಲಿ ಕೋವಿಡ್-19 ವೈರಾಣು ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತನ್ನ ಈ ಹೆಲ್ತ್ ಬುಲೆಟಿನ್’ನಲ್ಲಿ ಹೇಳಿದೆ.
- ಬೆಂಗಳೂರು ನಗರದ ಕಂಟೈನ್ಮೆಂಟ್ ಝೋನ್’ನಲ್ಲಿ ಸಂಪರ್ಕಿತ 48ವರ್ಷ ವಯಸ್ಸಿನ ವ್ಯಕ್ತಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ.
- ಈ ಹೊಸ ಹೆಲ್ತ್ ಬುಲೆಟಿನ್ ಕಲುಬುರಗಿ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ. ಕಲಬುರಗಿಯ 6 ಮಂದಿಯಲ್ಲಿ ಸೋಂಕು ಕಂಡುಬಂದಿದೆ.
- ಗದಗಿನ ಮತ್ತೊಬ್ಬ ವ್ಯಕ್ತಿಯೂ ಹೊಸದಾಗಿ ಸೋಂಕಿತರ ಪಟ್ಟಿಗೆ ಸೇರ್ಪಡೆಯಾಗಿದ್ದಾನೆ.
ಈ ನಡುವೆ ಕರ್ನಾಟಕದಲ್ಲಿ ಈ ವರೆಗೆ 520 ಮಂದಿಯಲ್ಲಿ ಕೋವಿಡ್-19 ಸೋಂಕು ಕಂಡುಬಂದಿದ್ದು, ಈ ಪೈಕಿ 198 ಮಂದಿ ಗುಣಮುಖರಾಗಿದ್ದಾರೆ. ಇದೆ ವೇಳೆ 20 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಉಲ್ಲೇಖಿಸಿದೆ.
ಇದನ್ನೂ ಓದಿ.. 13 ರಾಜ್ಯಗಳಲ್ಲಿ ಲಾಕ್ ಡೌನ್ ವಿಸ್ತರಣೆ?