ಮತ್ತೆ ಲಾಕ್’ಡೌನ್ ಅನಿವಾರ್ಯ; ಸಿಎಂ ನಿರ್ಧಾರಕ್ಕೆ ಗಣ್ಯರ ಸ್ವಾಗತ

ಬೆಂಗಳೂರು: ಕೊರೋನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ರಾಜಧಾನಿಯಲ್ಲಿ ಲಾಕ್’ಡೌನ್ ಘೋಷಿಸಿದೆ. ಜುಲೈ 14 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್‌ ಜಾರಿಗೆ ಬರಲಿದ್ದು ಸರ್ಕಾರದ ಈ ಕ್ರಮ ಔಚಿತ್ಯಪೂರ್ಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರಣಾಂತಿಕ ಕೊರೋನಾ ಸೋಂಕು ಸಾಮುದಾಯಿಕ ಹಂತದಲ್ಲಿ ಹರಡುವುದನ್ನು ತಡೆಯಲು ಈ ರೀತಿಯ ಕ್ರಮ ಸ್ವಾಗತಾರ್ಹ ಎಂದು ಹಲವಾರು ಗಣ್ಯರು ಪ್ರತಿಪಾದಿಸಿದ್ದಾರೆ.

ಇದೆ ವೇಳೆ ಸಾಮುದಾಯಿಕ ಹಂತದಲ್ಲಿ ಸೋಂಕು ಹರಡುವುದನ್ನು ತಡೆಯಲು ಈ ರೀತಿಯ ಲಾಕ್’ಡೌನ್ ಕ್ರಮ ಉತ್ತಮ ಮಾರ್ಗ ಎಂದು ಖ್ಯಾತ ನೇತ್ರ ತಜ್ಞ ಡಾ.ಭುಜಂಗ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಈ ವರೆಗೂ ಸರ್ಕಾರ ಹಾಗೂ ಪ್ರತಿನಿಧಿಗಳು ಸೋಂಕು ತಡೆಗಟ್ಟಲೆ ಅನೇಕಾನೇಕ ಕ್ರಮಗಳನ್ನು ಕೈಗೊಂಡಿದ್ದರೂ ಸೋಂಕಿನ ವೇಗ ತಡೆಯಲಾಗಲಿಲ್ಲ. ಹೀಗಿರುವಾಗ ಮುಖ್ಯಮಂತ್ರಿಗಳು ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ChefTalk ಸಂಸ್ಥೆಯ ಮುಖ್ಯಸ್ಥ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಕೊರೋನಾ ಸೋಂಕು ತಡೆಯಲು ಜನ ತಾವಾಗಿಯೇ ಪ್ರಯತ್ನಿಸಬೇಕು. ಹಾಗಾಗಿ ಲಾಕ್’ಡೌನ್ ನಿರ್ದಾರವನ್ನು ಎಲ್ಲರೂ ಸ್ವಾಗತಿಸೋಣ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹೇಶಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಲಾಕ್’ಡೌನ್ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ, ತಡವಾಗಿಯಾದರೂ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ರಾಜ್ಯ ಸರ್ಕಾರ ಲಾಕ್ಡೌನ್ ಘೋಷಿಸಿರುವ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೊರೋನ ವೈರಸ್ ಸಮುದಾಯಕ್ಕೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಮನಗಂಡು ಇತರೆ ಗಂಭೀರ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮತ್ತೆ ಜಾರಿಗೊಳಿಸಿದರೆ ಸಾರ್ವಜನಿಕ ಸ್ವಾಸ್ಥ್ಯದ ಹಿತದೃಷ್ಟಿಯಿಂದ ನಾನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ. https://twitter.com/hd_kumaraswamy/status/1281969805839360000

ಇದನ್ನೂ ಓದಿ.. ಐಶ್ವರ್ಯ ರೈ ಸೇಫ್; ಪತಿ ಅಭಿಷೇಕ್, ಮಾವ ಅಮಿತಾಬ್ ಚೇತರಿಕೆ

Related posts