ಹಾವೇರಿ: ಎಲ್.ಜಿ. ಹಾವನೂರು ವರದಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಬೈಬಲ್ ಎಂದು ಬಣ್ಣಿಸಿದ್ದರು. ಸರ್ವೊಚ್ಛ ನ್ಯಾಯಲಯವು ವರದಿಯನ್ನು ಹಿಂದುಳಿದ ವರ್ಗಗಳ ನಿಖರವಾದ ಅಂಶಗಳ ಅಧ್ಯಯನ ಎಂದಿತು. ಈ ವರದಿ ಬಿ.ಪಿ.ಮಂಡಲ್ ಆಯೋಗಕ್ಕೂ ಮಾನದಂಡವಾಗಿ ಕಾರ್ಯನಿರ್ವಹಿಸಿದೆ. ವರಿದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಎಲ್.ಜಿ.ಹಾವನೂರು ವರದಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕನ್ನಡಪರ ಮತ್ತು ಪಗ್ರತಿಪರ ವರದಿಗಳ ಅನುಷ್ಠಾನದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ 3 ಲಕ್ಷ ಹಿಂದುಳಿದ ವರ್ಗಗಳ ಜನರ ಸಮಿಕ್ಷೆಯನ್ನು ನಡೆಸಿತು. 1972ರ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ ವರ್ಗಗಳ ಜಾತಿಗಳನ್ನು ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿಗಳಲ್ಲಿ ವಿಭಾಗ ಮಾಡಿತು ಎಂದರು.
ಹಿಂದುಳಿದ ವರ್ಗಗಳಿಗಾಗಿಗೆ ಪ್ರತ್ಯೇಕ ಮಂತ್ರಿ, ಆಯುಕ್ತಾಯಲ, ಇಲಾಖೆ ಹಾಗೂ ಪ್ರತ್ಯೇಕ ನಿಗಮಗಳ ಸ್ಥಾಪನೆಗೆ ಶಿಫಾರಸ್ಸು ಮಾಡಿತು. ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಶಾಲೆ ಹಾಗೂ ಹಾಸ್ಟೆಲ್ಗಳನ್ನು ತೆರೆಯಲು ಸೂಚಿಸಿತು. ಆಯೋಗ ಅಧ್ಯಕ್ಷ ಎಲ್.ಜಿ.ಹಾವನೂರು ಅವರನ್ನು ಸರ್ಕಾರದಲ್ಲಿ ಮಂತ್ರಿಗಳನ್ನು ಮಾಡಿ ದೇವರಾಜ ಅರಸು ಅವರು ವರದಿಯ ಸಂಪೂರ್ಣವಾಗಿ ಅನುಷ್ಠಾನವಾಗುವಂತೆ ನೋಡಿಕೊಂಡರು ಎಂದ ಹೆಗ್ಡೆ, ಎಲ್.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಏಳಿಗೆ ನೀಡಿದ ಕೊಡುಗೆಯನ್ನು ಗಮನಿಸಿ ನೆಲ್ಸ್ನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯ ಸಲಹೆಗಾರರನ್ನಾಗಿ ಎಲ್.ಜಿ.ಹಾವನೂರು ಅವರನ್ನು ನೇಮಿಸಿದರು. ಇದು ನಮ್ಮೆಲರಿಗೂ ಹೆಮ್ಮ ಪಡಬೇಕಾದ ವಿಷಯ ಎಂದರು.