ಆರೋಗ್ಯ ಸಚಿವರ ಮಗನನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ರಾಜೀನಾಮೆ? ಹಿರಿಯ ಅಧಿಕಾರಿಗಳ ಸ್ಪಷ್ಟನೆ ಏನು ಗೊತ್ತಾ?

ಮೋದಿಯ ನಾಡು ಕುತೂಹಲಕಾರಿ ಬೆಳವಣಿಗೆಗೆ ಸಾಕ್ಷಿಯಾಗಿದೆ. ಲಾಕ್’ಡೌನ್ ನಿಯಮ ಉಲ್ಲಂಘಿಸಿದ್ದ ಸಚಿವರ ಮಗನನ್ನು ಬಂಧಿಸಿದ್ದ ಮಹಿಳಾ ಪೊಲೀಸ್ ಕೆಲಸಕ್ಕೇ ರಾಜೀನಾಮೆ ನೀಡಿದ ಅಚ್ಚರಿಯ ಘಟನೆ ಗುಜರಾತ್’ನಲ್ಲಿ ನಡೆದಿದೆ.

ಗುಜರಾತ್ ನ ಆರೋಗ್ಯ ಸಚಿವರ ಪುತ್ರ ಪ್ರಕಾಶ್ ಕನಾನಿ ಹಾಗೂ ಇಬ್ಬರು ಸ್ನೇಹಿತರನ್ನು ಲಾಕ್’ಡೌನ್ ನಿಯಮ ಉಲಂಘನೆ ಆರೋಪದಲ್ಲಿ ಮಹಿಳಾ ಪೊಲೀಸ್ ಪೇದೆ ಸುನಿತಾ ಯಾದವ್ ಬಂಧಿಸಿದ್ದರು.

ಸೂರತ್ ನಗರದಲ್ಲಿನ ಈ ಪ್ರಕರಣ ದೇಶವ್ಯಾಪಿ ಸುದ್ದಿಯಾಗಿ, ಮಹಿಳಾ ಪೊಲೀಸ್ ಅವರ ದಿಟ್ಟ ನಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಇದಾದ ಕೆಲವೇ ದಿನಗಳಲ್ಲಿ ಅವರು ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವಂತೆಯೇ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಗಳು ಈ ರೀತಿಯ ಬೆಳವಣಿಗೆ ನಡೆದಿಲ್ಲ ಎಂದಿದ್ದಾರೆ.

ಇದನ್ನೂ ಓದಿ.. ಭಾರೀ ಮಳೆ; ತಿಂಗಳ ಹಿಂದೆ ಉದ್ಘಾಟನೆಯಾದ  ಸೇತುವೆ ಕುಸಿತ

Related posts