ಮಂಗಳೂರು: ಎಲ್ಲೆಲ್ಲೂ ಸ್ವಾತಂತ್ರ್ಯೋತ್ಸವ ಸಂಭ್ರಮ ಆವರಿಸಿದೆ. ನಾಡಿಲೆಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿಸುತ್ತಿದ್ದು, ಕಟೀಲು ಕ್ಷೇತ್ರದಲ್ಲಿ ನೆಲೆಸಿರುವ ಜಗನ್ಮಾತೆ ಕೂಡಾ ಇಂದು ಭಾರತಾಂಬೆ ಸ್ವರೂಪಿಣಿಯಾಗಿ ಗಮನಸೆಳೆದಿದ್ದಾಳೆ.
ಜಗದಾಂಬೆ ಶ್ರೀ ಕಟೀಲೇಶ್ವರಿಯು ಸ್ವಾತಂತ್ರ್ಯ ದಿನವಾದ ಇಂದು ಭಾರತಾಂಭೆಯಾಗಿ ಗಮನಸೆಳೆದದ್ದು ವಿಶೇಷ. ಕಳೆದ ವರ್ಷದಂತೆಯೇ ಈ ವರ್ಷವೂ ಸ್ವಾತಂತ್ರ್ಯೋತ್ಸವ ದಿನದಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ವಿಗ್ರಹಕ್ಕೆ ರಾಷ್ಟ್ರಧ್ವಜವನ್ನು ಹೋಲುವ ಬಣ್ಣದ ವಸ್ತ್ರಾಲಂಕಾರ ಮಾಡಲಾಗಿದೆ. ಈ ಅಲಂಕಾರ ಭಕ್ತರ ಕುತೂಹಲದ ಕೇಂದ್ರಬಿಂದುವಾಗಿದೆ.
ಕರಾವಳಿಯ ಪುಣ್ಯಕ್ಷೇತ್ರ ಕಟೀಲಿನಲ್ಲಿ ದೇಶಭಕ್ತಿಯ ಮಹಾ ಹಬ್ಬವನ್ನು ಆಚರಿಸಲಾಯಿತು. ಹಿಂದೂ ಧಾರ್ಮಿಕ ಹಬ್ಬಗಳಂದು ವಿಶೇಷ ಕೈಂಕರ್ಯಗಳಿಂದ ಭಕ್ತರನ್ನು ಕೈಬೀಸಿ ಕರೆಯುವ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನವಾದ ಇಂದು ಈ ರೀತಿಯ ಆಕರ್ಷಣೆ ಭಕ್ತ ಸಮೂಹದ ಮೆಚ್ಚುಗೆಗೂ ಪಾತ್ರವಾಗಿದೆ.