ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ‘INDIA’ ಹೆಸರಿನಲ್ಲಿ ಒಕ್ಕೂಟ ರಚಿಸಿರುವಂತೆಯೇ, ಇನ್ನೊಂದೆಡೆ ದೇಶದ ಹೆಸರನ್ನು ‘ಭಾರತ’ ಎಂದು ಸ್ಪಷ್ಟ ನಾಮಕರಣ ಮಾಡಲು ಮೋದಿ ತಯಾರಿ ನಡೆಸಿದ್ದಾರೆ.
ಪ್ರಸ್ತುತ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ‘ಇಂಡಿಯಾ’ ಹೆಸರಲ್ಲೇ ಗುರುತಾಗಿದೆ. ಆದರೆ ದೇಶೀ ಭಾಷೆಗಳಲ್ಲಿ ‘ಭಾರತ’ ಎಂದು ಕರೆಯಲಾಗುತ್ತಿದೆ. ಬ್ರಿಟೀಷರ ಕಾಲದಲ್ಲಿ ಇದ್ದ ಬಹುತೇಕ ನಗರಗಳ ಹೆಸರುಗಳು ಸ್ವದೇಶೀ ಮೂಲ ಹೆಸರಿಗೆ ಮರುನಾಮಕರಣ ಆಗಿರುವಂತೆಯೇ ಇದೀಗ ದೇಶದ ಹೆಸರನ್ನೂ ಇಂಡಿಯಾ ಬದಲಿಗೆ ಭಾರತ ಎಂದು ಮರುನಾಮಕರಣ ಮಾಡಲು ಮೋದಿ ಸರ್ಕಾರ ಮುಂದಾಗಿದೆ.
‘ಭಾರತ’ ಎಂದು ಮರುನಾಮಕರಣ ಮಾಡುವ ಸಂಬಂಧ ಸಂಸತ್ತಿನಲ್ಲಿ ನಿರ್ಣಯ ಮಂಡಿಸುವ ತಯಾರಿ ನಡೆದಿದ್ದು, ಸೆಪ್ಟೆಂಬರ್ 18 ರಿಂದ ನಡೆಯುವ ಐದು ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.