ಬೆಂಗಳೂರು: ಕೋಟಿ ರೂಪಾಯಿ ಪಡೆದು ಟಿಕೆಟ್ ವಂಚನೆ ಆರೋಪಕ್ಕೆ ಗುರಿಯಾಗಿರುವ ಹಿಂದೂ ಭಾಷಣಗಾರ್ತಿ ಚಿತ್ರಾ ಕುಂದಾಪುರ ಇದೀಗ ಬಂಧನದಲ್ಲಿದ್ದು ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಂಧನ ಸಂದರ್ಭದಲ್ಲಿ ಆತ್ಮಹತ್ಯೆ ಯತ್ನದ ಪ್ರಹಸನ ಮಾಡಿದ್ದ ಚೈತ್ರಾ ಕುಂದಾಪುರ, ಸಿಸಿಬಿ ಕಸ್ಟಡಿಯಲ್ಲಿದ್ದಾಗಲೂ ತಮ್ಮ ಚಾಲಾಕಿ ವರ್ತನೆ ತೋರಿಸಿದ್ದಾರೆ.
ಟಿಕೆಟ್ ವಂಚನೆ ಆರೋಪ ಬಗ್ಗೆ ಮಾಧ್ಯಮಗಳು ಫೋಕಸ್ ಮಾಡುತ್ತಿದ್ದಂತೆಯೇ, ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ವಿಚಾರ ಪ್ರಸ್ತಾಪ ಮಾಡಿದ ಬೆಳವಣಿಗೆಯಿಂದ ಎಲ್ಲರ ಗಮನವನ್ನು ಬೇರೊಂದು ಕಡೆ ಸೆಳೆಯುವಂತಾಗಿದೆ. ಚೈತ್ರಾ ಸಿಡಿಸಿರುವ ‘ಇಂದಿರಾ ಕ್ಯಾಂಟೀನ್ ಬಿಲ್ ಬಾಂಬ್’ ವಿಚಾರವನ್ನೂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.
ಈ ನಡುವೆ, ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ವಿಚಾರವನ್ನು ಚೈತ್ರಾ ಕುಂದಾಪುರ ಅವರು ಯಾಕೆ ಪ್ರಸ್ತಾಪಿಸಿದ್ದಾರೆ ಎಂಬುದೇ ಕುತೂಹಲಕಾರಿ ಸಂಗತಿ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಂದಲೂ ಮಾಹಿತಿ ಪಡೆದಿರುವ ಇಂದಿರಾ ಕ್ಯಾಂಟೀನ್ ಬಿಲ್ ಬಾಕಿ ವಿಚಾರಕ್ಕೂ ಚೈತ್ರಾ ಕುಂದಾಪುರ ಪ್ರಕರಣಕ್ಕೂ ಸಂಬಂಧ ಇಲ್ಲ ಎಂಬುದನ್ನು ದೃಢಪಡಿಸಿದ್ದಾರೆ ಎನ್ನಲಾಗಿದೆ. ಇಂದಿರಾ ಕ್ಯಾಂಟಿನ್ ಬಿಲ್ ವಿಚಾರ, ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿವರ, ಗೋವಿಂದ ಪೂಜಾರಿ ಅವರ ಉದ್ಯಮ ವ್ಯವಹಾರ, ಅವರ ಕಂಪನಿಗೆ ಎಷ್ಟು ಹಣ ಬಿಡುಗಡೆಯಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಸಿಸಿಬಿ ಅಧಿಕಾರಿಗಳು ಕಲೆಹಾಕಿದ್ದಾರೆನ್ನಗಿದೆ.