ದೆಹಲಿ: ಕೆಲ ಸಮಯದ ಹಿಂದೆ ಫೇಗಾಸಿಸ್ ಹಗರಣ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿತ್ತು. ಇದೀಗ ಐ ಫೋನ್ ಕದ್ದಾಲಿಕೆ ಗುಮ್ಮಾ ಮತ್ತೊಮ್ಮೆ ರಾದಾಂತಕ್ಕೆ ಕಾರಣವಾಗಿದೆ. ‘ಸರ್ಕಾರಿ ಪ್ರಾಯೋಜಿತ ದಾಳಿಕೋರರು ತಮ್ಮ ಐಫೋನ್‌ಗಳಿಂದ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸೂಚಿಸುವ ಎಚ್ಚರಿಕೆ ಸಂದೇಶಗಳನ್ನು ಆ್ಯಪಲ್ ಕಂಪನಿಯಿಂದ ಸ್ವೀಕರಿಸಿರುವ ಬಗ್ಗೆ ವಿಪಕ್ಷಗಳ ಸಂಸದರು ಹೇಳಿಕೊಂಡಿದ್ದಾರೆ. ಈ ವಿಚಾರ ವಿವಾದದ ಸ್ವರೂಪ ತಾಳುತ್ತಿದ್ದಂತೆಯೇ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ.
ಸರ್ಕಾರಿ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್‌ಗಳನ್ನು ಹ್ಯಾಕ್ ಮಾಡಬಹುದು ಎಂದು ಆ್ಯಪಲ್ ಕಂಪನಿ ಮಂಗಳವಾರ ಪ್ರತಿಪಕ್ಷಗಳ ಐವರು ಸಂಸದರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ ಎನ್ನಲಾಗಿದೆ. ಈ ಬಗ್ಗೆ ಕೆಲವಯು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿದ್ದೆ ತಡ ದೇಶವ್ಯಾಪಿ ಆರೋಪ ಪ್ರತ್ಯಾರೋಪಗಳು ಕೇಳಿಬರಲಾರಂಭಿಸಿದೆ.
ಈ ಪ್ರಕರಣ ಕೇಂದ್ರ ಸರ್ಕಾರಕ್ಕೂ ಸವಾಲೆಂಬಂತಾಗಿದ್ದು, ಆರೋಪ ಕುರಿತಂತೆ ಸರ್ಕಾರ ತನಿಖೆಗೆ ಆದೇಶಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್, ‘ದೇಶದ ಎಲ್ಲಾ ನಾಗರಿಕರ ಗೌಪ್ಯತೆ ಮತ್ತು ಭದ್ರತೆಯನ್ನು ರಕ್ಷಿಸುವಲ್ಲಿ ಸರ್ಕಾರವು ಬದ್ಧವಾಗಿದೆ. ಈ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿಡೇ. ಹಾಗೂ ತನಿಖೆ ನಡೆಸುತ್ತದೆ’ ಎಂದು ಹೇಳಿದ್ದಾರೆ.
We are concerned by the statements we have seen in media from some MPs as well as others about a notification received by them from Apple. The notification received by them as per media reports mentions about ‘state-sponsored attacks’ on their devices. However much of (1/5)
— Ashwini Vaishnaw (मोदी का परिवार) (@AshwiniVaishnaw) October 31, 2023