ಅಹ್ಮದಾಬಾದ್: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಹೊರಹೊಮ್ಮಿದೆ. ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಟ್ರೋಫಿ ಎತ್ತಿ ಹಿಡಿದಿದ್ದು, 18 ವರ್ಷಗಳ ಕನಸನ್ನು ನನಸಾಗಿಸಿದೆ.
Moments he will never forget
Moments they will never forget
Virat Kohli
The #RCB faithful
#TATAIPL | #RCBvPBKS | #Final | #TheLastMile | @RCBTweets | @imVkohli pic.twitter.com/ObyJxRI0C0
— IndianPremierLeague (@IPL) June 3, 2025
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ RCB ತಮ್ಮ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಕಾದಾಟ ನಡೆಸಿ 6 ರನ್ಗಳ ಜಯ ಸಾಧಿಸಿದೆ. ಈ ಮೂಲಕ ಚೊಚ್ಚಲ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಈ ನಡುವೆ, IPL ಗೆದ್ದ ಆರ್ಸಿಬಿ ತಂಡ ಬಹುಮಾನದ ಮೊತ್ತವಾಗಿ 20 ಕೋಟಿ ರೂಪಾಯಿ ಪಡೆಯಲಿದೆ. ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡಕ್ಕೂ 13 ಕೋಟಿ ರೂಪಾಯಿ ಬಹುಮಾನವಾಗಿ ಸಿಗಲಿದೆ. ಅಷ್ಟೇ ಅಲ್ಲ, ಕ್ವಾಲಿಫೈಯರ್ ಪಂದ್ಯಗಳಲ್ಲಿ ಆಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ರೂ ಪಡೆಯಲಿದೆ. ಎಲಿಮಿನೇಟರ್ ಆಡಿದ ಗುಜರಾತ್ ಟೈಟನ್ಸ್ ತಂಡಕ್ಕೆ 6.5 ಕೋಟಿ ರೂಪಾಯಿ ಪುರಸ್ಕಾರ ನಿಗದಿಯಾಗಿದೆ.
𝘾𝙃𝘼𝙈𝙋𝙄𝙊𝙉𝙎!
@RCBTweets Captain Rajat Patidar collects the prestigious #TATAIPL Trophy from Mr. Jay Shah, Chairman, ICC and Mr. Roger Binny, President, BCCI
![]()
#RCBvPBKS | #Final | #TheLastMile | @JayShah | @ICC pic.twitter.com/UnhFg3QcW5
— IndianPremierLeague (@IPL) June 3, 2025