ಲಖನೌ: ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ರೋಚಕ ಘಟ್ಟ ತಲುಪಿದೆ. ಸೋಮವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಸೋಲುಂಡ ಲಕ್ನೋ ಸೂಪರ್ ಜೈಂಟ್ಸ್ (LSG) ಈ ಬಾರಿಯ ಐಪಿಎಲ್ ಕದನದಿಂದ ಹೊರಬಿದ್ದಿದೆ.
When Abhishek Sharma decided to make the ball fly 🚀
🎥 A glimpse of his onslaught during a blistering 59(20) 🔥
Updates ▶ https://t.co/GNnZh911Xr#TATAIPL | #LSGvSRH | @SunRisers pic.twitter.com/92w8j21Niw
— IndianPremierLeague (@IPL) May 19, 2025
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೋಮವಾರದ ಪಂದ್ಯದಲ್ಲಿನ ಗೆಲುವು ಅನಿವಾರ್ಯವಾಗಿತ್ತು. ಲಖನೌನ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ಬರೋಬ್ಬರಿ 205 ರನ್ ಕಲೆ ಹಾಕಿತು.ಈ ಗೆಲುವಿನ ಮೊತ್ತವನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಆರು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು.
Power. Precision. Partnership 🤝
🎥 Heinrich Klaasen & Kamindu Mendis aced the #SRH chase with a flurry of boundaries 👊
Scorecard ▶ https://t.co/GNnZh90u7T#TATAIPL | #LSGvSRH | @SunRisers pic.twitter.com/suBBfeN1qD
— IndianPremierLeague (@IPL) May 19, 2025
ಈ ಸೋಲಿನೊಂದಿಗೆ, LSG ತಂಡವು ಪ್ಲೇಆಫ್ ರೇಸ್‌ನಿಂದ ಹೊರಬಿತ್ತು. ಇದು ಎಲ್‌ಎಸ್‌ಜಿಯ 12 ಪಂದ್ಯಗಳಲ್ಲಿ ಏಳನೇ ಸೋಲು ಮತ್ತು ತಂಡವು 10 ಅಂಕಗಳೊಂದಿಗೆ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.