ಕದನ ವಿರಾಮ ಅಂತ್ಯ; ಗಾಜಾದಲ್ಲಿ ಸಂಘರ್ಷಕ್ಕೆ 175 ಮಂದಿ ಬಲಿ

ಗಾಜಾ: ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಸಮರ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕದನ ವಿರಾಮದ ಪ್ರಕ್ರಿಯೆಯ ನಡುವೆಯೇ ಹಮಾಸ್ ಉಗ್ರರ ಕಿತಾಪತಿ ಕೊನೆಗಾಣಿಸಲು ಇಸ್ರೇಲ್ ಸೇನೆ ಮತ್ತೆ ಸಮರದ ಅಖಾಡಕ್ಕೆ ಧುಮುಕಿದೆ. ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಒಂದು ವಾರಗಳ ತಾತ್ಕಾಲಿಕ ಕದನ ವಿರಾಮ ಅಂತ್ಯಗೊಳ್ಳುತ್ತಿದ್ದಂತೆಯೇ ಗಾಜಾದಲ್ಲಿ ಮತ್ತೆ ಘರ್ಷಣೆ ಭುಗಿಲೆದ್ದಿದೆ. ಹಮಾಸ್ ಉಗ್ರರ ಹಾವಳಿ ತಡೆಯಲು ಇಸ್ರೇಲ್ ಸೇನೆ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಮಾಹಿತಿಯನ್ನು ಹಂಚಿಕೊಳ್ಳದೇ ಹಮಾಸ್ ಉಗ್ರರು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಇಸ್ರೇಲ್ ಪಡೆ ಕಾರ್ಯಾಚರಣೆಗಿಳಿದೆ. ಇಸ್ರೇಲ್ ಮೇಲೆ ರಾಕೆಟ್ ಹಾರಿಸಿದೆ ಎಂದು ಆರೋಪಿಸಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.

Related posts