207.15 ಕೋಟಿ ರೂಪಾಯಿ ಆದಾಯ ಗಳಿಸಿದ “ಜೈಲರ್”

ರಜನಿಕಾಂತ್ ಅಭಿನಯದ “ಜೈಲರ್” ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಹೊಸ ದಾಖಲೆಗಳನ್ನು ಸ್ಥಾಪಿಸಿದೆ. ಸ್ವಾತಂತ್ರ್ಯ ದಿನದಂದು “ಜೈಲರ್” 33 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರವು ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ಸಾಧಿಸಿದ ₹ 200 ಕೋಟಿ ಮೈಲಿಗಲ್ಲನ್ನು ದಾಟಿದೆ.

ಶುಕ್ರವಾರ ₹ 25.75 ಕೋಟಿ, ಶನಿವಾರ ₹ 34.3 ಕೋಟಿ, ಭಾನುವಾರ ₹42.2 ಕೋಟಿ ರೂಪಾಯಿ ಗಳಿಸಿದ್ದ “ಜೈಲರ್”, ಸ್ವಾತಂತ್ರ್ಯ ದಿನದಂದು ಭರ್ಜರಿ ಚೇತರಿಕೆ ಕಂಡು ₹33 ಕೋಟಿ ಕಲೆಕ್ಷನ್ ಮಾಡಿದೆ. ಪ್ರದರ್ಶನ ಕಂಡ ಆರಂಭದ ಆರು ದಿನಗಳ ಅವಧಿಯಲ್ಲಿ ಭಾರತದ ಎಲ್ಲಾ ಭಾಷೆಗಳಿಗೆ ಚಿತ್ರ 207.15 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ.

 

Related posts