ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್ ಪ್ರಮಾಣ ವಚನ

ನವದೆಹಲಿ: ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವರಿಗೆ ಪ್ರಮಾಣವಚನ ಬೋಧಿಸಿದರು. ಸೂರ್ಯಕಾಂತ್ ಅವರು ಹಿಂದಿಯಲ್ಲಿ ದೇವರ ಹೆಸರಿನಿಂದ ಪ್ರಮಾಣವಚನ ಪಠಿಸಿದರು.

ಸಮಾರಂಭದಲ್ಲಿಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಚಿವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಭೂತಾನ್, ಕೀನ್ಯಾ, ಮಲೇಷ್ಯಾ, ಬ್ರೆಜಿಲ್, ಮಾರಿಷಸ್, ನೇಪಾಳ ಮತ್ತು ಶ್ರೀಲಂಕಾದ ಮುಖ್ಯ ನ್ಯಾಯಮೂರ್ತಿಗಳು ಹಾಜರಿದ್ದರು. ಹರಿಯಾಣ ಮುಖ್ಯಮಂತ್ರಿ ನೈಬ್ ಸಿಂಗ್ ಸೈನಿ ಕೂಡ ಸಮಾರಂಭಕ್ಕೆ ಹಾಜರಾಗಿದ್ದರು.

ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಅಧಿಕಾರಾವಧಿ ಸುಮಾರು 14 ತಿಂಗಳು. ಅವರು ಫೆಬ್ರವರಿ 9, 2027 ರಂದು ನಿವೃತ್ತಿಗೊಳ್ಳಲಿದ್ದಾರೆ.

ಇತ್ತೀಚೆಗೆ ಸಿಜೆಐ ಪೀಠವನ್ನು ಖಾಲಿ ಮಾಡಿರುವ ಭೂಷಣ್ ಆರ್. ಗವಾಯಿ ಅವರು ಅಕ್ಟೋಬರ್ 30ರಂದು ತಮ್ಮ ಉತ್ತರಾಧಿಕಾರಿಯಾಗಿ ಸೂರ್ಯಕಾಂತ್ ಅವರನ್ನು ಶಿಫಾರಸು ಮಾಡಿದ್ದರು. ನಂತರ ಕೇಂದ್ರ ಸರ್ಕಾರವು ಅವರ ನೇಮಕಕ್ಕೆ ಅನುಮೋದನೆ ನೀಡಿತ್ತು.

Related posts