‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

ನವದೆಹಲಿ: ಭಾರತೀಯ ರೈಲ್ವೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮ ಉಪಕ್ರಮವನ್ನು ಪರಿಚಯಿಸುವ “Karnataka Bharat Gaurav Train – Journey of a Thousand Shrines” ಎಂಬ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ.

ಈ ಪುಸ್ತಕವು ಕೇವಲ ರೈಲು ಸೇವೆಯ ದಾಖಲೆಯಲ್ಲ; ನಂಬಿಕೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ರೈಲ್ವೆ ಮೂಲಸೌಕರ್ಯಗಳ ಸಮನ್ವಯದ ಹಿಂದೆ ಇರುವ ದೃಷ್ಟಿ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಚಿತ್ರಿಸುತ್ತದೆ.

ಐಆರ್‌ಟಿಎಸ್ (ನಿವೃತ್ತ) ಡಾ. ಅನುಪ್ ದಯಾನಂದ ಅವರ ಪರಿಕಲ್ಪನೆಯಲ್ಲಿ ಪುಸ್ತಕ ಮೂಡಿ ಬಂದಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ರೈಲ್ವೆಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಶಂಕರ್ ವರ್ಮಾ, ಎನ್‌ಎಚ್‌ಎಂ ಹೆಚ್ಚುವರಿ ಸದಸ್ಯ ಕೆ.ಎಸ್. ಜೈನ್, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸಿಎಂಡಿ ಎಸ್.ಕೆ. ಜೈನ್ ಹಾಗೂ ಪ್ರವಾಸೋದ್ಯಮ ನಿರ್ದೇಶಕ ರಾಹುಲ್ ಹಿಮಾಲಯನ್ ಉಪಸ್ಥಿತರಿದ್ದರು.

ಭಾರತೀಯ ರೈಲ್ವೆ ‘ಭಾರತ್ ಗೌರವ್’ ಯೋಜನೆಯಡಿ ಕರ್ನಾಟಕದ 30,000ಕ್ಕೂ ಹೆಚ್ಚು ಭಕ್ತರು ಕಾಶಿ ಸೇರಿದಂತೆ ಪವಿತ್ರ ಕ್ಷೇತ್ರಗಳಿಗೆ ಕೈಗೆಟುಕುವ ದರದಲ್ಲಿ ಭೇಟಿ ನೀಡುವ ಅವಕಾಶ ಪಡೆದಿದ್ದಾರೆ. ರೈಲ್ವೆಗಳು ಸಾರಿಗೆ ವ್ಯವಸ್ಥೆಯಷ್ಟೇ ಅಲ್ಲ, ಭಕ್ತಿಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವುದು ವಿಶೇಷವೆಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

Related posts